ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದು ಪೊಲೀಸರಿಗೆ ಪಾಠ ಕಲಿಸಿದ ಜಪಾನ್ ಯುವಕ

Date:

ಇಂಗ್ಲಿಷ್ ಭಾಷೆಯನ್ನು ಕಲಿಯುವ ಉದ್ದೇಶದಿಂದ 2019ರ ಅಕ್ಟೋಬರ್‌ನಲ್ಲಿ ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದವರು ಜಪಾನ್‌ನ ಯುವಕ ಹಿರೋತೋಷಿ ತನಕಾ. ಆದರೆ, ಅವರು ಬೆಂಗಳೂರು ಪೊಲೀಸರ ಧೋರಣೆಯ ವಿರುದ್ಧ ಸುದೀರ್ಘ ಐದುವರೆ ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಜಯಗಳಿಸಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಅರಿವಿಲ್ಲದಿದ್ದರೂ, ಪೊಲೀಸರ ಲಂಚಗುಳಿತನ ಮತ್ತು ಅಕ್ರಮ ಬಂಧನದ ವಿರುದ್ಧ ಜಪಾನ್‌ನಿಂದಲೇ ಹೋರಾಡಿ ಕರ್ನಾಟಕ ಸರ್ಕಾರದಿಂದ 75,000 ರೂ. ನಷ್ಟ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದ ತನಕಾ ಅವರು ಆರ್.ಟಿ. ನಗರದ ಇಂಗ್ಲಿಷ್ ಅಕಾಡೆಮಿಯೊಂದಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಅಕಾಡೆಮಿಯಲ್ಲಿ ಸರಿಯಾಗಿ ತರಗತಿಗಳು ನಡೆಯದ ಕಾರಣ ಸಂಸ್ಥೆಯ ಮುಖ್ಯಸ್ಥರೊಂದಿಗೆ ಗಲಾಟೆಯಾಗಿ, ಮುಖ್ಯಸ್ಥರ ಮುಖಕ್ಕೆ ತನಕಾ ಬಾರಿಸಿದ್ದರು. ಈ ಸಂಬಂಧ ದಾಖಲಾದ ಜಾಮಿನೂ ರಹಿತವಲ್ಲದ ಪ್ರಕರಣದಲ್ಲಿ ಪೊಲೀಸರು 2019ರ ನವೆಂಬರ್ 23 ರಂದು ತನಕಾ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಪರಪ್ಪನ ಅಗ್ರಹಾರ ಜೈಲಿನಲ್ಲಿ 19 ದಿನಗಳ ಕಾಲ ಕಳೆದ ತನಕಾ, ಅಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು, ಧೂಮಪಾನ ಹಾಗೂ ಅಕ್ರಮ ಚಟುವಟಿಕೆಗಳನ್ನು ಕಂಡರು. ಜೈಲಿನಲ್ಲಿದ್ದ ಶಂಕರ್ ಎಂಬ ತ್ರಿವಳಿ ಕೊಲೆ ಆರೋಪಿಯ ಸೌಹಾರ್ದತೆ ಮತ್ತು ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಅವರ ಮಾನವೀಯ ನೆರವಿನಿಂದ ಡಿಸೆಂಬರ್ 11ರಂದು ಅವರಿಗೆ ಜಾಮೀನು ಸಿಕ್ಕಿ ಹೊರಬಂದರು.

ಜೈಲಿನಿಂದ ಹೊರಬಂದ ತನಕಾ ತಮ್ಮ ವಸ್ತುಗಳನ್ನು ಹಿಂಪಡೆಯಲು ಆರ್.ಟಿ. ನಗರ ಪೊಲೀಸ್ ಠಾಣೆಗೆ ಹೋದಾಗ, ಅಂದಿನ ಸಬ್-ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ ಅವರು ಪ್ರಕರಣ ಮುಕ್ತಾಯಗೊಳಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹಣಕಾಸಿನ ಅಭಾವದ ನಡುವೆಯೂ ತನಕಾ 5,500 ರೂ. ಲಂಚ ನೀಡಬೇಕಾಯಿತು. ಇದಾದ ಬಳಿಕ ಕೋವಿಡ್‌ ಲಾಕ್‌ಡೌನ್, ವೀಸಾ ಅವಧಿ ಮುಕ್ತಾಯ ಹಾಗೂ ಅನಾರೋಗ್ಯದ ಕಾರಣದಿಂದ ತನಕಾ ಬೆಂಗಳೂರಿನಲ್ಲಿಯೇ ಪರದಾಡುವಂತಾಯಿತು. ಒಮ್ಮೆ ತೀವ್ರ ಅನಾರೋಗ್ಯದಿಂದ ಆರ್.ಟಿ. ನಗರದ ಪಾರ್ಕ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಬೌರಿಂಗ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು.

ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲು ತನಕಾ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು. ಕೊನೆಗೆ ಇಂಗ್ಲಿಷ್ ತರಬೇತಿ ಶಾಲೆಯ ಮುಖ್ಯಸ್ಥರು ದೂರು ಹಿಂಪಡೆಯಲು ಒಪ್ಪಿದ್ದರಿಂದ, 2020ರ ನವೆಂಬರ್‌ನಲ್ಲಿ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಿತು.

