ಇದೇ ಜುಲೈ 6ರಂದು ಸೋಮವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬೀದರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಅಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಜುಲೈ 6 ರಂದು ಮಧ್ಯಾಹ್ನ 2.30ಕ್ಕೆ ಬೀದರಗೆ ಆಗಮಿಸುವರು. ಬಳಿಕ ಬೀದರನಿಂದ (ಏರ್ ಬೇಸ್) ರಸ್ತೆ ಮೂಲಕ 3.40ಕ್ಕೆ ಬಸವಕಲ್ಯಾಣಕ್ಕೆ ಆಗಮಿಸಿ ನೂತನ ಅನುಭವ ಮಂಟಪಕ್ಕೆ ಭೇಟಿ ಹಾಗೂ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುವರು.
ಅಂದು ಸಂಜೆ 6ಗಂಟೆಗೆ ಬಸವಕಲ್ಯಾಣದಿಂದ (ಏರ್ ಬೇಸ್) ರಸ್ತೆ ಬೀದರ್ ನಗರಕ್ಕೆ ಆಗಮಿಸುವರು. ಸಂಜೆ 7 ಗಂಟೆಗೆ ಬೀದರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವವರು.
ರಾತ್ರಿ 8ಗಂಟೆಗೆ ಬೀದರ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಗಳ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕೈಕೊಟ್ಟ ಮುಂಗಾರು : ಜೂನ್ ಕಳೆದರೂ ಶೇ.50ರಷ್ಟು ದಾಟದ ಬಿತ್ತನೆ




