ಎರಡು ವರ್ಷಗಳ ಹಿಂದೆ ಈದಿನ.ಕಾಮ್ ನಲ್ಲಿ ದೇಸಿ ನುಡಿಗಟ್ಟಿನ ಶೀರ್ಷಿಕೆಯಡಿಯಲ್ಲಿ ತಿಂಗಳಿಗೊಂದು ಕಂತಿನ ಮೂಲಕ ನೀಗೊನಿ ಕಾದಂಬರಿ ಪ್ರಸಾರವಾಗುತ್ತಿತ್ತು. ಇದನ್ನು ಕೃತಿಕಾರರಾದ ರವಿಕುಮಾರ್ ನೀಹ ಅವರು ಕೊರಟಗೆರೆ ಸೀಮೆಯ ಭಾಷೆಯ ಸೊಗಡಿನೊಂದಿಗೆ ಕೇಳುಗರ ಮನಮುಟ್ಟುವಂತೆ ವಾಚನ ಮಾಡಿದ್ದರು. ಈಗ ಅದು ಪುಸ್ತಕವಾಗಿ ಪ್ರಕಟವಾಗಿದೆ, ಕಾದಂಬರಿಯ ಆಯ್ದ ಭಾಗ ಇಲ್ಲಿದೆ...
…ಈ ಇಳಿಹೊತ್ನಲ್ಲಿ ಗಡ್ಡುದ್ಮುನ್ಗಳು ಅಮ್ನೋರ ಗುಡಿಮುಂದೆ ನಿಂತ್ಕಂಡ್ರು. ರ‍್ಸಯ್ಯಂಗೆ ದೇವ್ರುನ್ನೆ ನೋಡ್ದಷ್ಟು ಕುಷಿಯಾಯ್ತು. ಗಡ್ಡದ್ಮುನ್ಗಳ್ಗೆ ಅಡ್‌ಬಿದ್ದ ಪಾದುನ ಕಣ್ಗೊತ್ಗಂಡು ‘ಸಾಮಿ ಗರ‍್ವಯ್ನೋರೆ ನೀವ್ ಯೋಳ್ದಂಗೆ ಇಲ್ಲಿ ಆಗ್ತಿದೆ. ಇದ್ನೆಲ್ಲ ನೋಡಕ್ಕಾಗ್ತಿಲ್ಲ. ನರುಳ್ತಾವ್ರೆ. ಯೆಂಗುಸ್ರು ಮಕ್ಳು ಯಪ್ಪ ಅವ್ರ ರೋದ್ನೆ ನೋಡಕ್ಕಾಗ್ಲಿಲ್ಲ. ಇವ್ರೆಲ್ಲಾದ್ರು ಜೀವ ಉಳುಸ್ದ ದೇವ್ರು ನೀವು. ನಿಮ್ಮನ್ನೆ ಕಾಯ್ತಿದ್ದೆ. ನನ್ನತ್ರ ಇರೋ ಮದ್ದೆಲ್ಲ ಮುಗ್ದೋಗಿ ಕೈ ಬರಿದಾಗಿ ಕುಂತೈತೆ. ಬಂದು ಕೇಳರ‍್ಗೆ ಇಲ್ಲ ಅಂತ ಹೇಳಕ್ಕಾಗ್ದೆ ಕುಂತಿನಿ. ಈಗ ನಂಗೆ ಸತು ಬಂತು. ಕೊಡಿ ಗರ‍್ಸಾಮಿ’ ಎಂದು ದೈನ್ಯನಾಗಿ ರ‍್ಡು ಕೈಮುಗಿದು ಅಂಗಲಾಚಿ ನಿಂತ.
ಗಡ್ಡುದ್ಮುನಿಗ್ಳು ಆ ಬಿಳಿಗಡ್ಡದುಲ್ಲೆ ನಕ್ಕು ಕಣ್ಣಲ್ಲಿ ಮಂದಹಾಸ ಬೀರಿ ‘ರ‍್ಸಯ್ಯ ನಂಬೋರ‍್ನ ಆ ನನ್ತಾಯಿ ಕೈಬಿಡೋದುಂಟೆ. ಆ ನನ್ತಾಯಿ ಎಲ್ಗೆ ಆಗ್ನೆ ಮಾಡ್ತಳೊ ಅಲ್ಗೋಗಿ ಮದ್ದು ಕೊಟ್ಬರೋದಷ್ಟೆ ನನ್ಕೆಲ್ಸ. ಇಲ್ಗೆ ಈಗ ತಾಯಿ ನಡ್ಸಿದ್ಳು. ಬಂದೆ ತಗೋ. ಇಲ್ಲಿರರ‍್ಗೆಲ್ಲ ಮದ್ದು ಕೊಡು. ಅವ್ರಿಗೆ ಸಮ್ದಾನ ಮಾಡು. ಈಗ್ಲೆ ಸೆಂದ್ರಾಮ್ನ ಬೆಳ್ಕಲ್ಲಿ ಯರ‍್ಗೂ ಕಾಣ್ದಂಗೆ ರ‍್ಡಣ. ಮದ್ದನ್ನು ಯರ‍್ಗಾದ್ರು ಕೊಟ್ಟು ಜೊಡ್ಡು ಬಂದರ‍್ಗೆ ಹಾಕಕೆ ಹೇಳು. ನಾಳೆ ಇಳ್ಳೊಳ್ಗೆ ಇಲ್ಗೆ ಬಂದ್ಬಿಡಿವಂತೆ.’ ಅಂದ್ರು ಗಡ್ಡುದ್ನುನ್ಗಳು. ರ‍್ಸಯ್ಯ ‘ಆತು ಗುರುವ್ಯನೋರೆ’ ಅಂದು ಅಲ್ಲಿದ್ದ ನಂಬಿಕಸ್ರ‍್ಗೆ ಮದ್ದು ಕೊಟ್ಟು ಯಂಗೆಂಗೆ ಹಾಕ್ಬೇಕು ಅಂತ ಹೇಳಿ ರ‍್ಸಮ್ಮನ ಕಣ್ತುಂಬ್ಕಂಡು ಮತ್ತೊಂದ್ಸಾರಿ ಅಡ್ಬಿದ್ದು ‘ಕಾಪಾಡಮ್ಮ ತಾಯಿ ಬರೋರ‍್ಗು ರ‍್ನ ನೋಡ್ಕೊ. ಯರ‍್ಜೀವಕ್ಕು ಏನು ಆಗ್ದಂಗೆ ಕಾಪಾಡಮ್ಮ’ ಅಂತ ಮನುಸ್ನಾಗೆ ಅಂದ್ಕಂಡು ಗಡ್ಡುದ್ಮುನ್ಗಳ ಹಿಂದೆ ಸಿಸುವಿನಂತೆ ಹೊರಟ. ಯಾವ ಸಿಸ್ಯನೋ ಯಾರು ಗುರುವೋ.
ನಡ್ಯೋ ದಾರಿನಾಗೆ ಜನ್ರ ಹೂಂಕಾರ, ಬುಸ್ಸಬುಸ್ಸ ಅನ್ನೋ ಸಬ್ದ ಬಂದು ರ‍್ಸಯ್ಯನ ಕಿವಿಗೆ ಬಿದ್ವು. ಇದೇನು ಈಟೋತ್ನಲ್ಲಿ ಜನ ಇಂಗೆ ಮಾಡ್ತಾವ್ರಲ್ಲ. ಯಾವೂರು ರ‍್ಬೋದು ಇದು ಅಂತ ಗಡ್ಡದ್ಮುನಿಗಳ್ನ ಕೇಳ್ದ ‘ಈಟೋತ್ನಲ್ಲೂ ಈ ರ‍್ನಾಗೆ ಗಂಡುಸ್ರುದು ದನಿ ಕೇಳ್ತಿದೆ. ಯಾವೂರಿದು? ನಾವ್ ಯಾವ್ಕಡೆ ಬಂದಿದೀವಿ ಗುರುವಯ್ಯನೋರೆ.’
