ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ಮೇ 1ರಂದು ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ನಡೆಯಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಸಾಲಾಪೂರವು ರಾಮದುರ್ಗ ತಾಲೂಕಿನ ಪ್ರಮುಖ ಗ್ರಾಮವಾಗಿದ್ದು, ಇಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಮಹತ್ವ ಇದೆ.
ಜಾತ್ರೆಯ ನಿಮಿತ್ತವಾಗಿ ಬಸವೇಶ್ವರ ನಾಟಕ ಸಂಘ, ಸಾಲಾಪೂರ ಇವರ ವತಿಯಿಂದ ಮಹ್ಮದ್ ಬಾಗವಾನ ಶಿಕ್ಷಕರು ರಚಿಸಿರುವ “ಸತಿ ಸಾದ್ವಿ ಶಿರೋಮಣಿ’ ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಈ ನಾಟಕವು ಸಮಾಜಮುಖಿ ಸಂದೇಶ ನೀಡುವ ನಿರೀಕ್ಷೆ ಇದೆ.
ಇದೇ ದಿನ ಗ್ರಾಮದ ಶಂಕರಪ್ಪ ಈರಪ್ಪ ಆದರಗಿ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ SPL ಕ್ರಿಕೆಟ್ ಟೂರ್ನಿಯ ಅಂತಿಮ ಫೈನಲ್ ಪಂದ್ಯ ನಡೆಯಲಿದ್ದು, ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.




