ಬೆಂಗಳೂರು | ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ ಅಸ್ತಿತ್ವಕ್ಕೆ : ವಿಮುಕ್ತ ಸಂಗಮ ಸಭೆಯಲ್ಲಿ ತೀರ್ಮಾನ

Date:

ದೇವದಾಸಿ ತಾಯಂದಿರ ಹಕ್ಕುಗಳ ಹೋರಾಟವನ್ನು ರಾಜ್ಯ ಮಟ್ಟದಲ್ಲಿ ಇನ್ನಷ್ಟು ತೀವ್ರಗೊಳಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ನಗರದ ಆಶೀರ್ವಾದ ತರಬೇತಿ ಕೇಂದ್ರದಲ್ಲಿ ಜು. 7 ಮತ್ತು 8 ರಂದು ನಡೆದ ಎರಡು ದಿನಗಳ ‘ವಿಮುಕ್ತ ಸಂಗಮ’ ಸಮಾಲೋಚನಾ ಸಭೆಯಲ್ಲಿ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ದೇವದಾಸಿ ಮಹಿಳೆಯರ ಆತ್ಮಗೌರವದ ಸಂಘಟನೆಗಳನ್ನು ಒಗ್ಗೂಡಿಸಿ ‘ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ’ವನ್ನು ಅಧಿಕೃತವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚದುರಿಹೋಗಿದ್ದ ದೇವದಾಸಿ ತಾಯಂದಿರ ಧ್ವನಿಗೆ ಏಕರೂಪದ ಮತ್ತು ಬಲಿಷ್ಠವಾದ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ.

- Advertisement -

ದೇವದಾಸಿ ತಾಯಂದಿರ ಹಕ್ಕುಗಳು ಮತ್ತು ಗೌರವಯುತ ಪುನರ್ವಸತಿಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದ ಹದಿನೈದಕ್ಕೂ ಹೆಚ್ಚು ಪ್ರಮುಖ ಸಂಘ-ಸಂಸ್ಥೆಗಳು ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವು. ತಳಮಟ್ಟದಿಂದ ಹಿಡಿದು ಸರ್ಕಾರದ ಮಟ್ಟದವರೆಗೆ ಸಮುದಾಯದ ನ್ಯಾಯಬದ್ಧ ಧ್ವನಿಯನ್ನು ಪರಿಣಾಮಕಾರಿಯಾಗಿ ತಲುಪಿಸಬೇಕಾದರೆ ಎಲ್ಲಾ ಸಂಘಟನೆಗಳು ಒಂದೇ ಸೂರಿನಡಿ ಬರುವುದು ಅತ್ಯಗತ್ಯ ಎಂಬುದನ್ನು ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಸಭೆಯ ಸರ್ವಾನುಮತದ ತೀರ್ಮಾನದಂತೆ ಈ ಮಹಾಒಕ್ಕೂಟವನ್ನು ರಚಿಸಲಾಗಿದ್ದು, ಈ ಐತಿಹಾಸಿಕ ನಿರ್ಧಾರಕ್ಕೆ ಸಭೆಯಲ್ಲಿದ್ದ ದೇವದಾಸಿ ತಾಯಂದಿರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಘ-ಸಂಸ್ಥೆಗಳ ಸದಸ್ಯರು ಇದನ್ನು ಶ್ಲಾಘಿಸಿ, ತಕ್ಷಣವೇ ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಹೊಸದಾಗಿ ರಚನೆಗೊಂಡಿರುವ ಈ ಮಹಾಒಕ್ಕೂಟವು ಮುಂಬರುವ ದಿನಗಳಲ್ಲಿ ಸಮುದಾಯದ ಸರ್ವತೋಮುಖ ಏಳಿಗೆಗಾಗಿ ಬೃಹತ್ ಕಾರ್ಯಸೂಚಿಯೊಂದನ್ನು ರೂಪಿಸಿಕೊಂಡಿದೆ. ಮಾಜಿ ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ವಸತಿ, ಭೂಮಿ, ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ಹಕ್ಕುಗಳಿಗಾಗಿ ಇನ್ಮುಂದೆ ಬಿಡಿಬಿಡಿಯಾಗಿ ಅಥವಾ ಒಂಟಿಯಾಗಿ ಹೋರಾಡುವ ಬದಲು, ಈ ಮಹಾಒಕ್ಕೂಟದ ಬ್ಯಾನರ್ ಅಡಿಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಸರ್ಕಾರದ ವಿಶೇಷ ಅನುದಾನಗಳು ಮತ್ತು ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸಮುದಾಯದ ಕಟ್ಟಕಡೆಯ ಮಹಿಳೆಗೆ ತಲುಪುವಂತೆ ಮಾಡುವುದು ಹಾಗೂ ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ಮೇಲೆ ಜಂಟಿ ಒತ್ತಡ ಹೇರುವುದು ಈ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, “ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ”ದ ಈ ಉದಯವು ಕೇವಲ ಒಂದು ಸಂಘಟನೆಯ ರಚನೆಯಾಗಿಲ್ಲ, ಬದಲಿಗೆ ದೇವದಾಸಿ ಮಹಿಳೆಯರ ಆತ್ಮಗೌರವ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಹೋರಾಟದ ಹಾದಿಯಲ್ಲಿ ಬರೆದ ಒಂದು ಹೊಸ ಅಧ್ಯಾಯವಾಗಿದೆ.

