ಇಳಕಲ್ | ಗೊರಬಾಳ ಗ್ರಾಪಂನಲ್ಲಿ ಭ್ರಷ್ಟಾಚಾರ ಆರೋಪ; ತನಿಖೆಗೆ ಒತ್ತಾಯ

Date:

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮ ಪಂಚಾಯತ್‌ನಲ್ಲಿ 15ನೇ ಹಣಕಾಸು ನಿಧಿಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಗಂಭೀರ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ. 2023-24, 2024-25 ಹಾಗೂ 2025-26ನೇ ಆರ್ಥಿಕ ವರ್ಷಗಳಲ್ಲಿ ನಡೆದ ಕಾಮಗಾರಿಗಳ ಹೆಸರಿನಲ್ಲಿ ನಕಲಿ GPS ಫೋಟೋಗಳನ್ನು ಅಪ್ಲೋಡ್ ಮಾಡಿ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದೇವರಾಜ ವನಗೇರಿ ಪಂಚಾಯತ್ ರಾಜ್ಯ ಆಯುಕ್ತರಿಗೆ ದೂರು ನೀಡಿದ್ದಾರೆ.

- Advertisement -

ಸರ್ಕಾರದ ಅನುದಾನ ಬಿಡುಗಡೆಗಾಗಿ ಸಲ್ಲಿಸಲಾದ GPS ಫೋಟೋಗಳನ್ನು ಪರಿಶೀಲಿಸಿದಾಗ, ಅವು ನಿಜವಾದ ಕಾಮಗಾರಿಗಳ ಚಿತ್ರಗಳಲ್ಲದೇ ಖಾಲಿ ಬಿಳಿ ಹಾಳೆಗಳ ಫೋಟೋಗಳನ್ನು GPS ಫೋಟೋ ಅಪ್ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಸರ್ಕಾರವನ್ನು ತಪ್ಪು ದಾರಿಗೆಳೆದು ಅನುದಾನ ಪಡೆಯಲು ಉದ್ದೇಶಪೂರ್ವಕವಾಗಿ ಮಾಡಿರುವ ಗಂಭೀರ ಅಕ್ರಮವಾಗಿದೆ.
ಸರ್ಕಾರದ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕಾದಲ್ಲಿ, ಕೆಲ ಅಧಿಕಾರಿಗಳು ಕೇವಲ ಕಾಗದದ ಮೇಲೆಯೇ ಕೆಲಸಗಳನ್ನು ತೋರಿಸಿ ಹಣ ದುರ್ಬಳಕೆ ಮಾಡುತ್ತಿರುವುದು ಗ್ರಾಮೀಣಾಭಿವೃದ್ಧಿ ವ್ಯವಸ್ಥೆಗೆ ಕಳಂಕ ತರುವಂತಹ ಸಂಗತಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

ಈ ಸಂಬಂಧ ಈಗಾಗಲೇ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ತಕ್ಷಣವೇ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ನಕಲಿ GPS ಫೋಟೋಗಳನ್ನು ಸಲ್ಲಿಸಿ ಅನುದಾನ ಪಡೆದಿರುವ ಸಂಬಂಧಿತ PDO ಹಾಗೂ ಇತರ ಜವಾಬ್ದಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ | ಗಬ್ಬೆದ್ದ ಮೂತ್ರಾಲಯಗಳು; ಸಾರ್ವಜನಿಕ ಅಸಮಾಧಾನ, ನಗರಸಭೆ ಮೌನ

ಸರ್ಕಾರದ ಹಣ ಜನರ ಅಭಿವೃದ್ಧಿಗೆ ಬಳಕೆಯಾಗಬೇಕೇ ಹೊರತು, ನಕಲಿ ದಾಖಲೆಗಳ ಮೂಲಕ ದುರ್ಬಳಕೆ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಡಿಸಿಸಿ ಬ್ಯಾಂಕ್‌ ದುರಾಡಳಿತದ ವಿರುದ್ಧ ಹೋರಾಟಕ್ಕೆ ರೈತ ಮುಖಂಡ ಯಲ್ಲಪ್ಪ ಹೆಗಡೆ ಕರೆ

ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ದುರಾಡಳಿತದ...

ಬಾಗಲಕೋಟೆ | ಕೆಪಿಎಸ್ ಶಾಲೆಗೆ ಡಿಸಿ, ಜಿಪಂ ಸಿಇಒ ಭೇಟಿ; ಮೂಲಸೌಕರ್ಯ ಪರಿಶೀಲನೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರೇಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ...

ಬೀಳಗಿ | ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಬಿತ್ತಿದ ಬೆಳೆಗಳನ್ನು...

ಬಾಗಲಕೋಟೆ | ಶ್ರಮಿಕ ಭೋವಿಗರಿಗೆ ಕಿರುಕುಳ ನೀಡದಿರಿ: ಅಧಿಕಾರಿಗಳಿಗೆ ರಾಮಪ್ಪ ಎಂ ಸೂಚನೆ

ಕುಲಕಸುಬಾಗಿ ತಲೆತಲಾಂತರಗಳಿಂದ ಕೈಯಿಂದ ಕಲ್ಲು ಒಡೆಯುವ ಮೂಲಕ ಜೀವನ ನಡೆಸುತ್ತಿರುವ ಶ್ರಮಿಕ...