ಬೆಳಗಾವಿ | ಎಸ್‌ಐಆ‌ರ್ ವಿರೋಧಿ ಜಾಗೃತಿ ಜಾಥಾ: ಮತದಾರರ ಹಕ್ಕು ರಕ್ಷಣೆಗೆ ಒಗ್ಗಟ್ಟಿನ ಕರೆ

Date:

ಎಸ್‌ಐಆ‌ರ್ ವಿರೋಧಿ ಜಾಗೃತಿ ಜಾಥಾ ಅಭಿಯಾನವು ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತ ಸಂಘಟನೆ, ಜಮಾತ್ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳ ಮುಖಂಡರಿಂದ ಪ್ರಾರಂಭಗೊಂಡಿತು. ಜಾಥಾವು ಯರಗಟ್ಟಿಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿತು.

- Advertisement -
1001935547

ಬೆಳಗಾವಿ ನಗರದಲ್ಲಿ ಅಂಬೇಡ್ಕರ್ ಗಾರ್ಡನ್‌ನಲ್ಲಿ ಡಾ. ಬಿ.ಆ‌ರ್. ಅಂಬೇಡ್ಕ‌ರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಶಿವಲೀಲಾ ಮಿಸಾಳೆಯವರು ಜಾಥಾವನ್ನು ಸ್ವಾಗತಿಸಿದರು. ಬಳಿಕ ಜಾಥಾವು ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಕೇಂದ್ರ ಸರ್ಕಾರ ಹಾಗೂ ಎಸ್‌ಐಆ‌ರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...
1001935546

ನಂತರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಎಸ್‌ಐಆ‌ರ್ ವಿರೋಧಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಯೂಸುಫ್ ಕನ್ನಿ ಮಾತನಾಡಿ, 13 ರಾಜ್ಯಗಳಲ್ಲಿ ಎಸ್‌ಐಆ‌ರ್ ಜಾರಿ ಮಾಡಲಾಗಿದೆ. ನಮ್ಮಗೆ ಗೊತ್ತಿರುವಂತೆ 6 ಕೋಟಿ 50 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇವರು ಭಾರತೀಯರಲ್ಲವೇ? ಎಂದು ಪ್ರಶ್ನಿಸಿದರು.

250 ಕ್ಕಿಂತ ಹೆಚ್ಚು ಸಂಘಟನೆಗಳು ಎಸ್‌ಐಆ‌ರ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ. ಜನರಿಗೆ ಎಸ್‌ಐಆ‌ರ್ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಅದರಲ್ಲಿರುವ ಲೋಪದೋಷಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಇದು ಕೇವಲ ಅಲ್ಪಸಂಖ್ಯಾತರ ವಿಷಯವಲ್ಲ, ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರ ಮತಗಳನ್ನು ಸಹ ತೆಗೆದು ಹಾಕಲಾಗುತ್ತಿದೆ ಎಂದು ಹೇಳಿದರು.

ಸರೋವರ ಅವರು ಮಾತನಾಡಿ, ಜನರಿಗೆ ಗೊತ್ತಿಲ್ಲದೆ ಅವರ ಹಕ್ಕಿಗೆ ಮೋಸ ಮಾಡಲಾಗುತ್ತಿದೆ. ಇಲ್ಲಿ ಸ್ಪೆಲ್ಲಿಂಗ್‌ ಮಿಸ್ಟೇಕ್ ಇದ್ದರೂ ಹೆಸರು ತೆಗೆದು ಹಾಕಲಾಗುತ್ತಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರ ಹೆಸರು, ನ್ಯಾಯಾಧೀಶರ ಹೆಸರುಗಳನ್ನೂ ತೆಗೆದು ಹಾಕಲಾಗುತ್ತಿದೆ. ಇಂತಹ ಸಮಯದಲ್ಲಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮತದಾರರ ಪರಿಷ್ಕರಣೆಗೆ ಹೆಚ್ಚಿನ ಸಮಯ ನೀಡಬೇಕು ಎಂದು ಹೇಳಿದರು.

