ಕ.ವಿ.ಪ್ರ.ನಿ.ನಿ. ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 23ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬೆಳಗಾವಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
110 ಕೆ.ವಿ. ಉದ್ಯಮಭಾಗ ಹಾಗೂ 33/11 ಕೆ.ವಿ. ಜಿಐಎಸ್ ಆರ್‌ಎಂ-2 ವಿದ್ಯುತ್ ಉಪಕೇಂದ್ರಗಳಿಂದ ವಿದ್ಯುತ್ ಪಡೆಯುವ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಉದ್ಯಮಭಾಗ, ಅನಗೋಳ, ರಾಣಿ ಚನ್ನಮ್ಮ ನಗರ, ಬುಡಾ ಲೇಔಟ್, ಸುಭಾಷಚಂದ್ರ ನಗರ, ವಸಂತ ವಿಹಾರ ಕಾಲೋನಿ, ಜಿನೇಶ್ವರ್ ಇಂಡಸ್ಟ್ರೀಸ್, ಜೈನ್ ಎಂಜಿನಿಯರಿಂಗ್, ಅಶೋಕ ಐರನ್ ಇಂಡಸ್ಟ್ರೀಸ್, ಕಾಮಾಕ್ಷಿ ಎಂಜಿನಿಯರಿಂಗ್, ಮಾರುತಿ ಮೆಟಲ್, ಅರಿಹಂತ ಇಂಡಸ್ಟ್ರಿಯಲ್, ಗುರುಪ್ರಸಾದ ನಗರ, ಕಾವೇರಿ ಕಾಲೋನಿ, ರಾಜೀವ್‌ಗಾಂಧಿ ನಗರ, ಲಕ್ಷ್ಮೀನಗರ, ಮಹಾವೀರ ನಗರ, ರಾಜಾರಾಮ ನಗರ ಹಾಗೂ ಖಾನಾಪುರ ಮುಖ್ಯರಸ್ತೆ ಸೇರಿದಂತೆ ವಿವಿಧ ಪ್ರದೇಶಗಳು ಇದರ ವ್ಯಾಪ್ತಿಗೆ ಒಳಪಡಲಿವೆ.
ಜಿಐಎಸ್ ಆರ್‌ಎಂ-2 ಉಪಕೇಂದ್ರ ವ್ಯಾಪ್ತಿಯ ನೆಹರು ರಸ್ತೆ, ಅಗರಕರ್ ರಸ್ತೆ, ಹಿಂದವಾಡಿ, ರೈಲ್ವೆಗೇಟ್, ಖಾನಾಪುರ ರಸ್ತೆ, ಸರಾಫಗಲ್ಲಿ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮರಾಠಾ ಕಾಲೋನಿ, ಕಾಂಗ್ರೆಸ್ ರಸ್ತೆ, ಎಂ.ಜಿ. ಕಾಲೋನಿ, ಟಿಳಕ ಚೌಕ, ಸ್ಟೇಷನ್ ರಸ್ತೆ, ಶಿವಾಜಿ ರಸ್ತೆ, ಬಸವನ ಗಲ್ಲಿ, ದೇಶಪಾಂಡೆ ಗಲ್ಲಿ, ನಾನಾವಾಡಿ, ವಿನಾಯಕ ನಗರ, ಗಣಪತಿ ಗಲ್ಲಿ, ಶಹಾಪುರ, ಗುಡ್‌ಶೆಡ್ ರಸ್ತೆ, ಶಾಸ್ತ್ರಿ ನಗರ, ಕಪಿಲೇಶ್ವರ, ಗಾಂಧಿ ಉದ್ಯಾನ ಸೇರಿದಂತೆ ಹಲವು ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾಮಗಾರಿಗೆ ಸಾರ್ವಜನಿಕರು ಸಹಕರಿಸುವಂತೆ ಹು.ವಿ.ಸ.ಕಂ.ನಿ., ಕಾರ್ಯ ಮತ್ತು ಪಾಲನೆ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