ಇದನ್ನು ಓದಿದ್ದೀರಾ?: ಹೊಸ ಓದು | ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’
‘ಇದಾ .. ಜಟ್ಟಿಗಳೂರು. ಇಲ್ಲೆಲ್ಲ ಕಸ್ರತ್ತು ಮಾಡ್ತಾವ್ರೆ ರ‍್ನ ಜಟ್ಟಿಗಳು. ಅಗ ಆ ಕಡೆನೆ ಚಾವ್ಡಿ ಇರೋದು. ಅದ್ರ ಪಕ್ಕುಕ್ಕೆ ಗರಡಿಮನೆಯಿದೆ. ಅಲ್ಲಿಂದ್ಲೆ ಈ ಸದ್ದು ಕೇಳ್ತಿರೋದು.’
‘ಈ ರ‍್ನಾಗೆ ಜಟ್ಟಿಗಳು ಇದಾರ?’
‘ಇಲ್ಗೆ ಐವತ್ತು ರ‍್ಸುಗಳ ಹಿಂದೆ ಮಹಿಸೂರು ದರ‍್ಗಳು ಈ ಕಡಿಕೆ ಬಂದಿದ್ದಾಗ ಇಲ್ನ ಜಟ್ಟಿಗಳು ಅವ್ರಿಗೆ ವಸಿಕರ ನೋಡ್ಕಂಡು ಮಹಿಸರ‍್ಗಾನ ಬಿಟ್ಬಂದಿದ್ರಂತೆ. ಅವ್ರ ನಿಷ್ಟೆ ನೋಡಿ ಈ ರ‍್ನೆ ಜಟ್ಟಿಗಳ್ಗೆ ಬಳ್ವಳ್ಕೆಯಾಗಿ ಬಿಟ್ಕೊಟ್ಟವ್ರೆ. ಅದಲ್ದೆ ಇಲ್ನ ಜಟ್ಟಿಗಳ್ನೆ ತಮ್ಮ ಅಂಗರಕ್ಷಕರಾಗಿ ಇಟ್ಕಂಡ್ರಂತೆ. ಆಗ್ನಿಂದ ಈ ರ‍್ನಾಗೆ ಗರಡಿಮನೆಯಾಗಿ ಸುತ್ಮುತ್ತೋರೆಲ್ಲ ಬಂದು ಕಸರತ್ತು ಕಲಿತಾವ್ರೆ. ಅದುಕ್ಕೆ ಈಟೊತ್ತಾದ್ರು ಅದ್ರ ಸದ್ದು ಕೇಳ್ತಿದೆ. ಇನ್ನೇನು ಬಂದ್ಬಿಟ್ವಿ. ಇದ್ನ ದಾಟಿರೇ ಗುಪ್ಪಟ್ಣ ಸಿಕ್ಬಿಡ್ತದೆ. ಅಲ್ಲಿ ದೊಡ್ಡಮ್ಮ ಸ್ಯಾನೆ ಘನ್ವಂತೆ. ಅವ್ಳು ಯೋಳದೆ ಇಲ್ಲೆಲ್ಲ ನಡ್ಯೋದು. ದೊಡ್ಡಮ್ಮಂಗೆ ನಡ್ಕೊಳ್ಳೋರು ಈ ಸುತ್ಮುತ್ನಾಗೆ ಸ್ಯಾನೆನೆ ಇದಾರೆ. ಬಾ ದಡಿ ದಡಿ ತಡ ಆತದೆ.’
ಬೆಳ್ಕೊತ್ನಾಗ ಯಾವಾಗನ ಬಂದು ದೊಡ್ಡಮ್ಮನ ರ‍್ಸುನ ಮಾಡ್ಬೇಕು ಅಂದ್ಕಂಡು ಗಡ್ಡದ್ಮುನಿಗಳ್ನ ಹಿಂದೆ ನಡಿತಿದ್ದ ರ‍್ಸಯ್ಯ.
ಸೂರಪ್ಪ ಕಣ್ಬಿಡದ್ಕೆ ಮುಂಚೆನೆ ಗರ‍್ವಯ್ಯ ನಡ್ದ ದಾರಿನ ಅಂರ‍್ಸಕಂಡು ದಡದಡನೇ ಜೀವುಳ್ಗೆಬೆಟ್ಟುದ್ ತಪ್ಲಿಗೆ ಬಂದಿದ್ರು. ಮುಸುಮುಸು ಕತ್ಲು. ಯರ‍್ಮಕನು ಕಾಣ್ತಿರಿಲ್ಲ. ಅವ್ರ ಆಕಾರಗಳ್ನೋಡ್ಕಂಡು ಇವ್ರು ಯೆಂಗುಸ್ರು, ಗಂಡುಸ್ರು ಅಂತ ಕಾಣ್ಕಬೋದಿತ್ತು. ಜೀವುಳ್ಗೆಬೆಟ್ದ ದಕ್ಸುಣುದ್ ದಿಕ್ನಾಗೆ ಒಂದ್ಗುಡಿ ಮುಂದೆ ಜನ ತುಂಬೋಗಿತ್ತು. ಅಲ್ಲಿ ದೇವ್ರ ದೀಪ್ಗಳು ಉರಿತಿದ್ವು. ಎಲ್ರೂಗು ಆ ಗೆಡ್ಡೆಗಳಿದ್ದ ಸುಲಾಕ್ನ ಮಚ್ಚೆಗಳು ತೋರುಸ್ತಿದ್ವು. ಆ ಗುಡಿ ಸುತ್ಮುತ್ತ ಕೆಲುವ್ರು ಮಲ್ಗಿದ್ರು, ಕೆಲುವ್ರು ಕೂತಿದ್ರು, ಕೆಲುವ್ರು ಏನೇನೊ ಅರಿತಿದ್ರು. ಮೂಗುಬಾಯಿ ಮುಚ್ಕಂಡು ಆ ಗೆಡ್ಡೆಗಳ್ಗೆ ಮದ್ದು ಹಚ್ತಿದ್ರು, ಗೆಡ್ಗೆ ಬಟ್ಟೆ ಕಟ್ತಿದ್ರು. ಅದ್ನ ನೋಡಿ ರ‍್ಸಯ್ಯ ಗಡ್ಡದ್ಮುನ್ಗಳ ಕೇಳ್ದ ‘ಗರ‍್ವಯ್ನೋರೆ ಯಾವ್ದು ಈ ಪ್ರಾಂತ್ಯ. ಯಾವ್ಸೀಮೆ. ಇಲ್ಗ್ಯಾಕೆ ಬಂದ್ವಿ. ನಮ್ಕಡೆ ಇರಂಗೆ ಇಲ್ಲೂ ಜನ ಅದೇ ಜೊಡ್ಡಿಂದ ನರಳ್ದಂಗೆ ಕಾಣ್ತರೆ. ಇವ್ರಿಗೆಲ್ಲ ವಾಸಿ ಆದಂಗಿದೆ. ಯಾವ್ದೇವ್ರು ಇದು. ಇವರ‍್ನೆಲ್ಲ ಕಾಪಾಡ್ತಿರೋದು?’ ಎಂದು ಗಡಿಬಿಡಿ ಮಾಡಿ ಕೇಳ್ದ.