ಪ್ರಕರಣ ರದ್ದಾದರೂ ಪೊಲೀಸರ ಲಂಚಗುಳಿತನ ಮತ್ತು ಕಿರುಕುಳವನ್ನು ಮರೆಯದ ತನಕಾ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು. ಆದರೆ, ವೀಸಾ ಅವಧಿ ಮುಗಿದಿದ್ದರಿಂದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅವರನ್ನು ಭಾರತದಿಂದ ಗಡಿಪಾರು (ಮಾಡಲು ಸಿದ್ಧತೆ ನಡೆಸಿತ್ತು. ಭಾರತದಲ್ಲೇ ಉಳಿದು ಹೋರಾಟ ಮುಂದುವರಿಸಲು ತನಕಾ ಒಂದು ವಿಚಿತ್ರ ಹಾದಿ ತುಳಿದರು.

ಆರ್.ಟಿ. ನಗರ ಪೊಲೀಸ್ ಠಾಣೆಯ ಸ್ವಾಗತಕಾರರ ಮೇಜಿನ ಮೇಲಿದ್ದ ಪ್ಲಾಸ್ಟಿಕ್ ಕುರ್ಚಿಯನ್ನು ಕದ್ದು, ಅದನ್ನು ತಮ್ಮ ಕೋಣೆಗೆ ತೆಗೆದುಕೊಂಡು ಹೋಗಿ ಕುರ್ಚಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ತಮ್ಮ ಮೇಲೆ ಕಳ್ಳತನ ಪ್ರಕರಣ ದಾಖಲಾಗಿ ಬಂಧನವಾದರೆ ಭಾರತದಲ್ಲೇ ಉಳಿಯಬಹುದು ಎಂಬುದು ಅವರ ಆಲೋಚನೆಯಾಗಿತ್ತು. ಆದರೆ, ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ 2021ರ ಏಪ್ರಿಲ್‌ನಲ್ಲಿ ಅವರನ್ನು ಜಪಾನ್‌ಗೆ ಗಡಿಪಾರು ಮಾಡಿದರು.

ಜಪಾನ್‌ಗೆ ಹಿಂತಿರುಗಿದ ನಂತರವೂ ತನಕಾ ಸೋಲೊಪ್ಪಿಕೊಳ್ಳಲಿಲ್ಲ. ಬೆಂಗಳೂರಿನ ವಕೀಲ ರೋಹನ್ ಕೊಠಾರಿ ಅವರ ಮೂಲಕ ಮಾನವ ಹಕ್ಕುಗಳ ಆಯೋಗದಲ್ಲಿ ಹೋರಾಟ ಮುಂದುವರಿಸಿದರು. 2022ರ ಮೇ 9ರಂದು ತೀರ್ಪು ನೀಡಿದ ಆಯೋಗವು, ತನಕಾ ಅವರನ್ನು ಅನಗತ್ಯವಾಗಿ 19 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದಕ್ಕೆ ಸರ್ಕಾರ 75,000 ರೂ. ನಷ್ಟ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹನುಮಂತರಾಯಪ್ಪ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡಿತು.

ಈ ಶಿಫಾರಸು ಜಾರಿಯಾಗದಿದ್ದಾಗ ತನಕಾ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದರು. ಅಂತಿಮವಾಗಿ ಕರ್ನಾಟಕ ಸರ್ಕಾರವು ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿ, ಆಯೋಗದ ಆದೇಶದಂತೆ ತನಕಾ ಅವರಿಗೆ 75,000 ರೂ. ಪರಿಹಾರವನ್ನು ಪಾವತಿಸಿ, ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿರುವುದಾಗಿ ತಿಳಿಸಿತು.

ಈ ಸುದೀರ್ಘ ಕಷ್ಟದ ದಿನಗಳಲ್ಲಿ ತನಕಾ ಅವರಿಗೆ ಈಶಾನ್ಯ ಭಾರತ ಮೂಲದ ಯುವತಿಯೊಬ್ಬರ ಪರಿಚಯವಾಗಿತ್ತು. ಸಂಕಷ್ಟದ ಸಮಯದಲ್ಲಿ ಆಕೆಯೇ ತನಕಾ ಅವರಿಗೆ ಧೈರ್ಯ ತುಂಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪ್ರೇರೇಪಿಸಿದ್ದರು. ಜಪಾನ್‌ಗೆ ತೆರಳಿದ ನಂತರವೂ ಸಂಪರ್ಕದಲ್ಲಿದ್ದ ಇಬ್ಬರೂ 2024ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, 2025ರಲ್ಲಿ ವಿವಾಹವಾಗಿದ್ದಾರೆ. ಪ್ರಸ್ತುತ ಜಪಾನ್‌ನಲ್ಲಿರುವ ತನಕಾ, ಬ್ಲ್ಯಾಕ್‌ಲಿಸ್ಟ್‌ನಲ್ಲಿದ್ದರೂ ತಮ್ಮ ಪತ್ನಿಯ ತವರೂರಿಗೆ ಭೇಟಿ ನೀಡಿ ಅವರ ಕುಟುಂಬವನ್ನು ಭೇಟಿಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ: ಮರುತನಿಖೆ ಆದೇಶಕ್ಕೆ ‘ಕೊಂದವರು ಯಾರು?’ ಆಂದೋಲನ ಸ್ವಾಗತ, ದಕ್ಷ ಎಸ್‌ಐಟಿ ರಚನೆಗೆ ಆಗ್ರಹ

ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು...

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಅಕ್ರಮಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ...