ಬಳ್ಳಾರಿ | 40 ವರ್ಷಗಳಷ್ಟು ಹಳೆಯ ಚಿತ್ರಮಂದಿರದ ಕಟ್ಟಡದಲ್ಲಿ ಬಾಲಕಿಯರ ವಸತಿ ಶಾಲೆ

Date:

ಬಳ್ಳಾರಿ ಜಿಲ್ಲೆಯ ಕುರುಗೋಡುನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗಾಂಧಿ ತತ್ವಾಧಾರಿತ ಬಾಲಕಿಯರ ವಸತಿ ಶಾಲೆಯನ್ನು ಕಳೆದ ಮೂರು ವರ್ಷಗಳಿಂದ ಚಿತ್ರಮಂದಿರದ ಕಟ್ಟಡದಲ್ಲಿ ನಡೆಸಲಾಗುತ್ತಿದೆ.

ಇದು 40 ವರ್ಷಗಳಷ್ಟು ಹಳೆಯ ಚಿತ್ರಮಂದಿರ. ಈ ಮೊದಲು ಶಾಲೆ ಮತ್ತು ವಸತಿನಿಲಯ ನಡೆಯುತ್ತಿದ್ದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸ್ವಂತ ಕಟ್ಟಡ ಇಲ್ಲದ ಕಾರಣ ಹಳೆಯ ಚಿತ್ರಮಂದಿರದ ಕಟ್ಟಡದಲ್ಲೇ ವಸತಿ ಶಾಲೆ ನಡೆಯುತ್ತಿದೆ.

ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗಿನ 226 ವಿದ್ಯಾರ್ಥಿನಿಯರಿದ್ದಾರೆ. ಒಂದೇ ಸಭಾಂಗಣದಲ್ಲಿ ಎರಡರಿಂದ ಮೂರು ತರಗತಿ ನಡೆಸಲಾಗುತ್ತಿದೆ. ಎಲ್ಲರಿಗೂ ಒಂದೆಡೆಯೇ ಪಾಠ ಮಾಡುವುದರಿಂದ ನಮಗೆ ಸರಿಯಾಗಿ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿನಿಯರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಿಲ್ಲಾ ಪರಿಷತ್ ಬಾಲಕಿಯರ ಪ್ರೌಢಶಾಲೆ ಹೆಸರಿನಲ್ಲಿ 1996ರಲ್ಲಿ ಈ ಶಾಲೆ ಪ್ರಾರಂಭವಾಗಿದೆ. ನಂತರ ಗಾಂಧಿ ತತ್ವ ಆಧಾರಿತ ಬಾಲಕಿಯರ ವಸತಿ ಶಾಲೆಯಾಗಿ 2011-12ರಲ್ಲಿ ಮೇಲ್ದರ್ಜೆಗೇರಿಸಿ, ಸಮಾಜ ಕಲ್ಯಾಣ ಇಲಾಖೆಗೆ ಸೇರ್ಪಡೆ ಮಾಡಲಾಯಿತು. 2012-13ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುದಾನದೊಂದಿಗೆ, ಕರ್ನಾಟಕ ವಸತಿ ಶಿಕ್ಷಣಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇದೇ ಮಾದರಿಯಲ್ಲಿ ಜಿಲ್ಲೆಯ ಚೆಳ್ಳಗುರ್ಕಿ ಗ್ರಾಮದಲ್ಲೂ ಮತ್ತೊಂದು ಶಾಲೆ ಇದೆ. ಅಲ್ಲಿ ಎರ್ರೀತಾತ ಮಠದ ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದೆ. ಕುರುಗೋಡು ಮತ್ತು ಚೆಳ್ಳಗುರ್ಕಿಯ ಎರಡೂ ಶಾಲೆಗಳಿಗೂ ಸ್ವಂತ ಕಟ್ಟಡಗಳಿಲ್ಲ.

ಕುರುಗೋಡು ವಿವಿಧ ಬಡಾವಣೆಗಳಲ್ಲಿ ಪರಿಶೀಲಿಸಿದರೂ ಸೂಕ್ತ ಕಟ್ಟಡ ಸಿಗಲಿಲ್ಲ. ಆದ್ದರಿಂದ ತಿಂಗಳಿಗೆ ₹1.20 ಲಕ್ಷ ಬಾಡಿಗೆ ಕೊಟ್ಟು ಈ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದು ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೌಲಭ್ಯಗಳಿಲ್ಲದ ಹಳೆ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತದೆ. ಏನಾದರೂ ಅಚಾತುರ್ಯ ಸಂಭವಿಸಿದರೆ ಯಾರು ಹೊಣೆ? ನಮ್ಮ ಮಕ್ಕಳಿಗೆ ಸೂಕ್ತ ಸೌಲಭ್ಯ, ರಕ್ಷಣೆ ಒದಗಿಸಿ ಎಂದು ಮಕ್ಕಳ ಪೋಷಕರು ಆಗ್ರಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರೂರು ಗುಡ್ಡ ದುರಂತ | 8 ಮೀಟರ್ ಅಡಿಯಲ್ಲಿ ಲೋಹದ ಸಾಧನ ಪತ್ತೆ; ಲಾರಿಯಾಗಿರುವ ಶಂಕೆ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ...

ಚಿತ್ರದುರ್ಗ | ಅಸಮಾನತೆ ಹೋಗಲಾಡಿಸುವುದೇ ಶೋಷಿತ ಸಮುದಾಯಗಳ ಏಳಿಗೆಗೆ ಪರಿಹಾರ: ಸಿಎಂ ಸಿದ್ದರಾಮಯ್ಯ

ಜಾತಿ ವ್ಯವಸ್ಥೆ ದೇವರಿಂದ ಸೃಷ್ಟಿಯಾಗಿದ್ದಲ್ಲ. ಸ್ವಾರ್ಥ ಮನುಷ್ಯನ ಸೃಷ್ಟಿ, ಅಸಮಾನತೆ ಹೋಗಲಾಡಿಸದೆ...

ಉಡುಪಿ | ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದ ಅನಾರೋಗ್ಯ ಹೆಚ್ಚಳ: ಸುರೇಶ್ ಕಲ್ಲಾಗರ

ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಆಟೋರಿಕ್ಷಾ ಚಾಲಕರು ತಮ್ಮ...

ಬೀದರ್‌ | ಜೆಜೆಎಂ ಕಾಮಗಾರಿ ಅಪೂರ್ಣ: ಕೆಸರು ಗದ್ದೆಯಂತಾದ ರಸ್ತೆಗಳು

ಮಳೆಗೆ ಕೆಸರು ಗದ್ದೆಯಂತಾದ ರಸ್ತೆ, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ...