ಬಾಗಲಕೋಟೆ | ಇಸ್ರೇಲ್‌ ತಂತ್ರಜ್ಞಾನ; ರೈತರಿಗೆ ಜಾಗೃತಿ ಮೂಡಿಸುವ ಮೂಲಕ ಟನ್‌ಗಟ್ಟಲೆ ಟೊಮೆಟೊ ಬೆಳೆದ ತೋಟಗಾರಿಕೆ ವಿವಿ

Date:

ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಕೆಜಿಗೆ ₹200 ದಾಟಿತ್ತು. ಆ ವೇಳೆ ರೈತರು ಟೊಮೆಟೊವನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯಬೇಕು ಎನ್ನುವುದನ್ನು ತೋರಿಸಿಕೊಡುವ ಉದ್ದೇಶದಿಂದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದವರು ಒಂದು ಎಕರೆಯಲ್ಲಿ ಟೊಮೆಟೊ ಬೆಳೆ ಬಿತ್ತನೆ ಮಾಡುವ ಮೂಲಕ ರೈತರಿಗೆ ತರಬೇತಿ ನೀಡಿದ್ದರು.

ತರಬೇತಿಗೆ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಯಿಂದ ಇದೀಗ 20 ಟನ್‌ ಟೊಮೆಟೊ ಫಸಲು ಬಂದಿದೆ. ಆದರೆ ಈಗ ಬೆಲೆ ಇಲ್ಲ. ಆದರೆ ಬೆಳೆದ ಟೊಮೆಟೊ ಕೊಳೆಯಲು ಬಿಡದೆ ಟೊಮೆಟೊ ಉಪ ಉತ್ಪನ್ನಗಳನ್ನು ಮಾಡಿದ್ದಾರೆ. ಇನ್ನೂ ಉಳಿದಿದ್ದನ್ನು ಉಚಿತವಾಗಿ ಬಾಗಲಕೋಟೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ.

ತರಕಾರಿ ಬೆಳೆಗಳು ಕೆಲವೊಮ್ಮೆ ಬಂಪರ್‌ ಬೆಲೆ ತಂದರೆ ಮತ್ತೆ ಕೆಲವು ಬಾರಿ ದರವೇ ಸಿಗದೆ ಬೀದಿಗೆ ಬಿದ್ದ ಉದಾಹರಣೆಗಳೂ ಇವೆ. ಇದರಿಂದ ಬಹುಪಾಲು ತೊಂದರೆಯಾಗುವುದು ರೈತರಿಗೆ. ಇಂತಹ ಸಂದರ್ಭದಲ್ಲಿ ಬೆಳೆಗಳನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯಬೇಕು, ಮಾರುಕಟ್ಟೆಯನ್ನು ರೂಪಿಸಿಕೊಳ್ಳುವುದು ಹೇಗೆ ಎನ್ನುವ ಕುರಿತು ರೈತರಿಗೆ ನಿಯಮಿತವಾಗಿ ತರಬೇತಿಗಳು ಬೇಕಾಗುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂತಹ ಉದ್ದೇಶದಿಂದಲೇ ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ರೈತರಿಗೆ ಟೊಮೆಟೊ ಬೆಳೆ ತರಬೇತಿ ಯೋಜನೆ ರೂಪಿಸಿತು. ಹದಿನೈದು ವರ್ಷದ ಇತಿಹಾಸ ಇರುವ ತೋಟಗಾರಿಕೆ ವಿಶ್ವವಿದ್ಯಾಲಯ ಇಪ್ಪತ್ತು ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಆಗಾಗ ವಿಸ್ತರಣಾ ಚಟುವಟಿಕೆ ರೂಪಿಸುತ್ತಲೇ ಬರುತ್ತಿದೆ.

