ಬಾಗಲಕೋಟೆ | ದ್ಯಾರ್ಥಿಗಳ ಹೊಟ್ಟೆಗೆ ಸೇರಬೇಕಿದ್ದ ಗೋಧಿ ಹುಳುಪಾಲು; ಪಡಿತರ ದಾಸ್ತಾನಿನಲ್ಲಿ 195 ಕ್ವಿಂಟಲ್ ಅಕ್ಕಿ ಕೊರತೆ

Date:

ಜಿಲ್ಲೆಯ ವಿವಿಧೆಡೆ ಕರ್ನಾಟಕ ರಾಜ್ಯ ಆಹಾರ ಆಯೋಗ ಕೈಗೊಂಡ ಪರಿಶೀಲನೆಯಲ್ಲಿ ಪಡಿತರ ದಾಸ್ತಾನು, ಸಗಟು ಗೋಡೌನ್ ನಿರ್ವಹಣೆ, ಅನ್ನಭಾಗ್ಯ ಯೋಜನೆಯ ನ್ಯಾಯಬೆಲೆ ಅಂಗಡಿಗಳ ಕಾರ್ಯವೈಖರಿ ಹಾಗೂ ವಿದ್ಯಾರ್ಥಿ ನಿಲಯಗಳ ಆಹಾರ ವ್ಯವಸ್ಥೆಯಲ್ಲಿ ಗಂಭೀರ ಲೋಪದೋಷಗಳು ಬೆಳಕಿಗೆ ಬಂದಿವೆ.

- Advertisement -

ವಿದ್ಯಾರ್ಥಿ ನಿಲಯಗಳಿಗೆ ವಿತರಿಸಬೇಕಿದ್ದ 2 ಸಾವಿರ ಕ್ವಿಂಟಲ್ ಗೋಧಿ ವಿತರಣೆಯಾಗದೆ ಹುಳು ಹಿಡಿದಿರುವುದು ಹಾಗೂ ದಾಸ್ತಾನು ದಾಖಲೆಗಳಿಗೂ ಭೌತಿಕ ದಾಸ್ತಾನಿಗೂ ವ್ಯತ್ಯಾಸ ಕಂಡುಬಂದಿರುವುದು ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ನೇತೃತ್ವದ ತಂಡ ಬಾಗಲಕೋಟೆ ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಟಿಎಪಿಎಂಎಸ್ ಸಗಟು ಗೋಡೌನ್ ಪರಿಶೀಲಿಸಿದಾಗ ಸ್ವಚ್ಛತೆಯ ಕೊರತೆ, ಒಡೆದ ನೆಲಹಾಸು, ಅಸಮರ್ಪಕ ಧಾನ್ಯ ಸಂಗ್ರಹಣೆ ಹಾಗೂ ಇಲಿಗಳು, ಪಕ್ಷಿಗಳು, ಕೀಟಗಳು ಮತ್ತು ಬೆಂಕಿಯಿಂದ ಧಾನ್ಯ ರಕ್ಷಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡುಬಂದಿದೆ.

195 ಕ್ವಿಂಟಲ್ ಅಕ್ಕಿ ಕೊರತೆ ಪತ್ತೆ

ಗೋಡೌನ್‌ನಲ್ಲಿನ ದಾಸ್ತಾನು ಪರಿಶೀಲನೆ ವೇಳೆ ತಂತ್ರಾಂಶದ ಪ್ರಕಾರ 8,814.92 ಕ್ವಿಂಟಲ್ ಅಕ್ಕಿ ಇರಬೇಕಾಗಿತ್ತು. ಆದರೆ ಭೌತಿಕ ಪರಿಶೀಲನೆಯಲ್ಲಿ 8,619.82 ಕ್ವಿಂಟಲ್ ಅಕ್ಕಿ ಮಾತ್ರ ಪತ್ತೆಯಾಗಿದ್ದು, 195.10 ಕ್ವಿಂಟಲ್ ಅಕ್ಕಿ ಕೊರತೆ ಕಂಡುಬಂದಿದೆ. ಈ ವ್ಯತ್ಯಾಸದ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷರು ಸೂಚಿಸಿದರು.

