ಬಿಸಿಲಿನ ಝಳದಿಂದ ತತ್ತರಿಸಿದ ಯುವಕ ಈಜಲು ಹೋದ ಬಾಲಕನೊಬ್ಬ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಪರ್ತಾಪೂರ ಗ್ರಾಮದ ಬಳಿ ಮಂಗಳವಾರ ಸಂಜೆ ನಡೆದಿದೆ.
ಬಸವಕಲ್ಯಾಣ ನಗರದ ಖಡಿಝಂಡಾ ಸಮೀಪದ ಆಶ್ರಯ ಕಾಲೋನಿ ನಿವಾಸಿ ಅಹ್ಮದ್ ಪಾರ್ದಿ(20) ಮೃತ ಯುವಕ ಎಂದು ತಿಳಿದು ಬಂದಿದೆ.
ಅಹ್ಮದ್ ಪಾರ್ದಿ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ. ಈಜಾಡುವ ವೇಳೆ ಆಳದಲ್ಲಿನ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಠಾಣೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಬುದ್ಧ, ಬಸವ, ಅಂಬೇಡ್ಕರವರ ಚಿಂತನೆ ಗಟ್ಟಿಗೊಳಿಸೋಣ : ಸಿದ್ಧರಾಮ ಶರಣರು





