ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆ ರದ್ದತಿಯತ್ತ ರಾಜ್ಯ ಸರ್ಕಾರದ ಹೆಜ್ಜೆ

Date:

ಈ ಕಾಯ್ದೆಯ ರಚನಾ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳಿದ್ದವು ಎಂಬುದು ಹಳೆಯ ಸರ್ಕಾರಿ ದಾಖಲೆಗಳಿಂದಲೇ ಸಾಬೀತಾಗಿದೆ. 2022ರಲ್ಲಿ ಸುಗ್ರೀವಾಜ್ಞೆ ಹಾಗೂ ಮಸೂದೆಗೆ ಸಂಪುಟದ ಅನುಮೋದನೆ ಪಡೆಯುವ ಮುನ್ನವೇ ರಾಜ್ಯ ಕಾನೂನು ಇಲಾಖೆಯು ಇದರ ಹಲವು ಅಂಶಗಳ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿತ್ತು ಎಂಬ ಸಂಗತಿ ಆರ್‌ಟಿಐ ದಾಖಲೆಗಳಿಂದ ತಿಳಿದುಬಂದಿದೆ. ಕಾಯ್ದೆಯ ಹಲವು ಸೆಕ್ಷನ್‌ಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ ಮತ್ತು ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಎದುರಿಸಬೇಕಾಗಬಹುದು ಎಂದು ಇಲಾಖೆ ಎಚ್ಚರಿಸಿತ್ತು

- Advertisement -

ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ, ಪರ ಮತ್ತು ವಿರೋಧದ ವಾದ-ವಿವಾದಗಳಿಗೆ, ಹಾಗೂ ಸೈದ್ಧಾಂತಿಕ ಸಂಘರ್ಷಕ್ಕೆ ಗ್ರಾಸವಾಗಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ– 2022’ (ಮತಾಂತರ ನಿಷೇಧ ಕಾಯ್ದೆ) ರದ್ದತಿಯ ಕೂಗು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ನವೆಂಬರ್ 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಸ್ಪಷ್ಟ ಭರವಸೆ ನೀಡಿದ್ದಾರೆ. ಅಲ್ಪಸಂಖ್ಯಾತ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಸಿದ್ಧತೆ ನಡೆಸುತ್ತಿದೆ ಎಂಬುದನ್ನು ಇತ್ತೀಚಿನ ಈ ಬೆಳವಣಿಗೆಗಳು ದೃಢಪಡಿಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಕ್ಕೆ ಕಾರಣ ಯಾರು?

ಮಲೆನಾಡಿನ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ, ಈಗ ಚರ್ಚೆಯ ಕೇಂದ್ರವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಸೇವೆಗಳು ನಿರಂತರವಾಗಿ ಮುಂದುವರಿಯಬೇಕೆಂಬುದು ಮಲೆನಾಡಿನ ಜನರ ನಿರೀಕ್ಷೆ. ಆದರೆ,...

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ...

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ ನಾದದಲ್ಲಿ ಉಳಿದು ಬಂದ ತತ್ವ. ಜನಸಾಮಾನ್ಯರ ಬದುಕು, ಸಾಮಾಜಿಕ ಅಸಮಾನತೆ ಮತ್ತು ಮಾನವ ಘನತೆಯ ಪ್ರಶ್ನೆಗಳನ್ನು ಜನರ ಮುಂದಿಟ್ಟ ಪರಂಜ್ಯೋತಿ...

ವಾಸ್ತವದಲ್ಲಿ, ಈ ಕಾಯ್ದೆಯನ್ನು ರದ್ದುಪಡಿಸುವ ಪ್ರಕ್ರಿಯೆ ಇಂದಿನದಲ್ಲ. 2023ರ ಜೂನ್‌ 15ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟವು ಈ ಕಾಯ್ದೆಯನ್ನು ರದ್ದುಪಡಿಸುವ ಮಹತ್ವದ ತೀರ್ಮಾನ ಕೈಗೊಂಡಿತ್ತು. ಆದರೆ, ಆ ಸಂದರ್ಭದಲ್ಲಿ ಆಡಳಿತ ಪಕ್ಷಕ್ಕೆ ವಿಧಾನಪರಿಷತ್ತಿನಲ್ಲಿ ಮಸೂದೆ ಅಂಗೀಕರಿಸಲು ಅಗತ್ಯವಿದ್ದ ಸಂಖ್ಯಾಬಲ ಇರಲಿಲ್ಲ. ಹೀಗಾಗಿ, ತದನಂತರದ ಅಧಿವೇಶನಗಳಲ್ಲಿ ಅಧಿಕೃತವಾಗಿ ರದ್ದತಿ ಮಸೂದೆ ಮಂಡನೆಯಾಗದೆ ಮುಂದೂಡಲ್ಪಟ್ಟಿತ್ತು. ಇದೀಗ ಪ್ರಸ್ತುತ ಮೇಲ್ಮನೆಯಲ್ಲಿ (ವಿಧಾನಪರಿಷತ್ತು) ಸರ್ಕಾರದ ಸಂಖ್ಯಾಬಲ ಹೆಚ್ಚಾಗಿರುವ ಕಾರಣ ಮತ್ತು ರಾಜಕೀಯ ಲೆಕ್ಕಾಚಾರಗಳು ಆಡಳಿತ ಪಕ್ಷದ ಪರವಾಗಿ ಬದಲಾಗಿರುವುದರಿಂದ, ಮೂರು ವರ್ಷಗಳ ಬಳಿಕ ಕಾಯ್ದೆ ರದ್ದತಿಯ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ. ಸಂಖ್ಯಾಬಲದ ಕೊರತೆಯ ಆತಂಕ ನಿವಾರಣೆಯಾಗಿರುವುದರಿಂದ ಸರ್ಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿದ್ದರಾಮಯ್ಯ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ 2ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಈ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸುತ್ತದೆಯೇ (Repeal) ಅಥವಾ ಕಾಯ್ದೆಯಲ್ಲಿರುವ ಕಠಿಣ ಹಾಗೂ ವಿವಾದಾತ್ಮಕ ವಿಧಿಗಳನ್ನು (Sections) ಮಾತ್ರ ತೆಗೆದುಹಾಕಿ ತಿದ್ದುಪಡಿ (Amendment) ಮಾಡುತ್ತದೆಯೇ ಎಂಬುದು ಮಂಡನೆಯಾಗಲಿರುವ ಅಧಿಕೃತ ಮಸೂದೆಯ ಸ್ವರೂಪದಿಂದಷ್ಟೇ ಸ್ಪಷ್ಟವಾಗಬೇಕಿದೆ. ಅಲ್ಪಸಂಖ್ಯಾತ ಸಂಘಟನೆಗಳು ಕಾಯ್ದೆಯ ಸಂಪೂರ್ಣ ರದ್ದತಿಗೆ ಪಟ್ಟು ಹಿಡಿದಿದ್ದರೆ, ಕಾನೂನು ತಜ್ಞರ ಒಂದು ವರ್ಗವು ಕೇವಲ ವಿವಾದಿತ ಅಂಶಗಳನ್ನು ಮಾರ್ಪಡಿಸುವ ಸಾಧ್ಯತೆಗಳ ಬಗ್ಗೆಯೂ ಒಲವು ತೋರುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಈ ಕಾನೂನು, 2022ರ ಸೆಪ್ಟೆಂಬರ್‌ 30ರಂದು ರಾಜ್ಯಪತ್ರದಲ್ಲಿ ಪ್ರಕಟಗೊಂಡಿದ್ದು, 2022ರ ಮೇ 17ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಲ್ಲಿದೆ.

ಈ ಕಾಯ್ದೆಯು ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳನ್ನು ಗುರಿಯಾಗಿಸಿ ಕಿರುಕುಳ ನೀಡುವ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂಬುದು ಅತಿ ದೊಡ್ಡ ವಿವಾದವಾಗಿದೆ. ಕಾಯ್ದೆಯ ಸೆಕ್ಷನ್ 5ರ ಅಡಿ ಸಾಮಾನ್ಯ ಪ್ರಕರಣಗಳಲ್ಲಿ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ ₹25,000 ದಂಡ ವಿಧಿಸಲು ಅವಕಾಶವಿದೆ. ಆದರೆ, ಶೋಷಿತ ಸಮುದಾಯಗಳಿಗೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣವನ್ನು ದುಪ್ಪಟ್ಟು ಮಾಡಲಾಗಿದೆ. ಅಪ್ರಾಪ್ತರು, ಮಹಿಳೆಯರು, ಮಾನಸಿಕ ಅಸ್ವಸ್ಥರು ಅಥವಾ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ ವ್ಯಕ್ತಿಗಳನ್ನು ಮತಾಂತರ ಮಾಡಿದರೆ ಶಿಕ್ಷೆಯ ಪ್ರಮಾಣವು 3 ರಿಂದ 10 ವರ್ಷಗಳವರೆಗೆ ಏರಿಕೆಯಾಗಲಿದೆ, ಜೊತೆಗೆ ದಂಡದ ಮೊತ್ತವು ₹50,000 ಇರಲಿದೆ.