“ದೇವದಾಸಿ ತಾಯಂದಿರಿಗೆ ಇಂದಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಸಮಾಜದ ಕಣ್ಣಿಗೆ ಅವರು ವಿಮುಕ್ತರಂತೆ ಕಂಡರೂ, ಆಡಳಿತ ವ್ಯವಸ್ಥೆಯ ತಾತ್ಸಾರ, ಧಾರ್ಮಿಕ ಮೌಢ್ಯ ಮತ್ತು ಆರ್ಥಿಕ ಸಂಕಷ್ಟಗಳು ಇಂದಿಗೂ ಅವರ ಬದುಕನ್ನು ಕತ್ತಲಲ್ಲೇ ಇಟ್ಟಿವೆ. ಈ ವ್ಯವಸ್ಥೆಯ ವಿರುದ್ಧ ನಾವು ಬಿಡಿಬಿಡಿಯಾಗಿ ಹೋರಾಡಿದ್ದೇ ಆಯಿತು, ಆದರೆ ಇನ್ಮುಂದೆ ಹಾಗಲ್ಲ. ಈಗ ಅಸ್ತಿತ್ವಕ್ಕೆ ಬಂದಿರುವ ಈ ‘ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ’ ಕೇವಲ ವೇದಿಕೆಯಲ್ಲ, ಇದು ದೇವದಾಸಿ ತಾಯಂದಿರ ಹಕ್ಕುಗಳಿಗಾಗಿ ಇಡೀ ರಾಜ್ಯಾದ್ಯಂತ ಒಂದು ಮಹಾಕ್ರಾಂತಿಯನ್ನೇ ಮಾಡಲಿದೆ. ದೇವದಾಸಿ ತಾಯಂದಿರ ಕುಟುಂಬಗಳ ಭೂಮಿ, ವಸತಿ, ಗೌರವ ಮತ್ತು ಅವರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವವರೆಗೂ ಈ ಒಕ್ಕೂಟ ಖಾಲಿ ಕೂರುವುದಿಲ್ಲ ಎಂದು ವಿಮುಕ್ತ ದೇವದಾಸಿ ಮಹಿಳಾ ವೇದಿಕೆರ ಸಂಘಟನಾ  ಕಾರ್ಯದರ್ಶಿ   ಜಿ. ಎಸ್. ಶರಣು ತಿಳಿಸಿದ್ದಾರೆ 

