ಬರ ಹಾಗೂ ವಿದ್ಯುತ್ ಸಮಸ್ಯೆ ಖಂಡಿಸಿ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಅವರು ಸಚಿವ ಲಕ್ಷ್ಮಣ ಸವದಿ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ತಿರುಗೇಟು ನೀಡಿದರು.
ಬಿಜೆಪಿ ಶಾಸಕರಾಗಿದ್ದ ವೇಳೆ ಲಕ್ಷ್ಮಣ ಸವದಿ ಅವರು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ “ರೈತರಿಗೆ ವಿದ್ಯುತ್ ನೀಡಿ, ಇಲ್ಲವೇ ಬಳೆ ಹಾಕಿಕೊಳ್ಳಿ” ಎಂದು ಸವಾಲು ಹಾಕಿದ್ದನ್ನು ಕುಮಠಳ್ಳಿ ನೆನಪಿಸಿದರು.
“ಈಗ ನೀವು ಕಾಂಗ್ರೆಸ್ ಸರ್ಕಾರದಲ್ಲಿದ್ದೀರಿ. ರೈತರಿಗೆ ವಿದ್ಯುತ್ ನೀಡುವ ಜವಾಬ್ದಾರಿ ನಿಮ್ಮ ಮೇಲಿದೆ. ಬಳೆ ತಯಾರ್ ಇದಾವ್, ಹಾಕೊಳ್ಳಕ್ ತಯಾರಾಗ್ನಿ” ಎಂದು ವೇದಿಕೆಯಲ್ಲೇ ವ್ಯಂಗ್ಯವಾಡಿದರು.
“ಅಂದು ನೀವು ಹೇಳಿದ ಮಾತು ಈಗ ನಿಮಗೇ ಅನ್ವಯವಾಗುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ನೀಡಬೇಕು ಎಂದು ಆಗ ಸವಾಲು ಹಾಕಿದ್ದ ನೀವು, ಈಗ ಅದೇ ಸಮಸ್ಯೆ ಎದುರಾದಾಗ ನಿಮ್ಮ ಮಾತನ್ನೇ ಮರೆತಿದ್ದೀರಾ?” ಎಂದು ಕುಮಠಳ್ಳಿ ಪ್ರಶ್ನಿಸಿದರು.