ಇದಲ್ಲದೆ, ವಿದ್ಯಾರ್ಥಿ ನಿಲಯಗಳಿಗೆ ವಿತರಿಸಬೇಕಿದ್ದ ಸುಮಾರು 2 ಸಾವಿರ ಕ್ವಿಂಟಲ್ ಗೋಧಿ ವಿತರಣೆಯಾಗದೆ ಹುಳು ಹಿಡಿದಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಆಹಾರಕ್ಕಾಗಿ ಮೀಸಲಿಟ್ಟ ಧಾನ್ಯವೇ ಸಮರ್ಪಕವಾಗಿ ವಿತರಣೆಯಾಗದೆ ಹಾಳಾಗಿರುವುದು ಅಧಿಕಾರಿಗಳ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.

ಕಳಪೆ ತೊಗರಿಬೇಳೆ, ದಾಖಲೆಗಳಲ್ಲೂ ವ್ಯತ್ಯಾಸ
ಬೀಳಗಿ ತಾಲೂಕಿನಲ್ಲಿ ಆಯೋಗದ ಸದಸ್ಯರಾದ ಮಾರುತಿ ದೊಡ್ಡಲಿಂಗಪ್ಪಣವರ ಹಾಗೂ ವಿಜಯಲಕ್ಷ್ಮಿ ಕೆ. ಅವರು ಪಿಕೆಪಿಎಸ್ ಮಳಿಗೆ ಸೇರಿದಂತೆ ವಿವಿಧ ಪಡಿತರ ಕೇಂದ್ರಗಳನ್ನು ಪರಿಶೀಲಿಸಿದರು.

ಕೆಎಫ್‌ಸಿಎಸ್‌ಸಿ ಮಳಿಗೆಯ ಪರಿಶೀಲನೆ ವೇಳೆ ಧಾನ್ಯ ಸಂಗ್ರಹಣೆಗೆ ಯೋಗ್ಯವಲ್ಲದ ಹಳೆಯ ಕಟ್ಟಡ, ಸ್ವಚ್ಛತೆಯ ಕೊರತೆ ಹಾಗೂ ಹುಳು ಹಿಡಿದ ತೊಗರಿಬೇಳೆ ಪತ್ತೆಯಾಗಿದೆ. ಕಳಪೆ ಗುಣಮಟ್ಟದ ತೊಗರಿಬೇಳೆಯನ್ನು ವಾಪಸ್ ಕಳುಹಿಸಿ, ಗುಣಮಟ್ಟದ ಬೇಳೆ ಪಡೆಯುವಂತೆ ಸೂಚಿಸಲಾಯಿತು.
ಇನ್ನು, 35 ಚೀಲ ಅಕ್ಕಿ ಸೀಜ್ ಮಾಡಿದ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿರುವ ಚೀಲಗಳ ಸಂಖ್ಯೆ ಹಾಗೂ ಭೌತಿಕ ದಾಸ್ತಾನಿನ ನಡುವೆ ಎಂಟು ಚೀಲಗಳ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದಾಸ್ತಾನು ಮತ್ತು ಸಂಬಂಧಿತ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಅನ್ನಭಾಗ್ಯ ಅಂಗಡಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು
ಅನ್ನಭಾಗ್ಯ ಯೋಜನೆಯ ನ್ಯಾಯಬೆಲೆ ಅಂಗಡಿಗಳ ಪರಿಶೀಲನೆಯಲ್ಲಿ ದಾಸ್ತಾನು ವ್ಯತ್ಯಾಸ, ಗ್ರಾಹಕರಿಗೆ ರಸೀದಿ ನೀಡದಿರುವುದು ಹಾಗೂ ಆಹಾರಧಾನ್ಯ ವಿತರಣೆಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಕಂಡುಬಂದಿದೆ.

ಮತ್ತೊಂದು ನ್ಯಾಯಬೆಲೆ ಅಂಗಡಿ ಸಂಜೆ ವೇಳೆಯಲ್ಲಿಯೂ ಮುಚ್ಚಿರುವುದು ಪತ್ತೆಯಾಗಿದೆ. ಇದರಿಂದ ಪಡಿತರ ಪಡೆಯಲು ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಲೋಪಗಳು ಕಂಡುಬಂದ ಅಂಗಡಿಗಳ ಪ್ರಾಧಿಕಾರ ಹಾಗೂ ಪರವಾನಗಿ ರದ್ದತಿಗೆ ಶಿಫಾರಸು ಮಾಡಿದೆ.
ವಸತಿ ಶಾಲೆಯ ಊಟದ ಗುಣಮಟ್ಟಕ್ಕೂ ಆಕ್ಷೇಪ
ಬೀಳಗಿ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆ ಕುರಿತು ಹಲವು ದೂರುಗಳು ಕೇಳಿಬಂದಿವೆ.

ಸಾಂಬಾರು ಮತ್ತು ಪಲ್ಯ ರುಚಿಯಾಗಿಲ್ಲ, ಅಡುಗೆಮನೆ ಸ್ವಚ್ಛವಾಗಿಲ್ಲ, ಅಡುಗೆ ಸಿಬ್ಬಂದಿ ಏಪ್ರಾನ್ ಹಾಗೂ ತಲೆಕವಚ ಧರಿಸುತ್ತಿಲ್ಲ ಮತ್ತು ಬಿಸಿ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಅಲ್ಲದೆ, ಪಡಿತರ ಹಾಗೂ ತರಕಾರಿ ಸ್ವೀಕಾರ ಪ್ರಕ್ರಿಯೆಯಲ್ಲಿಯೂ ನಿಯಮಗಳ ಪಾಲನೆ ಕೊರತೆಯಾಗಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಒದಗಿಸುವಂತೆ ಶಾಲೆಯ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

ಪರಿಶೀಲನೆ ವೇಳೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಆಹಾರ ನಿರೀಕ್ಷಕ ಮಹಾಂತೇಶ ಗೌಡರ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಜನರಿಗೆ ತಲುಪಬೇಕಾದ ಪಡಿತರ ಧಾನ್ಯಗಳು ವಿತರಣೆಯಾಗದೆ ಹಾಳಾಗುವುದು, ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬರುವುದು ಹಾಗೂ ವಿದ್ಯಾರ್ಥಿಗಳ ಆಹಾರ ವ್ಯವಸ್ಥೆಯಲ್ಲಿಯೇ ಲೋಪಗಳು ಕಾಣಿಸಿಕೊಳ್ಳುವುದು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಿದೆ. ಪರಿಶೀಲನೆಯಲ್ಲಿ ಪತ್ತೆಯಾದ ಲೋಪಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮೊದಲು ಶಾಸಕರಿಗೆ ಗೌರವ ಕೊಡುವುದನ್ನು ಕಲಿಯಿರಿ: ಹೆಚ್. ಡಿ ರೇವಣ್ಣ 

ಜಿಲ್ಲಾಧಿಕಾರಿ ಲತಾ ಕುಮಾರಿ ಬಗ್ಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮತ್ತೊಮ್ಮೆ ಕಿಡಿಕಾರಿದ್ದಾರೆ....

ಹಾಸನ | ಕೆನರಾ ಬ್ಯಾಂಕ್ ಶಾಖೆ: ₹2.5 ಕೋಟಿ ಹಣಕಾಸಿನ ವಂಚನೆ ಆರೋಪ

ಅರಸೀಕೆರೆ ತಾಲ್ಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸುಮಾರು...

ಚಿಕ್ಕಮಗಳೂರು | ಯುವಪೀಳಿಗೆ ರಾಮಾಯಣ ಮಹಾಕಾವ್ಯವನ್ನು ಓದಬೇಕು; ಶಾಸಕ ಜಿ.ಎಚ್  ಶ್ರೀನಿವಾಸ್

ತರೀಕೆರೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಮತ್ತು...

ಚಿಕ್ಕಮಗಳೂರು | ₹266 ಕೋಟಿ ಬೆಳೆವಿಮೆ ರೈತರಿಗೆ ನೀಡಲಾಗಿದೆ; ಜಿ.ಭಂವರ್ ಸಿಂಗ್ ಮೀನಾ

2025-26ನೇ ಸಾಲಿನಲ್ಲಿ ಬೆಳೆವಿಮೆ ಪಾವತಿಸಿದ ರೈತರಿಗೆ ₹266 ಕೋಟಿ ವಿಮಾ ಮೊತ್ತ...