ಸಾಮೂಹಿಕ ಮತಾಂತರ, ಅಂದರೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಏಕಕಾಲದಲ್ಲಿ ಮತಾಂತರ ಮಾಡುವ ಪ್ರಕರಣಗಳಲ್ಲಿ 3 ರಿಂದ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಬರೋಬ್ಬರಿ ₹1 ಲಕ್ಷ ದಂಡ ವಿಧಿಸುವ ನಿಬಂಧನೆಗಳು ಈ ಕಾನೂನಿನಲ್ಲಿವೆ. ಈ ಕಠಿಣ ನಿಯಮಗಳನ್ನು ದುರ್ಬಳಕೆ ಮಾಡಿಕೊಂಡು, ದಲಿತರು ಮತ್ತು ಅಲ್ಪಸಂಖ್ಯಾತರ ಧಾರ್ಮಿಕ ಪ್ರಾರ್ಥನೆಗಳು ಹಾಗೂ ಸಭೆಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ‘ಸಾಮೂಹಿಕ ಮತಾಂತರ’ ಎಂದು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ದಲಿತಪರ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ನಿರಂತರವಾಗಿ ಮಾಡುತ್ತಿವೆ. ಇದು ಶೋಷಿತ ಸಮುದಾಯಗಳಲ್ಲಿ ತೀವ್ರ ಅಭದ್ರತೆ ಮತ್ತು ಭೀತಿಯನ್ನು ಹುಟ್ಟುಹಾಕಿದೆ.

dks dk shivakumar2

ವಿವಾದಿತ ಕಾಯ್ದೆಯು ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳಲು ಬಯಸುವವರಿಗೂ ಕಾಯ್ದೆಯ ಸೆಕ್ಷನ್ 8 ಮತ್ತು 9ರ ಅಡಿ ಸುದೀರ್ಘ ಹಾಗೂ ಸಂಕೀರ್ಣ ಪ್ರಕ್ರಿಯೆಗಳನ್ನು ಕಡ್ಡಾಯಗೊಳಿಸಲಾಗಿದೆ. ಮತಾಂತರಗೊಳ್ಳಲು ಇಚ್ಛಿಸುವ ಯಾವುದೇ ವ್ಯಕ್ತಿ ಕನಿಷ್ಠ 30 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗೆ ನಿಗದಿತ ನಮೂನೆಯಲ್ಲಿ ಘೋಷಣಾ ಪತ್ರ ಸಲ್ಲಿಸಬೇಕು. ಆ ಬಳಿಕ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಾರ್ವಜನಿಕ ನೋಟಿಸ್ ಹೊರಡಿಸಿ, ಆಕ್ಷೇಪಣೆಗಳಿದ್ದರೆ ವಿಚಾರಣೆ ನಡೆಸುತ್ತಾರೆ. ಇದಾದ ಬಳಿಕ ಮತಾಂತರಗೊಂಡ ನಂತರವೂ 30 ದಿನಗಳ ಒಳಗೆ ಮತ್ತೊಂದು ಘೋಷಣಾ ಪತ್ರ ಸಲ್ಲಿಸಿ ದೃಢೀಕರಿಸಿಕೊಳ್ಳಬೇಕು. ಈ ಬಹಿರಂಗ ಪ್ರಕ್ರಿಯೆಯು ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಆಯ್ಕೆಯ ಹಕ್ಕು, ತಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಖಾಸಗಿತನಕ್ಕೆ ಹಾಗೂ ಘನತೆಗೆ ನೇರ ಧಕ್ಕೆ ತರುತ್ತದೆ. ಇದು ಅಲ್ಪಸಂಖ್ಯಾತರನ್ನು ಸಾಮಾಜಿಕವಾಗಿ ಬಹಿಷ್ಕರಿಸಲು ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಕಾಯ್ದೆಯ ಅತ್ಯಂತ ವಿವಾದಾತ್ಮಕ ಅಂಶವೆಂದರೆ ‘ಸಾಕ್ಷ್ಯದ ಹೊಣೆ’ (Burden of Proof). ಸೆಕ್ಷನ್ 12ರ ಅಡಿ, ಮತಾಂತರವು ಕಾನೂನುಬಾಹಿರ ವಿಧಾನಗಳಿಂದ ನಡೆದಿಲ್ಲ ಎಂದು ಸಾಬೀತುಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಮತಾಂತರ ಮಾಡಿದವರ ಅಥವಾ ಆ ಪ್ರಕ್ರಿಯೆಗೆ ನೆರವಾದವರ ಮೇಲೆಯೇ ಹೊರಿಸಲಾಗಿದೆ. ಇದು ಅಮಾಯಕರನ್ನು ಜೈಲಿಗಟ್ಟಲು ಸುಲಭದ ಹಾದಿಯಾಗಿದೆ ಎಂಬ ಆರೋಪವಿದೆ. ಮತ್ತೊಂದೆಡೆ, ಸೆಕ್ಷನ್ 3ರ ಅಡಿ ವ್ಯಕ್ತಿಯೊಬ್ಬ ತನ್ನ ತಕ್ಷಣದ ‘ಹಿಂದಿನ ಧರ್ಮ’ಕ್ಕೆ ಮರಳುವುದನ್ನು (ಮರುಮತಾಂತರ) ಕಾಯ್ದೆಯಡಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟ ವಿನಾಯಿತಿ ನೀಡಲಾಗಿದೆ. ಈ ಅಂಶವು ನಿರ್ದಿಷ್ಟ ಧರ್ಮದ ಪರವಾದ ಒಲವನ್ನು ತೋರಿಸುತ್ತದೆ ಹಾಗೂ ಸಂವಿಧಾನದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ.

ಈ ಕಾಯ್ದೆಯ ರಚನಾ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳಿದ್ದವು ಎಂಬುದು ಹಳೆಯ ಸರ್ಕಾರಿ ದಾಖಲೆಗಳಿಂದಲೇ ಸಾಬೀತಾಗಿದೆ. 2022ರಲ್ಲಿ ಸುಗ್ರೀವಾಜ್ಞೆ ಹಾಗೂ ಮಸೂದೆಗೆ ಸಂಪುಟದ ಅನುಮೋದನೆ ಪಡೆಯುವ ಮುನ್ನವೇ ರಾಜ್ಯ ಕಾನೂನು ಇಲಾಖೆಯು ಇದರ ಹಲವು ಅಂಶಗಳ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿತ್ತು ಎಂಬ ಸಂಗತಿ ಆರ್‌ಟಿಐ ದಾಖಲೆಗಳಿಂದ ತಿಳಿದುಬಂದಿದೆ. ಕಾಯ್ದೆಯ ಹಲವು ಸೆಕ್ಷನ್‌ಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ ಮತ್ತು ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಎದುರಿಸಬೇಕಾಗಬಹುದು ಎಂದು ಇಲಾಖೆ ಎಚ್ಚರಿಸಿತ್ತು.

ಇದನ್ನೂ ಓದಿ ದಿಲ್ಲಿ ಮಾತು | ಕಾಲಘಟ್ಟದ ದುರಂತ, ಸಮಾಜದ ನಿಶ್ಯಬ್ದ-ಆಜಂ ಖಾನ್

ಕಾಯ್ದೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 46 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ, ಕಾಯ್ದೆಯನ್ನು ವಿರೋಧಿಸುತ್ತಿರುವ ಪ್ರಸ್ತುತ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿಯೇ ಬರೋಬ್ಬರಿ 25 ಪ್ರಕರಣಗಳು ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡಿರುವ ಸಂಘಟನೆಗಳು, ಕಾಯ್ದೆ ಕೇವಲ ರದ್ದಾಗುವುದಷ್ಟೇ ಅಲ್ಲ, ಈ ಕಾಯ್ದೆಯಡಿ ಅಲ್ಪಸಂಖ್ಯಾತರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಹಾಗೂ ಎಫ್‌ಐಆರ್‌ಗಳನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿವೆ. ಕೇವಲ ಕಾಯ್ದೆ ರದ್ದತಿಯಿಂದ ಈವರೆಗೆ ಸಂತ್ರಸ್ತರಾದವರಿಗೆ ನ್ಯಾಯ ಸಿಗುವುದಿಲ್ಲ, ದಾಖಲಾದ ಪ್ರಕರಣಗಳ ರದ್ದತಿಯೇ ಪರಿಹಾರ ಎಂಬುದು ಅವರ ಆಗ್ರಹವಾಗಿದೆ. ಚಳಿಗಾಲದ ಬೆಳಗಾವಿ ಅಧಿವೇಶನವು ಅತ್ಯಂತ ಕುತೂಹಲದ ಘಟ್ಟವನ್ನು ತಲುಪಿದೆ. ಸರ್ಕಾರವು ವಿವಾದಾತ್ಮಕ ಕಾಯ್ದೆಯನ್ನು ರದ್ದುಗೊಳಿಸಿ ಅಲ್ಪಸಂಖ್ಯಾತ ಹಾಗೂ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕಿದೆ.

ಇದನ್ನೂ ಓದಿ ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕನೇರಿ ಸ್ವಾಮಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿಕೆ ನೀಡಿರುವ ಕನೇರಿ ಕಾಡಸಿದ್ದೇಶ್ವರ...

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣ ನೀರು ಹರಿಸಲು ಆಗ್ರಹ; ನ.16ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ಬಾಳೆ, ತೆಂಗು,...

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ ಬೆಳಕಿನಲ್ಲಿ ಮಂಟೇಸ್ವಾಮಿ

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ...

ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಕಡಿವಾಣ

ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಶಿವಮೂರ್ತಿ ಸರ್ಕಲ್ ಸಮೀಪದ ಐತಿಹಾಸಿಕ ನೆಹರು ಕ್ರೀಡಾಂಗಣದ...