ಬಾಗೇಪಲ್ಲಿ | ಕೊಳಚೆ ನೀರನ್ನು ಚಿತ್ರಾವತಿ ನದಿಗೆ ಹರಿಸಲು ಕೈಗೊಂಡಿರುವ ಅವೈಜ್ಞಾನಿಕ ಚರಂಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

Date:

ಪಟ್ಟಣದ ಚರಂಡಿ ಕೊಳಚೆ ನೀರನ್ನು ಚಿತ್ರಾವತಿ ನದಿಗೆ ಹರಿಸಲು ಪುರಸಭೆ ಅಧಿಕಾರಿಗಳು ಕೈಗೊಂಡಿರುವ ಅವೈಜ್ಞಾನಿಕ ಚರಂಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕುಲಿಷಿತಗೊಂಡಿರುವ ಚಿತ್ರಾವತಿ ನದಿ ಸ್ವಚ್ಚಗೊಳಿಸುವಂತೆ ಹಾಗೂ ಒತ್ತುವರಿಯಾಗಿರುವ ರಾಜಕಾಲುವೆ, ರ‍್ರಕಾಲುವೆ, ಕೆರೆ ಕುಂಟೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಚಿತ್ರಾವತಿ ನಮ್ಮ ಹಕ್ಕು, ಚಿತ್ರಾವತಿ ಉಳಿಸಿ ಜೀವ ರಕ್ಷಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ವಕೀಲರ ಸಂಘ, ಸಿಪಿಐ(ಎಂ), ರಕ್ಷಣಾ ವೇಧಿಕೆ, ರೈತ ಸಂಘ,ಕನ್ನಡಪರ, ಪ್ರಗತಿಪರ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪನೊಂದಣಾಧಿಕಾರಿಗಳ ಕಚೇರಿ ಮುಂದೆ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಚಿತ್ರಾವತಿ ನಮ್ಮ ಹಕ್ಕು, ಚಿತ್ರಾವತಿ ಉಳಿಸಿ ಜೀವ ಉಳಿಸಿ ಹೋರಾಟ ಸಮಿತಿಯ ಮುಖಂಡ ಹಾಗೂ ಹಿರಿಯ ವಕೀಲರಾದ ಎ.ಜಿ.ಸುಧಾಕರ್ ಮಾತನಾಡಿ, ಈ ಹಿಂದಿನ ದಿನಗಳಲ್ಲಿ ಚಿತ್ರಾವತಿ ನದಿಯಲ್ಲಿ ಶುದ್ದ ಕುಡಿಯುವ ನೀರು ಸಿಗುತ್ತಿತ್ತು, ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಿಡಗಳಿಂದ ತಂಪಾದ ವಾತಾವಣ ಇತ್ತು ಆದರೆ ಚಿತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣವಾದ ನಂತರದ ದಿನಗಳಲ್ಲಿ ಡ್ಯಾಂ ತುಂಬಿದಾಗ ಮಾತ್ರ ನದಿಯಲ್ಲಿ ಹರಿಯುತ್ತೆ ಉಳಿದ ದಿನಗಳಲ್ಲಿ ನದಿ ಖಾಲಿ ಇರುತ್ತೆ, ಖಾಲಿ ಇರುವುದರಿಂದ ಪುರಸಭೆ ಅಧಿಕಾರಿಗಳು ಪಟ್ಟಣದ ಕೊಳಚೆ ನೀರನ್ನ ಪಚ್ಚಿಮ ಮತ್ತು ದಕ್ಷಿಣ ಭಾಗದ ಚಿತ್ರಾವತಿ ನದಿಗೆ ಹರಿಸಲು ಕ್ರಮಕೈಗೊಂಡಿರುವ ಪುರಸಭೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸ್ವಚ್ಚತೆಯನ್ನು ಕಾಪಾಡಬೇಕಾಗಿರುವ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನದಿಂದ ಈ ಭಾಗದ ಜನತೆಯ ಜೀವನಾಡಿಯಾಗಿದ್ದ ಚಿತ್ರಾವತಿ ನದಿಗೆ ಪಟ್ಟಣದ ಕೊಳಚೆ ನೀರು ಹರಿಸುವ ಮೂಲಕ ಚಿತ್ರಾವತಿ ನದಿ ಇಂದು ಕುಲುಷಿತಗೊಂಡಿದ್ದಲ್ಲದೆ ನದಿಯ ಮೂಲ ಸ್ವರೂಪವೇ ಬದಲಾಗಿದೆ ಅಲ್ಲದೆ ಕೊಳಚೆ ನೀರು ತುಂಬಿರುವ ಪರಿಣಾಮ ರ್ದುನಾತ ಬೀರುದ್ದು ರೋಗರುಜುನುಗಳ ತಂಗುತಾಣವಾಗಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಚಿತ್ರಾವತಿ ನದಿಗೆ ಪಟ್ಟಣದ ಕೊಳಚೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಹಾಗೂ ಕಲುಷಿತಗೊಂಡಿರುವ ನದಿಯನ್ನು ಸ್ವಚ್ಚಗೊಳಿಸುವಂತೆ ಅನೇಕ ಸಲ ಪುರಸಭೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಈ ಸಂಬಂಧ ಬಾಗೇಪಲ್ಲಿಯ ಸಿವಿಲ್ ನ್ಯಾಯಾಧೀಶರಾದ ಮಂಜುನಾಥಚಾರಿ ರವರು ಸಹ ಪುರಸಭೆ, ಗ್ರಾ.ಪಂ, ನೀರಾವರಿ, ಪರಿಸರ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಚಿತ್ರಾವತಿ ನದಿ ಕುಲುಷಿತಗೊಂಡಿರುವ ಬಗ್ಗೆ ಕ್ರಮ ಕೈಗೊಳುವಂತೆ ನಿರಂತರವಾಗಿ ಪತ್ರ ಬರೆದಿದ್ದರೂ ಸಹ ಸಾಮಾಜಿಕ ಕಳಕಳಿ ಇರುವಂತಹ ಒಬ್ಬ ನ್ಯಾಯಾಧೀಶರ ಮನವಿಗೂ ಸಹ ಕೇರೆ ಎನ್ನದ ಅಧಿಕಾರಿಗಳಿಂದ ಇಂತಹ ದುಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಇದೇ ಸಂದರ್ಭದಲ್ಲಿ ಪಟ್ಟಣದ ಕೊಳಚೆ ನೀರನ್ನು ದಕ್ಷಿಣದ ಚಿತ್ರಾವತಿ ನದಿಗೆ ಹರಿಸಲು ಉಪನೊಂದಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಕಮೀಷನ್ ಹಣಕ್ಕಾಗಿ ನೂತನವಾಗಿ ಚರಂಡಿ ನಿರ್ಮಾಣಕ್ಕೆ ಮುಂದಾಗಿರುವ ಪುರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಈ ವಿಚಾರವಾಗಿ ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಚಿತ್ರಾವತಿ ಪುರಸಭೆ ವ್ಯಾಪ್ತಿಗೆ ಬರಲ್ಲ, ಚಿತ್ರಾವತಿ ನದಿಗೂ ಪುರಸಭೆಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತಹ ಹಾರಿಕೆ ಉತ್ತರವನ್ನು ನೀಡುತ್ತಾರೆ. ಆದರೆ ಬಾಗೇಪಲ್ಲಿ ಪಟ್ಟಣದ ಕೊಳಚೆ ನೀರನ್ನು ನದಿಗೆ ಬಿಡಲು ಇವರಿಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು ನದಿ ಮೂಲಗಳನ್ನು ದುರುಪಯೋಗ ಮಾಡಿಕೊಂಡು ಅದನ್ನು ಕಲುಷಿತಗೊಳಿಸಿದರೆ ಅಂತಹವರ ವಿರುದ್ದ ಕ್ರಿಮಿನಲ್ ಕೇಸು ಹಾಕಿ ಜೈಲಿಗೆ ಕಳುಹಿಸುವಂತಹ ಕಾನೂನು ಇದೆ. ಕಾನೂನು ಬಗ್ಗೆ ಕನಿಷ್ಠ ಪರಿಜ್ಞಾನವೂ ಸಹ ಇಲ್ಲಿನ ಪುರಸಭೆ ಅಧಿಕಾರಿಗೆ ಇಲ್ಲ, ಈ ಬಗ್ಗೆ ಗ್ರಾ.ಪಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರ ಉಳಿಸಬೇಕಾಗಿರುವುದು, ಚಿತ್ರಾವತಿ ನದಿ ಉಳಿಸಿಕೊಳ್ಳಬೇಕಾಗಿರುವುದು ಈ ಭಾಗದ ಪ್ರತಿಯೊಬ್ಬರ ಕರ್ತವ್ಯವಾಗಿ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ ಇದೆ ಎಂದ ಅವರು ಚಿತ್ರಾವತಿ ನದಿಗೆ ಯಾವುದೇ ಕಾರಣಕ್ಕೂ ಚರಡಿ ಕೊಳಚೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು, ಕುಲುಷಿತಗೊಂಡಿರುವ ನದಿಯನ್ನು ಸ್ವಚ್ಚತೆಗೆ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಕೊಳಚೆ ಚರಂಡಿ ನೀರು ನದಿಗೆ ಹರಿಯುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದು, ರಾಜ್ಯ ಮಟ್ಟದಲ್ಲಿ ಸುಮಾರು 45 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. 4 ತಿಂಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತೆ ಎಂದು ಪ್ರತಿಭಟನಕಾರರಿಗೆ ಭರವಸೆ ನೀಡಿದರು.

