ಬಸವಕಲ್ಯಾಣ | ಏ.4, 5ರಂದು ದಾನಮ್ಮದೇವಿ ಉತ್ಸವ, ಶರಣ ಸಮಾಗಮ

Date:

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಶರಣೆ ದಾನಮ್ಮದೇವಿ ಉತ್ಸವ ಹಾಗೂ 4ನೇ ಶರಣ ಸಮಾಗಮ ಮತ್ತು ಜ್ಞಾನ ಶಿಬಿರವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಬಸವಪ್ರಭು ಸ್ವಾಮೀಜಿ ಅವರು ತಿಳಿಸಿದರು.

- Advertisement -

ಗುಣತೀರ್ಥವಾಡಿ ಮಹಾಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಏಪ್ರಿಲ್ 4 ಮತ್ತು 5ರಂದು ನಡೆಯುವ ಈ ಎರಡು ದಿನಗಳ ಉತ್ಸವದಲ್ಲಿ ದಾಂಪತ್ಯ ಧರ್ಮ ಸಮಾವೇಶ, ಕಾಯಕ ಶರಣರ ಸಮಾವೇಶ, ಶರಣ ಜ್ಞಾನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಗುರುವಂದನಾ ಹಾಗೂ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಏಪ್ರಿಲ್ 4 ರಂದು ಬೆಳಿಗ್ಗೆ 5 ರಿಂದ 6ರವರೆಗೆ ಪತಂಜಲಿ ಯೋಗಗುರು ಬಸವರಾಜ ಮಾಳಿ ಹಾಗೂ ಶರಣೆ ಮೇಘಾ ಅವರು ಯೋಗಾಭ್ಯಾಸ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 7 ರಿಂದ 9ರವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ಲಿಂಗಾನುಭಾವ, ಇಷ್ಟಲಿಂಗ ದೀಕ್ಷೆ, ವಚನ ಪಠಣ ಹಾಗೂ ದಾನಮ್ಮ ದೇವಿ ಮಂತ್ರ ಪಠಣ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಪೂಜ್ಯರ ಸಾನ್ನಿಧ್ಯದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಸ್.ಎಸ್. ನಾಗರಾಳೆ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಹುಲಸೂರಿನ ಶಿವಾನಂದ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವಚನ ಕುಮಾರಸ್ವಾಮಿ ರೂಪಾ ವಹಿಸಲಿದ್ದು, ಶರಣ ದಿಲೀಪ ಶಿಂಧೆ ಆಶಯ ನುಡಿ ನುಡಿಯಲಿದ್ದಾರೆ.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ರಚಿಸಿರುವ “ಜೀವನ ದರ್ಶನ” ಕೃತಿ ಬಿಡುಗಡೆಯಾಗಲಿದ್ದು, ಹಾವೇರಿಯ ಹಿರಿಯ ಸಾಹಿತಿ ಸತೀಷ ಕುಲಕರ್ಣಿ ಅವರು ಬಿಡುಗಡೆ ಮಾಡಲಿದ್ದಾರೆ.

ಮಧ್ಯಾಹ್ನ 3 ರಿಂದ 5ರವರೆಗೆ ಮಕ್ಕಳ ಶರಣ ಜ್ಞಾನ ಗೋಷ್ಠಿ ನಡೆಯಲಿದ್ದು, ಸೋಲಾಪುರದ ಶರಣೆಯರಿಂದ ದಾನಮ್ಮ ರೂಪಕ ಪ್ರದರ್ಶನ ಹಾಗೂ ಪ್ರತಿಭಾನ್ವಿತ ಮಕ್ಕಳಿಂದ ಅನುಭಾವ ಕಾರ್ಯಕ್ರಮ ನಡೆಯಲಿದೆ.

ಸಂಜೆ 6ರಿಂದ 9ರವರೆಗೆ ಭಾವೈಕ್ಯತಾ (ಕಾಯಕ ಶರಣರ) ಸಮಾವೇಶ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ ಅವರು ಉದ್ಘಾಟಿಸಲಿದ್ದಾರೆ. ಬಸವಕಲ್ಯಾಣ ಮಹಾಮನೆಯ ಅಧ್ಯಕ್ಷ ಸಿದ್ಧರಾಮ ಶರಣರು ಬೆಲ್ದಾಳ ನೇತೃತ್ವ ವಹಿಸಲಿದ್ದು, ವಿವಿಧ ಪೀಠಗಳ ಪೂಜ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಏಪ್ರಿಲ್ 5ರಂದು ಬೆಳಿಗ್ಗೆ 10:30ಕ್ಕೆ ರೈತ ಸಮಾವೇಶ ಮತ್ತು ರೈತ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕೆವಿಕೆ ಬೀದರ ಮುಖ್ಯಸ್ಥ ಡಾ.ರವಿ ದೇಶಮುಖ ಉದ್ಘಾಟಿಸಲಿದ್ದಾರೆ. ರಾಯಚೂರು ಕೃಷಿ ಮಹಾವಿದ್ಯಾಲಯದ ಡಾ. ಆರ್.ಎಲ್.ಜಾಧವ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿವಿಧ ರೈತ ಸಂಘದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಆಯುಕ್ತರಾದ ಜಗನ್ನಾಥ ರೆಡ್ಡಿ, ರಾಜ್ಯ ರೈತ ಸಂಘ ಉಪಾಧ್ಯಕ್ಷರಾದ ಚಂದ್ರಕಾಂತ ಜಮಖಂಡಿಯವರು, ಬಸವಕಲ್ಯಾಣದ ಸಹಾಯಕ ಕೃಷಿ ನಿರ್ದೇಶಕರಾದ ಗೌತಮ್, ರೈತ ಸಂಘ ಬೀದರ ಜಿಲ್ಲಾಧ್ಯಕ್ಷ ಸಿದ್ಧರಾಮಪ್ಪ ಆಣದೂರೆ ಆಗಮಿಸಲಿದ್ದಾರೆ. ಮುಂಬೈನ ಆಹಾರ ಘಟಕದ ಸಹಾಯಕ ತಂತ್ರಜ್ಞರಾದ ದೀಪ್ತಿ ಎಸ್ ಬಿರಾದಾರ ಆಶಯ ನುಡಿ ನುಡಿಯಲಿದ್ದಾರೆ.

ಮಧ್ಯಾಹ್ನ 3ರಿಂದ ಯುವ ಶರಣ ಜ್ಞಾನ ಸಂಗಮ ನಡೆಯಲಿದ್ದು, ಯುವಕರ ಪಾತ್ರ ಕುರಿತು ವಿವಿಧ ವಿಷಯಗಳ ಮೇಲೆ ಉಪನ್ಯಾಸ ಹಾಗೂ ಅನುಭಾವ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 6ಕ್ಕೆ 15ನೇ ಜ್ಯೋತಿ ಯಾತ್ರೆಯ ಸಮಾರೋಪ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಚನ್ನಬಸವಾನಂದ ಸ್ವಾಮೀಜಿ, ಸತ್ಯಾದೇವಿ ಮಾತಾಜಿ ಸೇರಿದಂತೆ ಅನೇಕ ಪೂಜ್ಯರು ದಿವ್ಯ ನೇತೃತ್ವ ವಹಿಸಲಿದ್ದಾರೆ. ಬಸವಕಲ್ಯಾಣ ನಗರ ಪೌರಾಯುಕ್ತ ರಾಜು ಬಣಕಾರ ಚಾಲನೆ ನೀಡಲಿದ್ದಾರೆ. ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ : ತಮಿಳುನಾಡು ಚುನಾವಣೆ | ತನ್ನ ಕಾರು ಚಾಲಕನ ಮಗನನ್ನು ಸ್ಪರ್ಧೆಗಿಳಿಸಿದ ವಿಜಯ್‌ : ಭಾವುಕ ಕ್ಷಣಕ್ಕೆ ಅಪ್ಪ ಮಗ ಸಾಕ್ಷಿ 

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ದಿಲೀಪ ಶಿಂಧೆ, ಗೌರವಾಧ್ಯಕ್ಷ ಲಕ್ಷ್ಮಣರಾವ್ ಹಂದಿಕೇರಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಪಾಟೀಲ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಜವಾದಿ ಸೇರಿದಂತೆ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಅಲ್ಲಮ ಜಗತ್ತಿನ ಶ್ರೇಷ್ಠ ಅನುಭಾವಿ

ಅಲ್ಲಮಪ್ರಭು ಅವರು ಜಗತ್ತಿನ ಶ್ರೇಷ್ಠ ಅನುಭಾವಿಗಳಾಗಿದ್ದು, ಅವರ ಚಿಂತನೆ ಹಾಗೂ ವಚನಗಳ...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ಔರಾದ್ : ನಕಲಿ ವೈದ್ಯಕೀಯ ವೃತ್ತಿ: ಕ್ಲಿನಿಕ್ ಸೀಜ್

ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೆ ನಕಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪದ...

ಔರಾದ್‌ | ʼಈದಿನʼ ವರದಿ ಫಲಶೃತಿ : ದುರಸ್ತಿಯಾದ ಶುದ್ಧ ಕುಡಿಯುವ ನೀರಿನ ಘಟಕ

ಔರಾದ್‌ ತಾಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯತ್‌ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ...