ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅಗ್ರಹಾರ ಬಡಾವಣೆಯಲ್ಲಿ ಲಿವ್ ಇನ್ ಟುಗೆದರ್ ರಿಲೆಷನ್ಷಿಪ್ ನಲ್ಲಿ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ.
ಶರತ್ ಡಿ. ಜೆ ಎಂಬುವನು ಸಕಲೇಶಪುರದ ಎನ್. ಡಿ ಅನುಷಾ ಜೊತೆ ಲಿವ್ ಇನ್ ಟುಗೆದರ್ ರಿಲೆಷನ್ಷಿಪ್ ಹೊಂದಿದ್ದ. ಮಹಿಳೆಯನ್ನು ಬೆಂಗಳೂರಿನ ಶೇಷಾದ್ರಿಪುರಂ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಇರಿಸಿದ್ದ. ದಿ. 13/06/2026 ರಂದು ರಾತ್ರಿ ಬೆಂಗಳೂರಿನಲ್ಲಿ ಅನುಷಾಳನ್ನು ಕೊಲೆ ಮಾಡಿ ನಂತರ ಪೊಲೀಸರ ದಿಕ್ಕು ತಪ್ಪಿಸಲು ಸಕಲೇಶಪುರಕ್ಕೆ ಬಂದು ಸುಮ್ಮನೆ ಓಡಾಡಿಕೊಂಡಿದ್ದ.
ಇದನ್ನೂ ಓದಿದ್ದೀರಾ?ಹಾಸನ | ಜೂ.18ರಂದು ರಂಗ ಅಭಿನಯ ತರಬೇತಿ ಶಿಬಿರ
ಮಾಹಿತಿ ತಿಳಿದ ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ವಿ.ಸಿ.ವನರಾಜು ಸಿಬ್ಬಂದಿಗಳಾದ ಪೃಥ್ವಿ ಮತ್ತು ಮಧು ಇವರುಗಳ ಸಹಕಾರದೊಂದಿಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಆರೋಪಿಯಾದ ಶರತ್ ನನ್ನು ಬಂಧಿಸಿದ್ದಾರೆ.




