ಬೆಳಗಾವಿ | ರಾಯರ ಹುಂಡಿಯಲ್ಲಿ ಭಾವನಾತ್ಮಕ ಮನವಿ ಪತ್ರ: ಆ ಹುಡುಗಿಯಿಂದ ನಮ್ಮನ್ನು ಕಾಪಾಡು

Date:

ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಭಕ್ತನೊಬ್ಬ ಬರೆದಿರುವ ಭಾವನಾತ್ಮಕ ಮನವಿ ಪತ್ರ ಪತ್ತೆಯಾಗಿದ್ದು, ಅದರಲ್ಲಿರುವ “ಆ ಹುಡುಗಿಯಿಂದ ನಮ್ಮನ್ನು ಕಾಪಾಡು” ಎಂಬ ಸಾಲು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಪತ್ರದ ಆರಂಭದಲ್ಲಿ “ಶ್ರೀ ಗಣಪತಿಯೇ ನಮಃ, ಓಂ ಶ್ರೀ ರಾಘವೇಂದ್ರಾಯ ನಮಃ” ಎಂದು ಬರೆದಿರುವ ಭಕ್ತ, ತನ್ನ ಜೀವನದಲ್ಲಿನ ಸಂಕಷ್ಟಗಳನ್ನು ರಾಯರ ಮುಂದೆ ಮನದಾಳದಿಂದ ವ್ಯಕ್ತಪಡಿಸಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೌಜನ್ಯ ಪ್ರಕರಣದಲ್ಲಿ ಪ್ರಭಾವಿಗಳ ಜೊತೆಗೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಚಳವಳಿ ನಿಗ್ರಹಕ್ಕೆ ತೋರುವ ಶೌರ್ಯ ರಕ್ಷಣೆಯಲ್ಲೇಕಿಲ್ಲ? ಅಮಿತ್ ಶಾ...

ಯಾವುದೇ ಒಂದು ಆಡಳಿತದ ನಿಜವಾದ ಮಾನದಂಡ ಇರುವುದು ರಾಜಕೀಯ ಭಾಷಣಗಳಲ್ಲಲ್ಲ, ಬದಲಿಗೆ ಆ ಆಡಳಿತದಲ್ಲಿ ಸಾಮಾನ್ಯ ನಾಗರಿಕರು, ವಿಶೇಷವಾಗಿ ಮಹಿಳೆಯರು, ಪಡೆಯುವ ಭದ್ರತೆಯಲ್ಲಿ. ರಾಜಧಾನಿಯಲ್ಲಿ ಸಾಲು ಸಾಲಾಗಿ ಹರಿದ ರಕ್ತ ಮತ್ತು ಈ...

ಪತ್ರದಲ್ಲಿ “ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು. ರಾಯರೇ ಆ ಹುಡುಗಿಯಿಂದ ನಮ್ಮನ್ನು ಪಾರುಮಾಡು. ಈ ಕಷ್ಟದಿಂದ ನಮ್ಮನ್ನು ಪಾರುಮಾಡು. ರಾಯರಿದ್ದಾರೆ ನಮ್ಮ ಜೊತೆ, ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದೇನೆ. ಗುರುಗಳೇ, ಆದಿಶಕ್ತಿ ದೇವಿ, ತಂದೆ-ತಾಯಿ ಕಾಪಾಡಿ. ಧನ್ಯವಾದಗಳು” ಎಂದು ಭಕ್ತಿಪೂರ್ವಕವಾಗಿ ಮನವಿ ಮಾಡಲಾಗಿದೆ.

ಪತ್ರದಲ್ಲಿನ “ಆ ಹುಡುಗಿ” ಯಾರು ಅಥವಾ ಯಾವ ಕಾರಣಕ್ಕೆ ಈ ಮನವಿ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಭಕ್ತನ ಮಾನಸಿಕ ವೇದನೆ, ದೇವರ ಮೇಲಿನ ಅಪಾರ ನಂಬಿಕೆ ಹಾಗೂ ಸಂಕಷ್ಟದಿಂದ ಹೊರಬರಬೇಕೆಂಬ ಹಾರೈಕೆ ಪತ್ರದ ಮೂಲಕ ವ್ಯಕ್ತವಾಗಿರುವುದು ಗಮನಸೆಳೆದಿದೆ.

ಈ ಪತ್ರದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಭಕ್ತನ ನೋವಿನ ಅಭಿವ್ಯಕ್ತಿಯಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಪತ್ರದ ನೈಜ ಹಿನ್ನೆಲೆ ಮಾತ್ರ ಇನ್ನೂ ಬಹಿರಂಗವಾಗಿಲ್ಲ.

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಆತ್ಮವಿಶ್ವಾಸ ಬೆಳೆಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಪ್ರೊ. ಎಸ್ ಇಂದುಮತಿ

ಹೆಣ್ಣುಮಕ್ಕಳು ತಮ್ಮ ಭದ್ರತೆಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು....

ವಿಜಯಪುರ | ಪೌರಕಾರ್ಮಿಕರು ನಗರದ ಬೆನ್ನೆಲುಬು: ಮೇಯರ್ ಮಡಿವಾಳಪ್ಪ ಕರಡಿ

ವಿಜಯಪುರ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ...

ದಲಿತ ಸಂಘಟನೆ, ನೀಲಿ ಶಾಲಿನ ಕುರಿತು ಅವಹೇಳನಕಾರಿ ಹೇಳಿಕೆ: ಮುತ್ತಣ್ಣ ಮೇತ್ರಿ ಆಕ್ರೋಶ

ಮಾಜಿ ಸಂಸದ ಪ್ರತಾಪ್ ಸಿಂಹ ದಲಿತ ಸಂಘಟನೆಗಳು, ದಲಿತ ಮುಖಂಡರು ಹಾಗೂ...

SIR ವಿವಾದ: ಚುನಾವಣಾ ಆಯೋಗದ ಸಮರ್ಥನೆಗಿಳಿದ ಬಿಜೆಪಿ!

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮತದಾರರ ಪಟ್ಟಿಯಿಂದ...