ಅದುಕ್ಕೆ ಗಡ್ಡುದ್ಮುನ್ಗಳು ‘ಊನಪ್ಪ ಇಲ್ಲು ಅದೇ ಜೊಡ್ಡು ಬಂದಿದೆ. ದೇಸ್ದೇಸನ್ನೆಲ್ಲ ಆ ಜೊಡ್ಡು ನುಂಗಿಹಾಕಕ್ಕೆ ಹೊಂಚಾಕಿ ಕಾಯ್ತಿದೆ. ಇದು ದೊಡ್ಕಾಯಪ್ಪ ಅನ್ನೋ ದೇವ್ರು ನೂರೈವತ್ತು ರ‍್ಸದಿಂದ್ಲು ಈ ದೇವ್ರು ಇಲ್ಲಿ ನೆಲ್ಗೊಂಡವ್ನೆ. ಬಂದರ‍್ಗೆ ವಸಿಕರ ನೋಡ್ಕಂಡು ಕಾಪಾಡ್ತವ್ನೆ. ಇಲ್ನ ಎಲ್ಲ ಜನ್ರು ಈ ದೊಡ್ಕಾಯಪ್ಪಂಗೆ ನಡ್ಕೊತರೆ. ಈ ಜೊಡ್ಡು ಬಂದ್ಮೇಲೆ ಇಲ್ಗೆ ಬರೋರು ಜಾಸ್ತಿ ಆಗ್ಯವ್ರೆ. ಅದಲ್ದೆ ಇದ್ರ ಹಿಂಬಾಸ್ಗೆ ಇರೋದೆ ಜೀವುಳ್ಗೆ ಬೆಟ್ಟ. ಈ ಬೆಟ್ದಾಗೆ ಕಣ್ಣಿಗೆ ಬೇಕಾದ ಮದ್ದಿನ್ಗಿಡ ಇದಾವೆ. ಯಾವ್ದು ಯಾವ್ಜಡ್ಡುಗೆ ಅಂತ ಗೊತ್ತರ‍್ಬೇಕು. ಅಸಂದರ್ಪ ಆದ್ರೆ ಒಂದೋಗಿ ಇನ್ನಂದಾತದೆ. ಅದ್ಕೆ ನಿಂಗೆ ಆ ಗಿಡ್ವ ತರ‍್ಸನ ಅಂತ ರ‍್ಕಂಬಂದಿದ್ದು. ಅದಲ್ದೆ. ಸೂರಪ್ಪನ ಕರ‍್ಣ ಬೀಳೋದ್ಕೆ ಮುಂಚೆನೆ ಆ ಸೊಪ್ಪುನ್ನ ಕಿತ್ಕಬೇಕು. ಬೆಳ್ಕು ರ‍್ದ ಮೇಲೆ ಆ ಗಿಡ್ದ ಎಲೆಯ ಬಣ್ಣ ಬದ್ಲಾಗ್ತದೆ. ಆಮೇಲೆ ಹುಡ್ಕಿರು ಸಿಗಲ್ಲ. ಕಣ್ಮುಂದೆ ಇದ್ರು ಕಾಣಲ್ಲ. ಬಾ ಬೇಗ ವೋಗಿ ಸೊಪ್ಪು ತರನ ಆಮ್ಯಾಲೆ ಕೂತು ಮಾತಾಡಿರಾಯ್ತು.’ ಅಂತ ಅಲ್ಲಿಂದ ದೊಡ್ಕಾಯಪ್ನ ಗುಡಿ ಹಿಂಬಾಸ್ಗೆ ರ‍್ಕಂಡು ಹೊರಟ್ರು.
ಇದನ್ನು ಓದಿದ್ದೀರಾ?: ಹೊಸ ಓದು | ರಾಜಾರಾಂ ತಲ್ಲೂರು ಅವರ ‘ಮಮ ಡೇಟಾ’: ನಮಗೆ ಡೇಟಾ ಈಗ ಯಾಕೆ ಮುಖ್ಯ?
ನೀರು ಹರಿತಿರೊ ಸಬ್ದುನೆ ಅಂರ‍್ಸಕ್ಕಂಡು ಗಡ್ಡುದ್ಮುನ್ಗಳು ನಡಿತಿದ್ರು. ಆಲೆ ಹಸ್ರುಗಿಡ್ದಗೆ ಮೊಸ್ರು ಚೆಲ್ದಂಗೆ ಬೆಳ್ದಿಂಗ್ಳು ಹರಡ್ಕಂಡ್ತ ಇತ್ತು. ಕಡ್ದಾದಬೆಟ್ಟ, ರ‍್ಸಯ್ಯ ಏದುಸಿರು ಬಿಡ್ತಿದ್ದ. ಕೈಯಾಗೆ ಕೋಲರ‍್ಕಂಡು ಬರ‍್ಬಿರ‍್ನೆ ನಡೆತಿದ್ರು ಗಡ್ಟಡುದ್ಮುನ್ಗಳು. ಆ ಕೋಲ್ನೆ ಆತಿಡ್ಕಂಡು ಬೆಳ್ದ ಗಿಡಗೆಂಟೆನೆ ಆ ಕಡೆ ಈ ಕಡೆ ಹೊರುಳ್ಸಕಂಡು ನಡಿತ್ತಿದ್ರು. ಅವ್ರು ನಡ್ಯೊ ಬರ‍್ಸಿಗೆ ಈ ದಾರಿ ಅವ್ರಿಗೆ ರ‍್ಚಿತ ದಾರಿ ಅಂತ ಗೊತ್ತಾಗ್ತಿತ್ತು. ಕಲ್ಲುಬಂಡೆ ನಡ್ವೆ ನಡ್ಕಂಡು, ಕೆಲುವು ಕಡೆ ಕೂತ್ಕಂಡು, ಬಕ್ಕಂಡು, ಸಿಕ್ದ ಗಿಡ್ದ ಎಲೆಗಳ್ನ ಮೂಸ್ಕಂಡು ನಡಿತಿದ್ರು. ಆ ವನಾಂತ್ರುದ್ ತುಂಬ ಯಾವ್ದ್ಯಾದೋ ಎಲೆಗಳು ತರವರಿ ವಾಸ್ನೆಗಳ್ನ ಕೊಡ್ತಿದ್ವು. ರ‍್ಸಯ್ಯನು ಗಡ್ಡುದ್ಮುನ್ಗಳು ಮೂಸ್ನೋಡ್ದ ಎಲೆಗಳ್ನ ಮೂಸ್ದ. ಸರೀಳ್ದ ದಣ್ವು ಕಡ್ಮೆ ಆಗಿ ರ‍್ಸ ಬಂದಂಗೆ ಆಗ್ತಿತ್ತು. ಸರರ‍್ದಾಗೆ ಚಯತನ್ಯ ಮೂಡಿ ಮತ್ತಷ್ಟು ನಡ್ಯೋ ಸತು ಬಂದ್ಬಿಡದು. ನಡ್ದಿದ್ದೆ ಗೊತ್ತಾಗ್ದಂಗೆ ಗರ‍್ವಯ್ಯನ ಅಂರ‍್ಸಕ್ಕಂಡು ಬತ್ತಿದ್ದ. ಅ ಬಂಡೆ ಈ ಬಂಡೆ ಹತ್ತಿ. ಅಲ್ಲಿಳ್ದು. ದಿಬ್ಬ ಏರಿ. ಜರ‍್ತಿರೋ ಬಂಡೆನಾಗೆ ನಿಧಾನುಕ್ಕೆ ಆತಿಡ್ಕಂಡು ನಡಿತಿದ್ದ. ಪಾಟುಸಿಗ್ದೆ ಜಾರಿ ಕೆಳುಕ್ಕೆ ಬಿದ್ಬಿಟ್ಟು. ಕಯ್ಯಿಮಯ್ಯೆಲ್ಲ ರ‍್ಚಗಬಿಟ್ವು. ಆತಿಡ್ಕಳ್ಳಕ್ಕೆ ಅಲ್ಲಿದ್ದ ಬಳ್ಳಿ ಹಿಡ್ಕಂಣಕ್ಕೆ ನೋಡ್ದ ಅದು ಕೈಗೆ ಸಿಗೋವಷ್ಟರಲ್ಲಿ ಕೆಳ್ಗಿದ್ದ.
ಅದ್ನ ಗಡ್ಡುದ್ಮುನ್ಗಳು ನೋಡಿರು. ‘ತಳಿ ಬಂದೆ ಅಂತ’ ಎತ್ಲೊ ವೋದ್ರು. ಯೇಟೋ ಹೊತ್ತಾದ್ಮೇಲೆ ಒಂದು ದೊಡ್ಡ ಗಳ ಹಿಡ್ಕಂಡು ಬಂದ್ರು. ಆ ಗಳ ಸೊಲ್ಪ ಅಂಕುಡೊಂಕಾಗಿ ಉರುಟುಉರುಟಾಗಿತ್ತು. ಅದ್ನ ರ‍್ಸಯ್ಯಂಗೆ ಕೊಡ್ತ ‘ನೋಡು ರ‍್ಸಯ್ಯ ಇದು ಸಾಮಾನ್ಯುದ್ ಗಳ ಅಲ್ಲ. ಸತು ಕೊಡೋ ರ‍್ದಿಂದ ಕಿತ್ಕಂಡು ಬಂದಿರೋದು. ಸುಮ್ನೆ ಸುಮ್ನೆ ಯಾವ್ದೆ ಗಿಡಾನ ಕಡಿಬರ‍್ದು. ಆದ್ರು ನಿಂಗೆ ಇದ್ನ ಕೊಡ್ತಿದ್ದೀನಿ ಇದ್ನ ಜೀಮಾನಪರ‍್ತಿ ಜೊತೆಗಿಟ್ಕ. ನಿಂಗೆ ಸತು ಕೊಡ್ತದೆ. ರ‍್ಗೋಲಾಗಿ ಕೈ ಹಿಡ್ದು ನಡುಸ್ತದೆ. ತಗ. ಬಾ ಬೇಗ.’ ಅಂತ ಆ ಗಳನ ರ‍್ಸಯ್ಯನ ಕೈಯ್ಗೆ ಕೊಟ್ರು. ಕೆಳ್ಗೆ ಜಾರಿಬಿದ್ದಿದ್ದ ರ‍್ಸಯ್ಯ ಅದನ ಕಣ್ಗೊತ್ಗಂಡು ಅದ್ನೆ ಆತಿಡ್ಕಂಡು ಮೇಲ್ಕೆದ್ದ. ಗರ‍್ವಯ್ನ ಅಂರ‍್ಸಕಂಡು ನಡ್ದ. ಆ ಗಳ ಬಂದ್ಮೇಲೆ ರ‍್ಸಯ್ಯಂಗೆ ಮತ್ತಷ್ಟು ಹುಮ್ಮಸ್ಸು ಬಂತು. ಗಡ್ಡುದ್ಮುನ್ಗಳು ನಡ್ದಷ್ಟೆ ಬರ‍್ಸಾಗಿ ಇವ್ನು ನಡಿತಿದ್ದ. ದಾರಿಯಿಲ್ದ ಜೀವುಳ್ಗೆ ಬೆಟ್ದಲ್ಲಿ ಗರ‍್ವಯ್ಯ ದಾರಿ ಸೋದುಸ್ತ ಮುನ್ನಡಿತಿದ್ದ. ಅಲ್ಲೊಂದು ಆಲ್ದಮರ ಎದ್ರಾಯ್ತು. ‘ಓ ಇಲ್ಲಿದ್ಯ ನಾವೇನು ತಪ್ಪುಸ್ಕಬಿಟ್ವೇನೋ ಅಂದ್ಕಂಡೆ. ಏನಾದ್ರು ತಪ್ಪಾಯ್ತ ಅನ್ಕಂಡಿದ್ದೆ. ಈಗ ಸರಿದಾರಿ ಕಾಣ್ತು. ಬಾ ರ‍್ಸಯ್ಯ ಇನ್ನೇನು ಮದ್ದಿರೊ ಜಾಗ್ಕೆ ಬಂದ್ಬಿಟ್ವಿ’ ಅಂತ ಮತ್ತೂ ದರದರನೇ ನಡುದ್ರು. ರ‍್ಸಯ್ಯನು ದರದರನೇ ಗರ‍್ವಯ್ನೋರ ಹಿಂದೆ ಹೋದ. ಎರಡು, ಮೂರು ಆಲ್ದರ‍್ಗಳು ಸಿಕ್ಕಿವು. ಮರ‍್ನೆ ಆಲ್ದರ‍್ದ ಬರ‍್ನ ಹಿಡ್ಕಂಡು ಕೇಳುಕ್ಕಿಳಿದ್ರು.
ಅಲ್ಲೆಲ್ಲೊ ನೀರು ಹರಿತಿರೋದು ಸಣ್ದಾಗಿ ಕೇಳ್ತಿತ್ತು. ಬರ‍್ನ ತುದಿ ತಟಾದ್ಮೇಲೆ ಅಲ್ಲಿರೋ ಬೇಲಿಗಿಡ್ಗಳ ಕೆಳ್ಗೆ ತೂರಿ ಅಲ್ಲಿಂದ ಉಳ್ಕಂಡು, ದೇಕ್ಕಂಡು ನಡಿತಿದ್ರು. ದೇಕ್ತ ಇದ್ರೆ ಆ ಬೇಲಿಗೆ ಅದ್ರ ಮಧ್ಯದಲ್ಲಿರೋ ಮುಳ್ಳಿನ್ಗಿಡುಕ್ಕೆ ಮೈ ಸ್ರ‍್ಮ ಸಿಕ್ಕಿ ಅದು ಎಳ್ದುಬಿಟ್ತು. ಅದ್ರಲ್ಲು ಬಾಡ್ಬಡ್ಕಗಿಡ ಬಂದಾಂಗಂತೂ ಸ್ರ‍್ಮದ ಸಮೇತ ಮೈ ಬಾಡ್ನು ಹಿಡ್ಕಬಿಡದು. ಅಂಗಾದಾಗ ಗಡ್ಡುದ್ಮುನ್ಗಳು ಅಲ್ಲೆ ಬೆಳ್ದಿದ್ದ ಯಾವ್ದೋ ಬಳ್ಳಿಯ ಎಲೆಗಳ್ನ ರ‍್ದು ಮೈಗಾಯುಕ್ಕೆ ಹಚ್ಕಂತಿದ್ರು. ಅದುನ್ನೆ ರ‍್ಸಯ್ಯಂಗೆ ಕೊಡ್ತಿದ್ರು. ಆ ಬೇಲಿಗಿಡ್ದು ವನಾಂತ್ರುದ ಮಧ್ಯೆ ಅಲ್ಲಲ್ಲೇ ಇದ್ದ ಯಾವ್ದೊ ಬಳ್ಳಿಯ ಬುಡ ಅಗ್ದು ಅದ್ರ ಗೆಡ್ಡೆನ ತಾವು ತಿಂದು ರ‍್ಸಯ್ಯಂಗೆ ಕೊಡ್ತಿದ್ರು. ರ‍್ಸಯ್ಯ ಏನು ಮಾತಾಡ್ದಂಗೆ ಅವ್ರು ಹೇಳಿದ್ನೆಲ್ಲ ಮಾಡ್ತಿದ್ದ. ಹಾವು, ಮಂಡ್ರುಗಪ್ಪೆ, ಝರಿ ತಮ್ಪಾಡ್ಗೆ ರ‍್ದೋಗ್ತಿದ್ವು. ಎಲ್ಲೋ ದರ‍್ದಾಗೆ ನವ್ಲು ಕೂಗಾಕ್ತಿದ್ವು. ಕಾಡಂದಿಗಳು ಗುಟರ‍್ಹಾಕಂಡು ಓಡಾಡ್ತಿದ್ವು. ಚಿಪ್ಪಂದಿಗಳು, ಏಮಿಗಳೆಲ್ಲ ರ‍್ದಾಡ್ದ ಹಾದಿ ಆ ಬೇಲಿಯೊಳ್ಗೆ ಕಾಣ್ತಿತ್ತು. ಅಡ್ವಿಮೇಕೆ, ಕಾಡ್ಕುರಿಗಳು ಆಗ್ತಾನೆ ಉದ್ರುಸಿದ ಪಿಚ್ಕೆಗಳು ಹಸಿಹಸಿಯಾಗಿದ್ವು. ಅಲ್ಲೇ ಎಲ್ಲೋ ಗಿಡುದ್ಬದಿನಾಗೆ ರ‍್ಬೋದು ಅನ್ಕಂಡ ರ‍್ಸಯ್ಯ. ಭಯ ಆದ್ರು ಗರ‍್ವಯ್ಯ ಯಾವ್ದೆ ಹೆದ್ರುಕ್ಕೆ ಇಲ್ದೆ ನುಗ್ತಿರೋದು ರ‍್ಸಯ್ಯಂಗೆ ಧೈರ್ಯ ಕೊಡ್ತಿತ್ತು.