ಜೂನ್‌ ಜುಲೈನಲ್ಲಿ ಟೊಮೆಟೊ ಬೆಳೆ ಗಗನಕ್ಕೇರಿತ್ತು. ಟೊಮೆಟೊ ಸಿಕ್ಕರೆ ಸಾಕು ಎಂದು ಎಷ್ಟೋ ಜನ ಕಡಿಮೆ ದರಕ್ಕೆ ವಿಚಾರಿಸುತ್ತಿದ್ದರೆ, ಬಹುತೇಕ ರೈತರು ನಾನೂ ಟೊಮೆಟೊ ಬೆಳೆದಿದ್ದರೆ ಚೆನ್ನಾಗಿತ್ತು ಎಂದು ಕೈ ಕೈ ಹಿಸುಕಿಕೊಂಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಬಿಟ್ಟರೆ ಬಹುತೇಕ ಎಲ್ಲ ಜಿಲ್ಲೆಗಳ ರೈತರ ಸ್ಥಿತಿಯೂ ಹೀಗೆಯೇ ಆಗಿತ್ತು.

ಈ ವೇಳೆಯನ್ನೇ ಬಳಸಿಕೊಂಡ ತೋಟಗಾರಿಕೆ ವಿಶ್ವವಿದ್ಯಾಲಯ ರೈತರಿಗೆ ಆಸಕ್ತಿ ಇರುವಾಗಲೇ ತರಬೇತಿ ಆಯೋಜಿಸಬೇಕು ಎಂದು ನಿರ್ಧರಿಸಿ, ಇಸ್ರೇಲ್‌ ಸೇರಿದಂತೆ ಹಲವು ದೇಶಗಳಿಗೆ ತರಬೇತಿಗೆಂದು ಹೋಗಿ ಬಂದಿರುವ ವಿಶ್ವವಿದ್ಯಾನಿಲಯದ ವಿಜ್ಞಾನಿಯೂ ಆಗಿರುವ ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಸೂಗೂರು ಅವರ ತಂಡ ರೈತರಿಗೆ ತಿಂಗಳ ತರಬೇತಿಯನ್ನು ರೂಪಿಸಿತು. ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಅದರಲ್ಲೂ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಗದಗ ಸೇರಿದಂತೆ ಹಲವು ಜಿಲ್ಲೆಗಳ ಆಯ್ದ ರೈತರನ್ನು ಆಯ್ದುಕೊಂಡು ತರಬೇತಿ ಆರಂಭಿಸಿತು.

ಬರೀ ಪಾಠದ ರೂಪದಲ್ಲಿರುವುದಕ್ಕಿಂತ ಪ್ರಾಯೋಗಿಕವಾಗಿ ತರಬೇತಿ ಇರಲಿ ಎಂದು ಬಾಗಲಕೋಟೆ ನವನಗರದಲ್ಲಿರುವ ಒಂದು ಎಕರೆ ಭೂಮಿಯನ್ನು ಅಣಿಗೊಳಿಸಿದರು.

ಒಂದು ಎಕರೆ ಭೂಮಿಯಲ್ಲಿ ಹೇಗೆ ಟೊಮೆಟೊ ಬೆಳೆಬಹುದು ಎನ್ನುವುದನ್ನು ತೋರಿಸಲು ಸುಮಾರು ಒಂದು ಲಕ್ಷ ರೂ. ವೆಚ್ಚ ಮಾಡಿ ಪುಟ್ಟ ಕಂಬಗಳು, ಅದಕ್ಕೆ ತಂತಿ ಅಳವಡಿಸಿದರು. ಟೊಮೆಟೊ ನೆಲಕ್ಕೆ ಬೀಳದಂತೆ ಆ ತಂತಿಗಳು ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟರು. ಮೊದಲು ಸಿಂಧು ಎನ್ನುವ ತಳಿಯ ಟೊಮೆಟೊ ಬಿತ್ತನೆ ಮಾಡಿದರು. ಇದು ಮೂರು ತಿಂಗಳ ಬೆಳೆಯಾಗಿದ್ದರಿಂದ ಬೆಳೆ ಬೆಳಯುವ ವಿಧಾನ, ಬಿತ್ತನೆ ಬೀಜ ಸಂಗ್ರಹ, ಉಳುಮೆಗೆ ಸಿದ್ದತೆ, ರಕ್ಷಣೆ, ನೀರಿನ ನಿರ್ವಹಣೆ, ನೀರಿನ ಬಾಷ್ಪೀಕರಣ, ಬೆಳೆ ಕೊಯ್ಲು ಕರಗುವ ಗೊಬ್ಬರ ಬಳಕೆ ಸಹಿತ ಹಲವು ಅಂಶಗಳನ್ನು ರೈತರಿಗೆ ತಿಳಿಸಿಕೊಡಲಾಯಿತು. ಇದರೊಟ್ಟಿಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡರೆ ಖರ್ಚು ತಗ್ಗಲಿದೆ. ಇಳುವರಿ ಹೆಚ್ಚಲಿದೆ. ಕೃಷಿಯೂ ಇನ್ನಷ್ಟು ವೃತ್ತಿಪರವಾಗಲಿದೆ ಎನ್ನುವ ಅಂಶಗಳನ್ನು ಇಸ್ರೇಲ್‌ ಸಹಿತ ಹಲವು ದೇಶಗಳ ಮಾದರಿಗಳನ್ನು ವಿವರಿಸಲಾಯಿತು. ತರಬೇತಿ ಪಡೆದ ರೈತರೂ ತರಗತಿ ಜತೆಗೆ ಪ್ರಾಯೋಗಿಕ ತರಬೇತಿಯಿಂದ ಖುಷಿಯಾಗಿದ್ದಾರೆ.

ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯೊಂದನ್ನು ಬೆಳೆದಿರಲಿಲ್ಲ. ಅದರಲ್ಲೂ ಭಾರೀ ಬೇಡಿಕೆಯಾಗಿದ್ದ ಟೊಮೆಟೊವನ್ನು ಬೆಳೆದು ತೋರಿಸಿದರೆ ಪರಿಣಾಮಕಾರಿಯಾಗಿರಲಿದೆ ಎಂದು ಪ್ರಯತ್ನಿಸಿದ್ದಕ್ಕೆ ಅದು ಫಲವನ್ನೂ ನೀಡಿತ್ತು. ಎರಡು ತಿಂಗಳು ಆಗುವ ಹೊತ್ತಿಗೆ ಉತ್ತಮ ಫಸಲು ಬಂದಿತು. ಈಗ ಬರೋಬ್ಬರಿ 20 ಟನ್‌ ಟೊಮೆಟೊ ಬಂದಿದ್ದು. ಇನ್ನೂ 10 ಟನ್‌ ಫಸಲು ದೊರೆಯುವ ನಿರೀಕ್ಷೆಯಿದೆ.

ಈಗಾಗಲೇ ಬೆಳೆ ಬರುವ ಹೊತ್ತಿಗೆ ದರವೂ ಕುಸಿದಿದೆ. ತೋಟಗಾರಿಕೆ ವಿಶ್ವವಿದ್ಯಾನಿಲಯ ಪ್ರಾಯೋಗಿಕವಾಗಿ ಇದನ್ನು ರೂಪಿಸಿದ್ದರಿಂದ ಟೊಮೆಟೊದಿಂದ ಜಾಮ್‌, ಜ್ಯೂಸ್‌ ಸಹಿತ ಇತರೆ ಉತ್ಪನ್ನಗಳ ತಯಾರಿಯ ತರಬೇತಿಯನ್ನೂ ನೀಡಲಾಯಿತು. ಬಾಗಲಕೋಟೆಯಲ್ಲಿರುವ ಹಲವು ವಿದ್ಯಾರ್ಥಿ ನಿಲಯಗಳಿಗೆ ಟೊಮೆಟೊ ಸರಬರಾಜಾಗಿದೆ.

“ನಮ್ಮ ಇಡೀ ಬೆಳೆ ಬೆಳೆಯಲು 45 ಸಾವಿರ ರೂ. ಸಾಕಾಗಿತ್ತು. ಆದರೆ ಕಬ್ಬಿಣದ ಕಂಬ, ತಂತಿ ಎಲ್ಲವನ್ನೂ ಅಳವಡಿಸಿದ್ದರಿಂದ ಒಂದು ಲಕ್ಷ ರೂ.ಗೆ ಖರ್ಚು ತಲುಪಿತು. ಟೊಮೆಟೊ 70 ದಿನಗಳ ಬೆಳೆ. ಅಂದರೆ ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿಯಾದರೂ ಬೆಳೆಯಬಹುದು. ಬೇಡಿಕೆ, ಮಾರುಕಟ್ಟೆ ಸ್ಥಿತಿಗತಿ ನೋಡಿಕೊಂಡು ರೈತರು ಬೆಳೆಯಬಹುದು. ಬೇಸಿಗೆಯಲ್ಲಿ ನೀರಿನ ಲಭ್ಯತೆ ಇಲ್ಲದೇ ಇರುವುದರಿಂದ ಇದರ ಬೆಳೆ ಕಷ್ಟ, ಬೇರೆ ಸಮಯದಲ್ಲಿ ಕಷ್ಟ ಆಗದು. ಮುಂದಿನ ಹತ್ತು ವರ್ಷದವರೆಗೂ ತರಬೇತಿ ನೀಡಬಹುದಾದ ವ್ಯವಸ್ಥೆಯನ್ನು ತೋಟಗಾರಿಕೆ ವಿವಿಯಲ್ಲಿ ಮಾಡಿದ್ದೇವೆ. ಈ ಪ್ರಯೋಗದಿಂದ ರೈತರೂ ಹಲವಾರು ವಿಷಯ ತಿಳಿದುಕೊಂಡಿದ್ದಾರೆ” ಎಂದು ತರಬೇತಿ ಉಸ್ತುವಾರಿ ಹೊತ್ತಿದ್ದ ಡಾ.ಪ್ರಸನ್ನ ಸೂಗೂರು ತಿಳಿಸಿದರು.

“ಇಸ್ರೇಲ್‌ನಲ್ಲಿ ತಂತ್ರಜ್ಞಾನ ಬಳಕೆ ಜತೆಗೆ ನೀರಿನ ಬಳಕೆಯನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಅಲ್ಲಿನ ರೈತರಿಗೆ ಮಾರುಕಟ್ಟೆಯ ವಾತಾವರಣದ ಅರಿವಿದೆ. ನಮ್ಮ ರೈತರಲ್ಲಿ ಇನ್ನೂ ಮಾರುಕಟ್ಟೆ, ತಂತ್ರಜ್ಞಾನ ಬಳಕೆ ಅಷ್ಟಾಗಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಈಗ ತರಬೇತಿ ನೀಡಿದ್ದು, ನಿರಂತರವಾಗಿ ಅವರನ್ನು ಉನ್ನತೀಕರಿಸುತ್ತೇವೆ” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕುರಿ/ದನಗಾಹಿಗಳ ರಕ್ಷಣೆಗೆ ಕಾಯ್ದೆ ರೂಪಿಸಲು ಮನವಿ

ಸ್ಥಳೀಯ ಪ್ರದೇಶಕ್ಕನುಗುಣವಾಗಿ ಆರಣ್ಯದಂಚಿನಲ್ಲಿ ಕುರಿ/ದನ ಮೇಯಿಸಲು ಅವಕಾಶ ಮಾಡಿಕೊಡುವ ಮೂಲಕ ಅರಣ್ಯಾಧಿಕಾರಿಗಳಿಂದ...

ಬಾಗಲಕೋಟೆ | ಪೀಠಾಧಿಪತಿ ಆಯ್ಕೆ ವಿವಾದ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆದು ಆಕ್ರೋಶ

ಬಾಗಲಕೋಟೆಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ...

ಬಾಗಲಕೋಟೆ | ಮಾತು ತಪ್ಪಿದ ಸಿಎಂ; ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಿಲ್ಲ ಅನುದಾನ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಫೆಬ್ರವರಿ 16ರಂದು ಮಂಡಿಸಿದ 2024-25ರ ಬಜೆಟ್ಟಿನಲ್ಲಿ 2014-15ರಲ್ಲಿ ತಾವೇ...

ಬಾಗಲಕೋಟೆ | ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಅನುದಾನ ಒದಗಿಸುವಂತೆ ಒತ್ತಾಯ

2014-15ರಲ್ಲಿ ರಾಜ್ಯ ಸರ್ಕಾರ ಬಾಗಲಕೋಟೆ ಜಿಲ್ಲೆಗೆ ಘೋಷಣೆ ಮಾಡಿರುವ ಸರ್ಕಾರಿ ವೈದ್ಯಕೀಯ...