ಬೆಳಗಾವಿ ನಗರದ ಭಾಗ್ಯನಗರದಲ್ಲಿ 10 ಕುರಿಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ತಿಲಕವಾಡಿ ಪೊಲೀಸರು ಪತ್ತೆಹಚ್ಚಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಿಲಕವಾಡಿ ಠಾಣೆ ಇನ್‌ಸ್ಪೆಕ್ಟರ್ ಪರಶುರಾಮ ಪೂಜಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ತೆಂಗಿನಕೇರಿ ಗಲ್ಲಿಯ ಅಕ್ಷಾಕ್ ಖಾಜಾಸಾಬ ಸಾಟಿ (42), ಮೊಹಮ್ಮದ್ ಉಬೇದ ಫಯಾಜ್ ಡೋಣಿ (19) ಹಾಗೂ ಬುಖಾರಿ ಗಲ್ಲಿಯ ಮೊಹಮ್ಮದ್ ಆಸಿಫ್ ಅಯ್ಯುಬ್ ಖಾನ್ ಮಸರಗುಪ್ಪಿ ಅವರನ್ನು ಬಂಧಿಸಿದೆ.
ಬಂಧಿತರಿಂದ ₹2 ಲಕ್ಷ ಮೌಲ್ಯದ ಸ್ವಿಫ್ಟ್ ಡಿಜೈರ್ ಕಾರು (ಕೆಎ-23/ಎಂ-8448) ಹಾಗೂ ₹1.17 ಲಕ್ಷ ನಗದು ಸೇರಿ ಒಟ್ಟು ₹3.17 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