ಇದನ್ನು ಓದಿದ್ದೀರಾ?: ಹೊಸ ಓದು | ಶೂದ್ರ ಶ್ರೀನಿವಾಸರ ‘ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’
ತೆವುಳ್ಕಂಡು ತೆವುಳ್ಕಂಡು ಆ ದಾರಿನ ತಟಾಯ್ದು. ಈಗ ಸೊಲ್ಪ ಸೊಂಟನ ಬಗ್ಗುಸ್ಕಂಡು ಮುನ್ನಡೆದ್ರು. ಒಂಚೂರು ತಲೆ ಎತ್ತಿರು ಮೇಲ್ನ ಗಿಡ್ದಕೊಂಬೆಗಳು ತಲೆಗೆ ಬಡಿತಿದ್ವು. ಬಗ್ಗಿಯೆ ನಡಿಬೇಕಿತ್ತು. ಅಲ್ಲಿಂದ ದೊಡ್ಡ ವನಾಂತ್ರುದ ನಡ್ವೆ ಇಬ್ರು ಬಂದ್ಬಿಟ್ರು. ಅಲ್ಲಿ ತರಾವರಿ ಗಿಡ್ಳುಗ್ಳು, ರ‍್ಗಳು, ಹಣ್ಣಿನ್ಗಿಡ್ಗಳು, ಬಳ್ಳಿಗಳಿಂದ ತುಂಬೋಗಿತ್ತು. ಅದ್ರಾಗಿನ ಎಲೆಗಳ್ನ ತರ‍್ತ ಗರ‍್ವಯ್ನೋರು ‘ನೋಡು ರ‍್ಸಯ್ಯ ಇಲ್ಲಿ ಎಲ್ಲ ಜೊಡ್ಡಗಳ್ಗು ಮದ್ದಿನ್ಗಿಡ್ಗಳಿವೆ. ಆದ್ರೆ ಯಾವ್ಯಾವ ಕಾಲ್ದಾಗೆ ಬಿಡ್ಸಕಂಡೋಗ್ಬೇಕು ಅಂತ ಗೊತ್ತರ‍್ಬೇಕು. ಸೊಲ್ಪ ಯಾಮಾರಿದ್ರು ಇಲ್ಲಿಂದ ವೋಗಕ್ಕಾಗಲ್ಲ. ಮಂತ್ರ ತಂತ್ರ ಮಾಡಕ್ಕೆ, ಚಿನ್ನಗಿನ್ನ ಮಾಡಕ್ಕೆ, ಮದ್ದುಗಿದ್ದು ಮಾಡಕ್ಕೆ ಈ ಎಲೆಗಳ್ನೆ ಬಳ್ಸೋದು. ಗೊತ್ತಿಲ್ದೆ ಯಾವ್ದೊ ಕಿತ್ಕಂಡ್ರೆ ಇಲ್ಲೆ ಬಿದ್ದು ಮರ‍್ಚೆಹೋಗ್ತರೆ. ಎದ್ದೇಳ್ಬೋದು. ಇಲ್ಲ ಇಲ್ಲೇ ಜೀವ ಕೊನೆಯಾಗ್ಬೋದು. ಅದುಕ್ಕೆ ಯಾವ್ದೇ ಎಲೆನ ಮುಟ್ಬೇಡ. ಈಗಿನ ಯಾವ್ಗಿಡ ಅಂತ ತೋರುಸ್ತೀನಿ. ಅದ್ನ ಮಾತ್ರ ಬಿಡುಸ್ಕಂಡ್ರಾಯ್ತು.’ ಅಂದ್ರು.
ರ‍್ಸಯ್ಯ ಆ ಜಾಗ್ವ ನೊಡಿ ಮೈ ರ‍್ತಿದ್ದ. ಇಂಗೆಲ್ಲ ಬೇಲಿಯೋಳ್ಗೆ ತೂರಿಬಂದಿದ್ರು ದಣ್ವಾದಂಗಿಲ್ಲ. ಬೇಲಿ, ಬಾಡ್ಬಡ್ಕ ಗಿಡ್ಗಳು ಮೈ ಸರ‍್ಮ ಕಿತ್ತಿದ್ರು ನೋವು ಆಯ್ತಿಲ್ಲ. ಗರ‍್ವಯ್ಯ ಯಾವ್ದ್ಯಾವ್ದೊ ಎಲೆ, ಗೆಡ್ಡೆ ತಿನ್ಸಿರು ಅವೆಲ್ಲ ಮದ್ದೆ ರ‍್ಬೋದು ಅನ್ನುಸ್ತು. ಮಗಿನಂತೆ ಗರ‍್ವಯ್ಯ ಹೇಳ್ದಂಗೆ ಕೇಳ್ತಿದ್ದ. ಗಡ್ಡುದ್ಮುನಿಗಳು ಆ ಗಿಡ್ಗುಳ ಜೊತೆ ಏನೋ ಮಾತಾಡ್ದಂಗೆ ಪಿಸುಗುಟ್ತಿದ್ರು. ತದೇಕ ಚಿತ್ತದಿಂದ ರ‍್ಸಯ್ಯ ಅವರ‍್ನ ನೋಡ್ತಿದ್ದ. ಎಸ್ಟೋ ಹೊತ್ತು ಅಂಗೆ ನಿಂತಿದ್ರು ಗರ‍್ವಯ್ನೋರು. ಆ ಗಿಡ್ಗಳ್ಗೆ ಕೈ ಮುಗ್ದು ಬರ‍್ನ ಬುಡ್ದಲ್ಲಿ ಪಾತಿ ಮಾಡಿ ಅದ್ರು ಸುತ್ತ ಮಣ್ಣು ಹ್ಯಾರಾಕಿ, ಅಡ್ಬಿದ್ದು ಆಮೇಲೆ ಒಂದೊಂದೆ ಎಲೆನ ಬಿಡುಸ್ಕಂಡು ಜೋಳ್ಗೆಯೊಳಿಕ್ಕೆ ಹಾಕ್ಕಂತಿದ್ರು. ಅದ್ನ ನೋಡಿ ರ‍್ಸಯ್ಯನು ಆ ಎಲೆಗಳ್ನ ಬೇಗ್ಬೇಗ ಬಿಡುಸ್ಕಣಕ್ಕೆ ನೋಡ್ದ. ಗರ‍್ವಯ್ಯ. ಕೈ ಸನ್ನೆಲಿ ಬೇಡ ಅಂದು ತಾವೇ ಎಲೆ ಬಿಡ್ಸಿ ಬಿಡ್ಸಿ ರ‍್ಸಯ್ಯನ ಜೋಳ್ಗೆಗೆ ಆಗ್ತಿದ್ರು. ಮೌನವ್ರತದಂತೆ ಮಾತು ಕತೆಯಿಲ್ದೆ ಪೂಜೆತರ ಗಡ್ಡುದ್ಮುನ್ಗಳು ಮಾಡ್ತ ಇದ್ರು. ತಾವು ತಂದು ಜೊಳ್ಗೆ ತುಂಬ್ಕಂಡ್ವು. ಹೊರುವಷ್ಟು ಎಲೆಗಳ್ನ ಕಿತ್ಕಂಡು ಬಂದ ಹಾದೆಗಾಸಿ ನಡುದ್ರು, ತೇವ್ಳಿರು, ಸೊಂಟಬಗ್ಸಿ ನಡುದ್ರು, ದೇಕುದ್ರು ಕೊನ್ಗೆ ಮರ‍್ನೆ ಆಲ್ದರ‍್ದತ್ರ ತೇಲಿರು. ಎಲೆಬಿಡ್ಸುಕಣಕ್ಕೆ ಸುರುಮಾಡ್ದಂಗಿದ್ದ ಗರ‍್ವಯ್ಯ ಮಾತ್ನಾಡರ‍್ಲಿಲ್ಲ. ಆಲ್ದರ‍್ದತ್ರ ಬಂದಂಗ ಬಂದ ಕಡಿಕೆ ಅಡ್ಬಿದ್ದು, ಕಯ್ಮುಕ್ಕಂಡು ಏನೇನೋ ಹೇಳ್ಕಂಡ್ರು. ಆಟೊತ್ಗೆ ಸೂರಪ್ಪ ಪಿಳಿಪಿಳಿ ಕಣ್ಬಿಟ್ಕಂಡು ಬತ್ತಿದ್ದ. ‘ಹೂ ನಡಿ ರ‍್ಸಯ್ಯ ನಾವ್ ಬಂದ ಕಾರ್ಯ ಮುಗಿತು.’ ಅಂದ್ರು ರ‍್ಸಯ್ಯಂಗೆ ಆಶ್ಚರ್ಯ ಯಾಕೆ ಅಲ್ಲೇನು ಮಾತಾಡ್ಲಿಲ್ಲ ಅಂತ ಕೇಳ್ಲ ಅಂದ್ಕಂಡ. ಆದ್ರೆ ಬೇಡ ಗರ‍್ವಯ್ಯವ್ರೆ ಹೇಳ್ತರೆ ಅಂತ ಎಲೆಗಳ್ನ ಹೊತ್ಕಂಡು ಮುನ್ನಡಿತಿದ್ದ.
ಎರಡ್ನೆ ಆಲ್ದಮರ ಸಿಕ್ಕೆಟ್ಗೆ ಅಲ್ಲಿ ಗರ‍್ವಯ್ಯ ಕೂತ್ಕಂಡ್ರು. ಕಣ್ಣುಮುಚ್ಚಿ ಏನೋ ಹೇಳ್ಕತ್ತಿದ್ರು. ನಿಧಾನುಕ್ಕೆ ಕಣ್ತರ‍್ದು ನಸುನಕ್ಕು ರ‍್ಸಯ್ಯನ ಕಡೆ ನೋಡುದ್ರು. ಅಲ್ಲಿರ‍್ಗು ಗಂಭೀರವಾಗಿದ್ದ ಗಡ್ಡುದ್ಮುನ್ಗಳ ಮಕ ಆಡೋ ಮಗಿನಂಗಾಯ್ತು. ರ‍್ಸಯ್ಯಂಗು ರ‍್ಸ ಬಂದಂಗಾಗಿ ಕೇಳ್ದ ‘ಗರ‍್ವಯ್ನೋರೆ ಯಾಕೆ ಅಲ್ಲೇನು ಮಾತ್ನಾಡ್ಲೇ ಇಲ್ಲ.’ ಅಂದ. ‘ರ‍್ಸಯ್ಯ ಅವ್ಗುಳ್ನ ಕೇಳ್ದೆ, ಅವ್ಗಳು ಒಪ್ಗೆ ಪಡಿದೆ ಎಲೆ ಬಿಡುಸ್ಕಳಕ್ಕೆ ಆತದ. ಅವ್ಗುಳ್ಗೆ ಒಪ್ಗೆ ಕೇಳ್ಬೇಕು. ಸರಣು ಮಾಡ್ಬೇಕು. ಅವ್ಗಳು ಅಪ್ಣೆ ಮಾಡ್ದ್ಮೇಲೆ ಬಿಡಿಸ್ಕಬೇಕು. ಅದ್ಕೆ ಕಾದೆ ಕೆಳ್ಗಬಿದ್ದು ಸರಣು ಮಾಡ್ದೆ. ಲೋಕ್ದಾಗೆ ಬಂದಿರೋ ಜೊಡ್ನೆಲ್ಲ ಹೇಳ್ದೆ. ನೀನೇ ಕೈ ಬಿಟ್ರೆ ಈ ನರುಮನುಸ್ರು ರ‍್ತಾರ ಅಂತ ಕೇಳ್ಕಂಡೆ. ಎಲೆಗಳು ಅಲ್ಲಾಡ್ಲೇ ಇಲ್ಲ. ಕೊನ್ಗೆ ಆ ಗಿಡ್ಕು ರ‍್ಣೆ ಬಂತು. ಅದುಕ್ಕೆ ಅದು ಹೇಳ್ದಂಗೆ ಬಿಡುಸ್ಕಳ್ತ ವೋದೆ. ನೀನು ಇಲ್ಗೆ ಬಂದಾಗ ಅದ್ರ ಅಪ್ಣೆ ಪಡ್ದೆ, ಅದು ಎಷ್ಟು ತರ‍್ಸುತ್ತೋ ಅಷ್ಟುನ್ನ ಮಾತ್ರ ಬಿಡುಸ್ಕಂಡು ವೋಗ್ಬೇಕು. ಅದ್ನು ಕೇಳ್ದೆ ಕಿತ್ಕಂಡ್ರೆ ಹಾವಾಗಿ ಕಚ್ಬಿಡುತ್ತೆ. ಅದು ಮನುಸ್ರು ತರನೆ. ಅದ್ಕು ಹೇಳ್ಕೆ ಕೇಳ್ಕೆ ಬೇಕು.’ ಅಂದ್ರು. ಓಹೊ ಗರ‍್ವಯ್ನೋರು ಗಿಡ್ರ‍್ನು ಮಾತಾಡುಸ್ತಾರೆ. ಮಹಾಮಹೀಮರು. ಗರ‍್ವಯ್ನೋರು ಯೋಳದ್ನ ಪಾಲುಸ್ಬೇಕು ಅನ್ನುಸ್ತು ರ‍್ಸಯ್ಯಂಗೆ.
ಇದನ್ನು ಓದಿದ್ದೀರಾ?: ಹೊಸ ಓದು | ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’
ಅಂಗೆ ನಡ್ಕಂಡು ರ‍್ವಾಗ ಪಕ್ದಾಗೆ ಹರಿತಿರೋ ಬಜೆಹಳ್ಳುದತ್ರ ವೋಗಿ ನರ‍್ಕುಡ್ದು ಕೈಮುಗ್ದು ಅಲ್ಲೇ ವಸಿ ನೆಳ್ಳಗೆ ಕೂಕಂಡ್ರು. ಸೂರಪ್ಪ ಎಳೆಹುಡುಗನಂಗೆ ಆ ಕಡೆ ಈ ಕಡೆ ಕಣ್ಣು ಪಿಳಿಪಿಳಿ ಅನ್ನುಸ್ತಿದ್ದ. ಅವ್ನ ಆಟ್ವ ನೋಡ್ತ ಗಡ್ಡುದ್ಮುನ್ಗಳು ‘ನೋಡು ರ‍್ಸಯ್ಯ ನಾವು ಬಂದ್ಕಾರ್ಯ ಸುಸೂತ್ರವಾಗಿ ಆಗಿದ್ಕೆ ಆ ಸೂರಪ್ಪನು ಕುಸ್ಯಗವ್ನೆ. ಈ ಜೀವುಳ್ಗೆಬೆಟ್ಟ ಸಂಜೀವ್ನಿ ಬೆಟ್ಟಿದ್ದಂಗೆ ಎಲ್ಲ ಜೊಡ್ಡುಗು ಇಲ್ಲಿ ಮದ್ದ್ವೆಂತೆ. ಆದ್ರೆ ಅದು ರ‍್ವಾಗ್ಬೇಕು ಅಂದ್ರೆ ಸ್ಯಾನೆ ಸಾಧ್ನೆ ಮಾಡ್ಬೇಕು. ಈ ಸಿದ್ದಿಗಿದ್ದಿಯೆಲ್ಲ ಸುಮ್ನೆ ಅಲ್ಲ. ಒಂದೊಂದು ಗಿಡ್ನು ಮುಸ್ಕಂಡು ನನ್ನ ಜೀಮಾನ್ವೆ ಇಲ್ಲಿ ಕಳ್ದಿದ್ದೀನಿ. ಸಣ್ಣೊನಿದ್ದಾಗ ಇದ್ರ ಎಲೆಗಳ್ನ ಮುಟ್ಟಿ ಮುಟ್ಟಿ ನೋಡ್ತಿದ್ದೆ. ಈ ಬೆಟ್ಟುಕ್ಕೆ ಬಂದಾಗ ಅದ್ರ ಸುವಾಸ್ನೆ ನನ್ನ ಸೆಳಿತಿತ್ತು. ಇಲ್ಲೆ ಇದ್ಬಿಡಾನ ಅಂತ.