ಒಕ್ಕೂಟ ರಚನೆ ಸಂದರ್ಭದಲ್ಲಿ ಪ್ರೊ. ವೈ. ಜೆ. ರಾಜೇಂದ್ರ, ಜನಕವಿ ದಾನಪ್ಪ ನಿಲೋಗಲ್, ಎಂ. ಆರ್. ಭೇರಿ, ವೇದಿಕೆಯ ಗೌರವ ಅಧ್ಯಕ್ಷೆ ಪಡಿಯಮ್ಮ ಕ್ಯಾದಗುಂಪಿ, ಗೌರವ ಸಲಹೆಗಾರ ಚಂದಾಲಿಂಗ ಕಲಲಾಬಂಡಿ, ಅಧ್ಯಕ್ಷೆ ಮಹಾನಂದ ದೊಡ್ಡಮನಿ, ರಾಯಚೂರು ಜಿಲ್ಲಾ ಸಂಚಾಲಾಕಿ ರತ್ನಾ ಮಸ್ಕಿ, ಉಪಾಧ್ಯಕ್ಷ ಪಂಪಾಪತಿ ಬಳ್ಳಾರಿ, ಸ್ನೇಹ ಸಂಸ್ಥೆಯ ಎನ್ ಆರ್ ನೇತ್ರಾವತಿ, ಮುಕ್ತ ಒಕ್ಕೂಟದ ಶೋಭಾ, ಅಮ್ಮ ಪೌಂಡೇಶನ್ ಸದಸ್ಯ ಸಾವಿತ್ರಿ ತಾಳಗೇರಿ, ಮಹಿಳಾ ಧ್ವನಿಯ ವಿರುಪಮ್ಮ, ಸಿಪಿಐ ಸದಸ್ಯ ಕೆ ರೇಣುಕಾ, ರಾಜ್ಯ ಮಹಿಳಾ ಒಕ್ಕೂಟದ ಮೋಕ್ಷಮ್ಮ, ಅಕ್ಕಮ್ಮ ಹನುಮೇಶ್, ಸಮತಾ ಗ್ರಾಮೀಣ ಟ್ರಸ್ಟ್ ನ ಸದಸ್ಯೆ ಶಶಿಕಲಾ ಹಿರೇಸಿಂದೋಗಿ, ಗೋಕಾಕ್ ಶಕ್ತಿ ಸಂಘದ ಮೈಲಾವ್ವ, ಜಾಗೃತ ಮಹಿಳಾ ಸಂಘದ ರೇಣುಕಾ, ದಲಿತ ಬಹುಜನ ಚಳುವಳಿಯ ರಮೇಶ್ ಕೋಳೂರ್, ಅಂಬೇಡ್ಕರ್ ವಿಚಾರ ವೇದಿಕೆಯ ಚನ್ನಬಸುವ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಾ ರೇಡ್: 33 ಸ್ಥಳಗಳಲ್ಲಿ ಶೋಧ, ರೂ. 29.60 ಕೋಟಿ ಅಕ್ರಮ ಆಸ್ತಿ ಪತ್ತೆ

ಕರ್ನಾಟಕದಾದ್ಯಂತ ಅಕ್ರಮ ಆಸ್ತಿ (ಡಿಎ) ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್...

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ವಾಹನ ಸವಾರರ ಪರದಾಟ

ರಾಜಧಾನಿ ಬೆಂಗಳೂರಿನ ವಿವಿಧೆಡೆ ಸೋಮವಾರ ಸಂಜೆ ಏಕಾಏಕಿ ಹಠಾತ್‌ ಧಾರಾಕಾರ ಮಳೆಯಾಗಿದ್ದು,...

ಬೆಂಗಳೂರು | ʼನಿನ್ನನ್ನು ಪಾಕಿಸ್ತಾನಕ್ಕೆ ಕಣ್ಮರೆ ಮಾಡುವೆನುʼ: ಮಹಿಳೆಗೆ ಕಿರುಕುಳ, ಎಫ್‌ಐಆರ್

ಬೆಂಗಳೂರು ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ʼಸ್ನೇಹವನ್ನು ಮುರಿದರೆ...