ಬಾಗಲಕೋಟೆ ನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಕನಸನ್ನು ನನಸಾಗಿರುವುದು ದಿ. ಎಚ್ ವೈ ಮೇಟಿ ಅವರ ಶ್ರಮದಿಂದ. ಹಾಗಾಗಿ ಅವರ ಉಳಿದ ಕನಸುಗಳನ್ನು ನನಸಾಗಿಸಲು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಗೆಲ್ಲಿಸುವ ಮೂಲಕ ಗ್ಯಾರೆಂಟಿ ಸೇವೆಗೆ ಬೆಂಬಲ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಥಳೀಯರಲ್ಲಿ ಮನವಿ ಮಾಡಿದರು.
ನಗರದ ವಿವಿಧ ವಾರ್ಡ್‌ಗಳಲ್ಲಿ ಭಾನುವಾರ ಸಂಜೆ ನಡೆದ ಪ್ರಚಾರದಲ್ಲಿ ಮತಯಾಚಿಸಿ ಮಾತನಾಡಿದ ಅವರು, “ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಬಿಜೆಪಿಯವರಿಗೆ ಮನಸ್ಸಿರಲಿಲ್ಲ. ಈ ಭಾಗದ ಹಳ್ಳಿ ಜನತೆಗೆ ಆಧುನಿಕ ಆರೋಗ್ಯ ಸೇವೆಗಳು ದೊರೆಯಲಿ ಎಂಬ ಕಳಕಳಿಯಿಂದ ಮೇಟಿಯವರು ಈ ಕಾರ್ಯಕ್ಕೆ ಮುಂದಾದರು. ಅವರ ಕನಸು ನನಸಾಗಲು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿಯವರಿಗೆ ತಮ್ಮ ಮತ ನೀಡಬೇಕು” ಎಂದು ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಮುಖ್ಯ ವಕ್ತಾರ ಎ ಎನ್ ನಟರಾಜ ಗೌಡ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಆಲೂರು ತಾಂಡಾ, ಮಸ್ತಿಹಾಳ, ಚಿಕ್ಕಗುಳಬಾಳ, ಹಿರೇಗುಳಬಾಳ, ಮುತ್ತತ್ತಿ, ಗುಳಬಾಳ ತಾಂಡಾಗಳಲ್ಲಿ ಪ್ರಚಾರ ನಡೆಸಿದ ಅವರು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. ಬಸವಂತಪ್ಪ ಮೇಟಿ, ಬಲರಾಮ ಪವಾರ, ರುಕ್ಮಿಣಿ ಮೇಟಿ ಇತರರು ಇದ್ದರು.
“ತಂದೆಯಂತೆ ಹಳ್ಳಿ ಜನತೆಯ ಬಗ್ಗೆ ಅಪಾರ ಕಳಕಳಿ ಹೊಂದಿರುವ ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರನ್ನು ಬೆಂಬಲಿಸಬೇಕು” ಎಂದು ಸಚಿವ ಎಚ್ ಕೆ ಪಾಟೀಲ ಅವರು ಬೆನಕಟ್ಟಿ ಗ್ರಾಮಸ್ಥರಲ್ಲಿ ಮತಯಾಚಿಸಿದರು.
“ಗ್ರಾಮಗಳ ಅಭಿವೃದ್ಧಿಗೆ ದಿ. ಎಚ್ ವೈ ಮೇಟಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಪುತ್ರ ಉಮೇಶ ಮೇಟಿಯವರು ತಂದೆಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಪಣ ತೊಟ್ಟಿದ್ದಾರೆ. ಎಲ್ಲರೂ ಉಮೇಶ್ ಅವರಿಗೆ ಮತ ನೀಡಬೇಕು” ಎಂದು ಕೋರಿದರು.
ಶಾಸಕ ಜೆ ಟಿ ಪಾಟೀಲ ಮಾತನಾಡಿ, “ಎಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಉಮೇಶ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು” ಎಂದು ವಿನಂತಿಸಿದರು.
ನಗರದ ರೈಲ್ವೆ ಸ್ಟೇಷನ್, ಎಸ್‌ಸಿ ಕಾಲೊನಿ, ವಾಂಬೆ ಕಾಲೊನಿಗಳಲ್ಲಿ ಪ್ರಚಾರ ನಡೆಸಿದ ಸಚಿವ ಆರ್ ಬಿ ತಿಮ್ಮಾಪೂರ, ಗ್ಯಾರೆಂಟಿಗಳ ಮೂಲಕ ಬಡವರ ಮನೆ ಬಾಗಿಲಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ ಕಾಂಗ್ರೆಸ್‌ಗೆ ಮತ ನೀಡುವಂತೆ ವಿನಂತಿಸಿದರು. ಅಪಾರ ಅಭಿಮಾನಿಗಳೊಂದಿಗೆ ನೀರಲಕೇರಿ, ಭೈರಮಟ್ಟಿ ಗ್ರಾಮಗಳಲ್ಲೂ ಪ್ರಚಾರ ಕೈಗೊಂಡು ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಗಳನ್ನು ಗ್ರಾಮಸ್ಥರಿಗೆ ವಿವರಿಸಿ ಮತ ಯಾಚಿಸಿದರು.
ಬಾಗಲಕೋಟೆ ತಾಲೂಕಿನ ಹಂಡರಗಲ್ಲ, ಮಂಕಣಿ, ಮ್ಯಾಗೇರಿ, ಸುತಗುಂಡಾರ, ಬೆಣ್ಣೂರ, ಶಿರೂರ ಗ್ರಾಮಗಳಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಚಾರ ನಡೆಸಿ ಉಮೇಶ ಮೇಟಿ ಪರ ಮತ ಯಾಚಿಸಿದರು. ಪ್ರಚಾರ ಸಭೆಗೂ ಮುನ್ನ ಗ್ರಾಮಗಳ ಯುವಕರು ಶಾಸಕರನ್ನು ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಗೆ ರಾಜ್ಯ ವಕೀಲರ ಪರಿಷತ್ ಬೆಂಬಲ
ಎಸ್.ಆರ್.ಪಾಟೀಲ, ಉಮೇಶ ಮೇಟಿ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ ಹದ್ಲಿ, ಶಿವಕುಮಾರ ನಂದಿಕೋಲಮಠ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಾಯಕ್ಕ ಮೇಟಿ, ಮಲ್ಲಿಕಾರ್ಜುನ ಮೇಟಿ, ಆನಂದ ಜಿಗಜಿನ್ನಿ, ಸಂತೋಷ ಹೊಕ್ರಾಣಿ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಅಬ್ದುಲರಜಾಕ್ ಬೇನೂರ, ಜಾಫರ್ ಬೇಪಾರಿ, ಪ್ರೇಮಾ ಗರಸಂಗಿ, ಇಬ್ರಾಹಿಂ ಕಲಾದಗಿ, ಅಯೂಬಖಾನ್ ಪುಣೇಕರ್, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಮಮತಾ ಸುತಾರ, ಸುಧಾ ಪಾಟೀಲ, ಭರಮು ಪೂಜಾರಿ, ರಕ್ಷಿತಾ ಈಟಿ, ಕಲ್ಪನಾ ಮೇಟಿ, ಅನ್ನಪೂರ್ಣಾ ಗೂಗುಹಾಳ, ಮಾಜಿ ಸಚಿವ ಅಜಯಕುಮಾರ್ ಸರನಾಯಕ, ಗ್ರಾಮದ ಕಾಂಗ್ರೆಸ್ ಮುಖಂಡರು, ನಿಂಗಣ್ಣ ಕೋಟಿ, ಶರಣಪ್ಪ ಯಂಡಿಗೇರಿ, ಶಿವಾನಂದ ಅಫ್ಜಲಪೂರ, ವೀಣಾ ಕಾಶಪ್ಪನವರ, ಸಿದ್ದಪ್ಪ ಮೇಟಿ, ಯಲ್ಲಪ್ಪ ಮೇಟಿ, ಶಶಿಕಾಂತ ಪೂಜಾರ, ಶ್ರೀಕರ ದೇಸಾಯಿ, ಮಂಜುಳಾ ಕಮತಗಿ ಮತ್ತಿತರರು ಇದ್ದರು.