ಇದನ್ನು ಓದಿದ್ದೀರಾ..?ಕೋಲಾರದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆಗೆ ತಕ್ಷಣ ಕ್ರಮ ವಹಿಸಿ: ಅಧಿಕಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ

ಈ ಸಂದರ್ಭದಲ್ಲಿ ಚಿತ್ರಾವತಿ ಉಳಿಸಿ ಜೀವ ಉಳಿಸಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಸಿಪಿಐ(ಎಂ)ನ ಚೆನ್ನರಾಯಪ್ಪ, ಮುನಿಸ್ವಾಮಿ, ಮುನಿವೆಂಕಟಪ್ಪ, ಅಶ್ವಥಪ್ಪ, ಕೃಷ್ಣಪ್ಪ, ಚಿತ್ರಾವತಿ ಪುನ್ಹಚೇತನ ಹೋರಾಟ ಸಮಿತಿಯ ರಾಜಶೇಖರ್ ನಾಯ್ಡು, ಕರವೇ ಬಾಬಾಜಾನ್, ರವಿಕುಮಾರ್, ಕರವೇ ಸ್ವಾಭಿಮಾನಿ ಬಣದ ಬಿಟಿಸಿ ಸೀನಾ, ರೈತ ಸಂಘದ ರಘುನಾಥರೆಡ್ಡಿ, ಲಕ್ಷ್ಮೀ ನಾರಾಯಣರೆಡ್ಡಿ, ವಕೀಲರ ಸಂಘದ ಅಧ್ಯಕ್ಷರಾದ ಮಂಜುನಾಥ್, ವಕೀಲರಾದ ಎ.ನಂಜುಂಡಪ್ಪ, ರವಿ, ಬಾಲುನಾಯಕ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು..

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಣಿಪಾಲದಲ್ಲಿ ಮಾರಕಾಸ್ತ್ರಗಳೊಂದಿಗೆ ಯುವಕನ ಬಂಧನ

ಉಡುಪಿ ನಗರದ ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ...

ಉಡುಪಿ | ಕೋಟ ಜಂಕ್ಷನ್ ಅಪಘಾತ; ಗಾಯಗೊಂಡಿದ್ದ ಕಾರು ಚಾಲಕ ಸಾವು

ಕೋಟ ಜಂಕ್ಷನ್‌ನಲ್ಲಿ ಅ. 26ರಂದು ಸಂಭವಿಸಿದ ಸೈಕಲ್‌ ಮತ್ತು ಕಾರಿನ ನಡುವಿನ...

ಉಡುಪಿ | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಿರಲಿ: ಅಶೋಕ್ ಕುಮಾರ್ ಕೊಡವೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು....

ಕುಮಟಾ | ತದಡಿ ಬಂದರಿನಲ್ಲಿ ದುರಂತ: ಮೀನು ಸಂಗ್ರಹಣಾ ಸ್ಥಳ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಸಾವು

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ದಂಡೆಗೆ ಮರಳಿದ್ದ ಬೋಟ್‌ನ ಮೀನು ಸಂಗ್ರಹಣಾ...