ಬಸ್ ಹತ್ತುವ ಅವಸರದಲ್ಲಿ ತಾಯಿಯ ಕೈಯಿಂದ ಜಾರಿ ಬಿದ್ದ ಮಗು ಸರ್ಕಾರಿ ಬಸ್ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಾಯಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡೇ ಬಸ್ ಹತ್ತಲು ಓಡುತ್ತಿದ್ದ ವೇಳೆ ಮಗು ಕೈಯಿಂದ ತಪ್ಪಿ ಕೆಳಗೆ ಬಿದ್ದಿದೆ. ಇದೇ ವೇಳೆ ಬಸ್ ಚಲನೆ ಆರಂಭವಾದ ಕಾರಣ, ಬಸ್‌ನ ಮುಂದಿನ ಚಕ್ರಗಳು ಮಗುವಿನ ಕಾಲಿನ ಮೇಲೆ ಹರಿದಿವೆ ಎಂದು ತಿಳಿದುಬಂದಿದೆ.
ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ.
ಬಸ್‌ಗಳಲ್ಲಿ ಹೆಚ್ಚುತ್ತಿರುವ ಗಿಜಿಗುಡಿದ ಪರಿಸ್ಥಿತಿ ಮತ್ತು ಸೀಟು ಪಡೆಯಲು ಪ್ರಯಾಣಿಕರು ತೋರಿಸುವ ಆತುರವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಈ ಸುದ್ದಿ ಓದಿದ್ದಿರಾ ? ಅನೈತಿಕ ಸಂಬಂಧವೇ ಮಾಜಿ ಶಾಸಕರ ಪುತ್ರನ ಕೊಲೆಗೆ ಕಾರಣವಾಯಿತೇ?
ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