ಅಗೊ ಅಲ್ಲಿ ಕಾಣುತ್ತಲ್ಲ. ಆ ಗವಿನಾಗೆ ಕತೆ ಆಗ್ತಿದ್ದೆ. ಒಂದಿನ ಇದ್ಕಿದ್ದಂಗೆ ಯಾರೊ ಕಣ್ಗೆ ಹಸ್ರುನೀರು ಎರುಸ್ದಂಗಾಯ್ತು. ಕಣ್ಬಿಟ್ಟು ನೋಡಿರೆ ಯಾವ್ದೋ ದೇವ್ತೆ ನಿಂತಿತ್ತು. ಎಡಗಣ್ಣಲ್ಲಿ ನೀರು ಹರಿತ್ತಿತ್ತು. ಯಾರು ಯಾಕೆ? ಅಂತೆಲ್ಲ ಕೇಳ್ದೆ ಅಳೋ ರಾಗ ಮಾತ್ರ ಕೇಳ್ತಿತ್ತು. ತಡ್ಕಿ ನೋಡ್ದೆ ಕೈಗೆ ಸಿಗ್ಲಿಲ್ಲ. ರ‍್ದಾಡ್ಬಿಟ್ಟೆ. ಆಮೇಲೆ ‘ನೀನಿಲ್ಲಿ ನೆಮ್ದಿಯಾಗಿ ಮಕ್ಕೊ. ಅಲ್ಲೆ ಜನ, ಜಾನ್ವಾರೆಲ್ಲ ಜೊಡ್ಡಗೆ ಜೀವ ಕಳ್ಕಂತವೆ’ ಅಂತ ಕೆನ್ಗೆ ಹೊಡ್ದಂಗಾಯ್ತು. ಆ ನನ್ತಾಯಿ ಯಾರರ‍್ಬೋದು ಅಂತ ಜೊಡ್ಡು ವಾಸಿಮಾಡಕ್ಕೆ ಬೇಕಾದ ಮದ್ದೆಲೆಗುಳ್ನ ಬುಡುಸ್ಕಂಡು ವಲ್ಟೆ. ವೋದೋದ್ ಕಡೆಯೆಲ್ಲ ಜೊಡ್ಡು ಬಂದ ಜನ್ವೆಲ್ಲ ನರುಳ್ತಿದ್ರು. ಅವ್ರಿಗೆಲ್ಲ ಮದ್ದುಕೊಟ್ಟು ಆ ನನ್ತಾಯ್ನ ಹುಡುಕ್ದೆ. ಸಿಗ್ಲೇ ಇಲ್ಲ. ಯಾವೂರು? ಯಾವ್ದೇಸ? ಅನ್ನಂಗೆ ಸುತ್ತಾಡ್ದೆ. ಅಂಗೇ ಸುತ್ತಾಕ್ಕಂಡು ರ‍್ವಾಗ ನಿಮ್ಮರ‍್ನಾಗೆ ನನ್ನ ಕನುಸ್ನಾಗೆ ಬಂದ ದೇವ್ತೆ ನೋಡ್ದೆ. ಅಲ್ನ ಜನ ಆ ಜೊಡ್ಡನಾಗೆ ನರುಳ್ತಿದ್ರು. ಇದುಕ್ಕೆ ತಾಯಿ ನನ್ನ ಗವಿಯಿಂದ ಬಿಡ್ಸವ್ಳೆ ಅಂತ ಗೊತ್ತಾಯ್ತು. ನಿಂಗೆ ಆ ಮದ್ದನ್ನು ಕೊಟ್ಟು ಮತ್ತೆ ಇಲ್ಲಿ ಗವಿನಾಗಿದ್ದೆ. ಮತ್ತೆ ಅಮ್ಮ ‘ವೋಗೋ’ ಅಂತ ತಳ್ದಂಗಾಯ್ತು. ಅಲ್ನೋಡಿರೆ ಆ ಜೊಡ್ಡು ರ‍್ಬಿಟೈತೆ. ‘ತಪ್ಪಾಯ್ತಮ್ಮ’ ಅಂತ ನಿನ್ನೆ ರ‍್ಕಂಡು ಬಂದೆ. ಅದೇನು ಕನುಸೋ ನಿಜ್ವೋ ಗೊತ್ತಿಲ್ಲ. ಆದ್ರೆ ಆ ನಮ್ತಾಯಿ ಮದ್ದುನ್ನ ನಿಂಗೆ ತರ‍್ಸಂಗೆ ಮಾಡಿಳು.’
ಕೂಸ್ನಂಗೆ ಕೇಳ್ತಿದ್ದ ರ‍್ಸಯ್ಯ ‘ಈ ಬೆಟ್ಟುದಾಗೆ ಈ ಜೀವುಣ್ಕೆ ಸಿಗುತ್ತೆ ಅಂತ ನಿಮ್ಗೆ ಯಂಗೆ ರ‍್ವಾಯ್ತು ಗರ‍್ವಯ್ಯ’.
ಇದು ತಲ್ತಲಮರ‍್ಗಳಿಂದ ಈ ಬೆಟ್ಟ ಸಿದ್ರು, ಸಾದಕ್ರಿಗೆ ಗೊತ್ತಿತ್ತು. ನೂರೈವತ್ತು ರ‍್ಸಗಳ ಹಿಂದೆ ಇಲ್ಲೊಬ್ಬ ರಾಜ ಇದ್ನಂತೆ. ಅವ್ನ ಆನೆಗೆ ಒಂದ್ಸತಿ ಯಾವ್ದೊ ಜಡ್ಡು ಬಂದು ಕಾಲ್ನಾಗೆ ಗಾಯ ಆಗಿ ಕೀವು ಕಿತ್ಕಂಡಿತ್ತಂತೆ. ಅದುಕ್ಕೆ ಏನ್ಮಾಡಿರು ವಾಸಿ ಆಗ್ಲಿಲ್ಲವಂತೆ. ಒಂದಿನ ಯಾರೂ ಇಲ್ದಿರೊ ಸಮಯ್ದಾಗೆ ಕಬ್ಬುಣ್ದ ಸರಪಳಿ ಕಿತ್ಕಂಡು ಈ ವನಾಂತ್ರುಕ್ಕೆ ವೋಗ್ಬಿಡ್ತಂತೆ. ಮರ‍್ದಿನ ಆದ್ಮೇಲೆ ಆ ಆನೆ ಹಿಂದುರಿಗಿ ಬಂದಾಗ ಆನೆ ಕಾಲಲ್ಲಿದ್ದ ಕೀವು ತುಂಬಿದ್ದ ಗಾಯ, ಗೆಡ್ಡೆ ಎಲ್ಲ ವಾಸಿಯಾಗಿ ಮೊದ್ಲಂಗೆ ಆಗ್ಬಿಟ್ಟಿತ್ತಂತೆ. ಆ ಕಬ್ಬುಣ್ದ ಸರಪಳಿ ಬಂಗಾರುದ್ದಾಗಿತ್ತಂತೆ. ಆ ರಾಜ ಕೆಲುವ್ರುನ್ನು ಕಳ್ಸಿ ಅಂಗೆ ಮಾಡ್ದ ಗಿಡ್ರ‍್ಗಳು ಎಲ್ಲವೆ ಅಂತ ಹುಡುಕ್ಸಿನಂತೆ. ಸಿಗ್ಲಿಲ್ವಂತೆ. ಅವ್ನಿಗು ಕುರ ಎದ್ದುದ್ಕೆ ಅದ್ಕು ಮದ್ದು ಬೇಕಿತ್ತು. ಯರ‍್ಗು ಅದ್ರ ಸುಲಾಕ್ ಸಿಗ್ಲಿಲ್ಲವಂತೆ. ಯಾರೋ ದನ ಕಾಯೋ ಹುಡ್ಗಂಗೆ ಗೊತ್ತಿತ್ತಂತೆ. ಅದ್ನ ರಾಜ ಯರ‍್ಗು ಗೊತ್ತಾಗ್ದಂಗೆ ಆ ಹುಡ್ಗನಿಂದ್ಲೆ ಮದ್ದು ರ‍್ಸಿ ತನ್ನ ಕುರ ಕಳ್ಕಂಡ್ನಂತೆ. ಆದ್ರೆ ಆ ಮದ್ದಿನಗಿಡ ಮಾತ್ರ ಗೊತ್ತಾಗ್ಲಿಲ್ಲವಂತೆ. ಅದಲ್ದೆ ಮಹಿಸೂರ ಹೈರ‍್ಖಾನ್ ದೊರೆಗೆ ಬೆನ್ಪಣಿ ಆಗಿ ಸ್ಯಾನೆ ನರುಳ್ತಿದ್ರಂತೆ. ದೇಸ್ದೇಸ್ದ ಹಕಿರ‍್ನ ರ‍್ಸುದ್ರು ಅದ್ನ ವಾಸಿ ಮಾಡ್ಲಿಕ್ಕೆ ಆಗ್ಲಿಲ್ವಂತೆ. ಆಗ ಈ ಜೀವುಣ್ಗೆ ಬೆಟ್ದ ದೊರೆ ಕುರನ್ಗರಾಯ್ರನ ನೋಡಕ್ಕೆ ಬಂದಾಗ ಇಲ್ಲಿ ಮದ್ದಿರೋ ಇಸ್ಯ ಗೊತ್ತಾಗಿ ಇಲ್ಲೆ ಇದ್ನಂತೆ. ಆದ್ರೆ ಹೈದರಾಲಿಖಾನ್ ಇಲ್ಗೆ ಬರೋವಷ್ಟತ್ಗೆ ಕಾಲ ಮೀರೋಗಿತ್ತಂತೆ. ಗಾಯ್ಗಳು ನಿಧಾನುಕ್ಕೆ ಮಾಗ್ತ ಇದ್ವಂತೆ. ಅಸ್ಟ್ರಾಗೆ ಜೀವ ಹೋಯ್ತಂತೆ. ಮೊದ್ಲಿಗೆಯೆ ಇಲ್ಗೆ ಬಂದಿದ್ರೆ ಬದುಕ್ತಿದ್ನಂತೆ.
ಇದನ್ನು ಓದಿದ್ದೀರಾ?: ಹೊಸ ಓದು | ‘ಇಂದಿನ ಜಗತ್ತಿಗೆ ಬೌದ್ಧಧರ್ಮ’ ಬುದ್ಧನನ್ನು ಅರಿಯಲು ಮತ್ತೊಂದು ಮಾರ್ಗ
ಅದಾದ ಯೇಸೋ ರ‍್ಸ ಆದ್ಮೇಲೆ ಆ ರಾಜುನ ಕಾಲ ಮುಗ್ದೋಗಿ ಕುರಕ್ಕೆ ಮದ್ದು ಕೊಟ್ಟ ಈ ಹುಡ್ಗಂಗು ವಯಸ್ಸಾಗಿ, ಮುದುಕ್ನಾಗಿ ಅವ್ನ ಕಾಲ ಕೊನೆ ಆಗ್ತರ‍್ವಾಗ ಅವ್ರ ಮಗಂಗೆ ರ‍್ಕೊಂಡೋಗಿ ತರ‍್ಸಿದ್ನಂತೆ. ಅವ್ನು ಅವ್ರ ಮಗಂಗೆ ಇಂಗೆ ಆ ಗಿಡ್ಗಳ್ನು ನೆನ್ಪಟ್ಕಂಡು ಬತ್ತಿದ್ರು. ಅದು ನಮ್ಮಪ್ಪಂಗೂ ಗೊತ್ತಾಗಿ ಅವ್ರು ಸಾಯೋಕ್ಮುಂಚೆ ನಂಗೆ ಹೇಳಿ ಹೋದ್ರು. ಇದ್ನ ಯಾವ್ದೆ ಕಾರುಣಕ್ಕು ಸ್ವಂತುಕ್ಕೆ ಬಳುಸ್ಕಬೇಡ ಮಗ. ಲೋಕ್ದ ಕಲ್ಯಾಣುಕ್ಕೆ ಬಳ್ಸು. ಬೇರೆ ಏನಾರ ಮಾಡಿರೆ ರಯ್ತಕಾರಿ ಸತ್ತೋಗ್ತಿ ಅಂತ ಯೇಳಿದ್ರು. ನಾನು ಅದ್ನೆ ಸೊಲ್ಪದಿನ ರ‍್ತುಬಿಟ್ಟೆ.
ಆಮೇಲೆ ಯಾರೊ ಈ ಬೆಟ್ಟುದಾಗೆ ಬಂಗಾರ ಮಾಡ್ವಂತ ಗಿಡ ಐತೆ ಅಂತ ಆ ಗವಿನಾಗೆ ರ‍್ಕಂಡೋಗಿ ಅಲ್ಲೇ ಮಡ್ಕೆ ಕುಡ್ಕೆನಾಗೆ ಏನೇನೋ ಸೊಪ್ಪಾಗಿ ಬೇಯ್ಸಿ ನೋಡ್ತಿದ್ರು ಬಂಗಾರ ಆಗ್ಲಿ ಅಂತ. ಆದ್ರೆ ಅದು ಆಗ್ತಿರಲಿಲ್ಲ. ನಂಗೆ ನಮ್ಮಪ್ಪ ಯೇಳಿದ್ದು ನೆನ್ಪಿಗೆ ಬಂದಿತ್ತು. ಆದ್ರೆ ದುರಾಸೆ ಬೀಳ್ಬರ‍್ದು ಅಂತ ಹೇಳಿದ್ದು ನೆನ್ಪಾಗಿ ಭಯಪಡ್ತಿದ್ದೆ. ಆದ್ರು ಅವ್ರು ನಂಗೆ ಬಲಂತಮಾಡಿ ವನಾಂತ್ರುಕ್ಕೆ ರ‍್ಕಂಬಂದು ಇದ ಇದ ಅಂತ ಎಲ್ಲ ಗಿಡನು ಮುಟ್ಟಿ ಮುಟ್ಟಿ ಕೇಳ್ತಿದ್ರು. ಅದ್ರಾಗೆ ಯಾವ್ಗಿಡ ಬೂತಾಳಿದಾಗಿತ್ತೊ ಸಂಜೆ ಗವಿಗೆ ಬಂದಾಗ ಅವ್ರೆಲ್ಲ ರಯ್ತಕಾರಿ ಪ್ರಾಣಬಿಟ್ರು. ನಂಗೆ ಭಯ ಸ್ಯಾನೆ ಆತು. ಊರಿಗೋಗ್ದೆ ಆ ಗವಿನಾಗೆ ಇದ್ಬಿಟ್ಟೆ. ಮಲುಗ್ತಿದ್ನೊ ಎದ್ದರ‍್ತಿದ್ನೋ ಗೊತ್ತೆ ರ‍್ಲಿಲ್ಲ. ಎಲ್ಲ ರ‍್ತುಬಿಟ್ಟು ಸಿಕ್ಸಕ್ದ ಗೆಡ್ಡೆ ಗೆಣ್ಸು ತಿನ್ಕಂಡು ಕತೆ ಆಗ್ತಿದ್ದೆ. ಯಾವತ್ತೂ ಆ ಗಿಡ್ಮರಗಳ ಸವಾಸುಕ್ಕೆ ವೋಗರ‍್ಲಿಲ್ಲ. ಆಗ್ಲೆ ಆ ನನ್ತಾಯಿ ಕನುಸ್ನಾಗೆ ಕಾಣುಸ್ಕಂಡು ಈ ಮದ್ದಿರೊ ವನಾಂತ್ರ ತರ‍್ಸಿಳು. ಅವ್ಳ ಆಗ್ನೆಯಂತೆ ಇದ್ನಿಟ್ಕಂಡು ಲೋಕ್ದ ಜನ್ರುನ್ನು ಉಳ್ಸಕ್ಕೆ ಓಡಾಡ್ತೀವ್ನಿ. ಇಲ್ದಿದ್ರೆ ಎಸ್ಟು ಜೀವ್ಗುಳು ಉಸುರನ್ನವೋ…’
(ಕೃತಿ: ನೀಗೊನಿ, ಲೇ: ರವಿಕುಮಾರ್ ನೀಹ, ಪ್ರ: ಆಕೃತಿ ಪುಸ್ತಕ, ಬೆಲೆ: 295, ಸಂಪರ್ಕ: 98866 94580)