ಇಸಾಬೆಲ್ಲ ಝೇವಿಯ‌ರ್ ಮಾತನಾಡಿ, ಎಸ್‌ಐಆರ್‌ನಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಹೆಣ್ಣು ಮಕ್ಕಳಿಗೆ ಮದುವೆಗೂ ಮೊದಲು ಒಂದು ಹೆಸರಿದ್ದರೆ, ಮದುವೆಯ ಬಳಿಕ ಇನ್ನೊಂದು ಹೆಸರಿಡಲಾಗುತ್ತದೆ. ಇಂತಹವರ ಎಲ್ಲಾ ದಾಖಲೆಗಳಲ್ಲಿ ಒಂದು ಅಕ್ಷರವೂ ತಪ್ಪಿರಬಾರದು ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ದಾಖಲೆ ಇಲ್ಲದವರನ್ನು ದೇಶದವರೇ ಅಲ್ಲ ಎಂದು ಹೇಳಲಾಗುತ್ತಿದೆ. ಬಡ ಹೆಣ್ಣು ಮಕ್ಕಳು ಎಲ್ಲಿಂದ ದಾಖಲೆ ತರಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಅವ್ಯವಸ್ಥೆ ವಿರುದ್ಧ ಎಲ್ಲ ಜನ ಸಮುದಾಯ ಒಂದಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

1001935561

ಯಾಸಿನ್ ಮಖಾನದಾರ್‌ ಮಾತನಾಡಿ, ಜನಸಾಮಾನ್ಯರಿಗೆ ಎಲ್ಲ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರವು ಸಮಯವನ್ನು ಹೆಚ್ಚಿಗೆ ನೀಡಬೇಕು. ಈ ಅನುಕೂಲತೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮತದಾರರ ಪಟ್ಟಿಯಲ್ಲಿ ಎಲ್ಲರ ಹೆಸರು ಇರಬೇಕು ಎನ್ನುವುದೇ ನಮ್ಮ ಎಸ್‌ಐಆ‌ರ್ ವಿರೋಧಿ ಜಾಗೃತಿ ಜಾಥಾದ ಉದ್ದೇಶ ಎಂದು ಹೇಳಿದರು

1001935545

ಈ ಸಂದರ್ಭದಲ್ಲಿ ಯೋಗಾನಂದ ಸ್ವಾಮೀಜಿ, ಸಾಜಿದ್‌ ಮೌಲಾನಾ, ಪಾಸ್ಟ‌ರ್ ಶಾಂತಪ್ಪ, ಸ್ಥಳೀಯ ಹೋರಾಟಗಾರರಾದ ಮಂದಾ, ಶಿವಲೀಲಾ, ಆಯಿನಾ ಶೇಖ್, ಬಂಡಾಯ ಸಾಹಿತ್ಯದ ಡಾ. ಹಿಮ್ಮಡಿ, ಜನಶಕ್ತಿಯ ರವಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಆಯ್ಕಾ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

IMG 20251111 WA0000
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಕಬ್ಬು ಬೆಳೆಗಾರರ ​​ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ: ದರ್ಶನ್ ಪುಟ್ಟಣ್ಣಯ್ಯ

ಬೆಳಗಾವಿ ಕಬ್ಬು ಬೆಳೆಯುವ ಸಂಪೂರ್ಣ ಅಪಾಯವನ್ನು ರೈತರು ಎದುರಿಸುತ್ತಿದ್ದರೂ, ಕಬ್ಬಿನ ಬೆಲೆ...

ಬೆಳಗಾವಿ | ಕಬ್ಬು ಬಿಲ್ 15 ದಿನಗಳಲ್ಲಿ ಪಾವತಿಸಿ; ವಿಳಂಬವಾದರೆ ಬಡ್ಡಿ ನೀಡಿ

ಬೆಳಗಾವಿ ಕಬ್ಬು ಪೂರೈಸಿದ 15 ದಿನಗಳೊಳಗೆರೈತರಿಗೆ ಬಿಲ್‌ ಪಾವತಿಸಬೇಕು. ವಿಳಂಬವಾದರೆ ಬಡ್ಡಿ...

ಬೆಳಗಾವಿ | ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ

ಬೆಳಗಾವಿ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇವಲ ಭರವಸೆ ನೀಡಿದರೆ ಸಾಲದು, ಸರ್ಕಾರ...

ಬೆಳಗಾವಿ | ಕಬ್ಬು ಬೆಲೆ ವಿವಾದಕ್ಕೆ ಅಂತಿಮ ತೀರ್ಮಾನವಿಲ್ಲ; ಅ. 29ಕ್ಕೆ ಮತ್ತೊಂದು ಸಭೆ

ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ...