ಬಸವ ಜಯಂತಿ ಉತ್ಸವ ಸಮಿತಿ-2026 ವತಿಯಿಂದ ಅಭಿನಂದನಾ ಸಮಾರಂಭವು ಸೆ.27ರಂದು ಸಂಜೆ 4 ಗಂಟೆಗೆ ಬೆಳಗಾವಿ ನಗರದ ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿದೆ.
ಎಡೆಯೂರು ಸಂಸ್ಥಾನಮಠ, ಡಂಬಳ-ಗದಗದ ಶ್ರೀಮನ್ ನಿರಂಜನ ಜಗದ್ಗುರು ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾರಂಜಿ ಮಠದ ಶ್ರೀ ಮ.ನಿ.ಪ್ರ.ಸ್ವ ಗುರುಸಿದ್ದ ಮಹಾಸ್ವಾಮಿಗಳು, ನಾಗನೂರ-ಬೆಳಗಾವಿಯ ರುದ್ರಾಕ್ಷಿಮಠದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಯಮಕನಮರಡಿಯ ಶೂನ್ಯ ಸಂಪಾದನ ಮಠದ ಪೂಜ್ಯಶ್ರೀ ಸದ್ಗುರು ಸಿದ್ದಬಸವ ದೇವರು ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ಸರ್ಕಾರದ ಮಾಜಿ ಸಚಿವ ಶರಣ ಶ್ರೀ ಎ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸರ್ಕಾರದ ಸಹಕಾರ ಸಚಿವ ಶರಣ ಶ್ರೀ ಲಕ್ಷ್ಮಣ ಸವದಿ ಅವರಿಗೆ ಗೌರವ ಸತ್ಕಾರ ನಡೆಯಲಿದೆ.
ಸಮಾರಂಭದಲ್ಲಿ ಬಸವ ತತ್ವ, ಶರಣರ ವಿಚಾರಧಾರೆ ಹಾಗೂ ಸಾಮಾಜಿಕ ಸಮಾನತೆಯ ಆಶಯಗಳ ಕುರಿತು ಗಣ್ಯರು ಮಾತನಾಡಲಿದ್ದಾರೆ.



