ಬೀದರ್‌ | ಮಾತ್ರ ಭಾಷೆ ಕನ್ನಡ ಬಳಕೆ ಕ್ಷೀಣ : ಸಂತೋಷ ಹಾನಗಲ್ಲ

Date:

ಮಾತ್ರ ಭಾಷೆ ಕನ್ನಡ ಬಳಕೆ ಕ್ಷೀಣಿಸುತ್ತಿದ್ದು, 2011ರಲ್ಲಿ ನಡೆದ ಸಮೀಕ್ಷೆಯಂತೆ ಕನ್ನಡ ಬಳಕೆದಾರರು ಕೇವಲ 3.6ರಷ್ಟು ಇದ್ದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅಭಿಪ್ರಾಯಪಟ್ಟರು.

- Advertisement -

ಔರಾದ್ ಪಟ್ಟಣದ ಅಮರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಬೀದರ್ ಸಹಯೋಗದಲ್ಲಿ ಆಯೋಜಿಸಿದ ʼಕನ್ನಡ ಭಾಷಾ ಸೌಹಾರ್ದ ನೆಲೆಗಳುʼ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ʼಕನ್ನಡಿಗರ ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿ ಕನ್ನಡ ಸಾಹಿತ್ಯ ಸಂಸ್ಕೃತಿ ವ್ಯಾಪಕವಾಗಿ ವಿಸ್ತರಿಸಿದೆ. ಹೀಗಾಗಿಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸುವಂತಾಗಿದೆʼ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ʼಕರ್ನಾಟಕದಲ್ಲಿ ಅನೇಕ ಭಾಷಿಕರಿದ್ದು ಅದರಲ್ಲಿ ಮರಾಠಿ, ತೆಲುಗು, ಉರ್ದು, ಕೊಂಕಣಿ, ಮಲೆಯಾಳಿ ಮಾತನಾಡುವ ಜನರಿದ್ದಾರೆ. ಬೀದರ ಜಿಲ್ಲೆಯಲ್ಲಿ ಮರಾಠಿ, ಉರ್ದು ಹಾಗೂ ತೆಲುಗು ಮಾತನಾಡುವವರಿದ್ದು, ಅವರ ಮಾತೃಭಾಷೆಯ ಜೊತೆಗೆ ನಾಡ ಭಾಷೆ, ಆಡಳಿತ ಭಾಷೆ ಕನ್ನಡಕ್ಕೆ ಆದ್ಯತೆ ನೀಡಬೇಕುʼ ಎಂದರು.

ʼಇಂದಿನ ಮಹಾರಾಷ್ಟ್ರದ ಅರ್ಧದಷ್ಟು ಪ್ರದೇಶ ಕನ್ನಡದ ಪ್ರದೇಶವಾಗಿತ್ತು ಎಂಬುದು ಇತಿಹಾಸದಿಂದ ನಮಗೆ ತಿಳಿಯುತ್ತದೆ. ಅಂದು ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರು ಕನ್ನಡಕ್ಕಾಗಿ ಹೋರಾಟ ಮಾಡಿದ್ದು, ಅವರ ಕೆಲಸ ಕಾರ್ಯಗಳು ನಮಗೆ ಸದಾ ಪ್ರೇರಣೆ ನೀಡಲಿವೆʼ ಎಂದು ತಿಳಿಸಿದರು.

‘ಕರ್ನಾಟಕದಲ್ಲಿ 216 ವಿವಿಧ ಮಾತೃಭಾಷೆ ಹೊಂದಿರುವ ಜನಾಂಗಗಳಿವೆ. ದೇಶದಲ್ಲಿ 19 ಸಾವಿರಕ್ಕೂ ಅಧಿಕ ಭಾಷೆಗಳು ಬಳಕೆಯಲ್ಲಿವೆ ಎಂಬುದು ವರದಿ ಹೇಳುತ್ತದೆ. ನಿತ್ಯವೂ ಕನ್ನಡ ಬಳಕೆಯಾಗಿದ್ದಲ್ಲಿ ಕನ್ನಡ ಬೆಳೆಯುತ್ತದೆ. ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಮನೆಯ ಹೊಸ್ತಿಲು ದಾಟುವಾಗ ಕನ್ನಡ ಸಂಸ್ಕೃತಿ ಹೊತ್ತು ನಿಲ್ಲಬೇಕಾಗಿದೆ’ ಎಂದರು.

WhatsApp Image 2025 12 29 at 4.55.43 PM

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಬೀದರ್ ಜಿಲ್ಲೆ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕನ್ನಡದ ಜೊತೆ ಜೊತೆಗೆ ಮರಾಠಿ, ತೆಲುಗು, ಉರ್ದು ಬೆರೆತುಕೊಂಡಿವೆ. ಶರಣರು, ದಾಸರು, ಜನಪದ ಕವಿಗಳು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.

‘ಕನ್ನಡ-ಉರ್ದು ಸೌಹಾರ್ದ ನೆಲೆಗಳ ಕುರಿತು ಸಾಹಿತಿ ಶಕೀಲ್ ಐ.ಎಸ್, ಕನ್ನಡ-ತೆಲುಗು ಸೌಹಾರ್ದ ನೆಲೆಗಳ ಕುರಿತು ಸಂಶೋಧಕ ಡಾ ಧನರಾಜ ಧರಂಪೂರೆ, ಕನ್ನಡ-ಮರಾಠಿ ಸೌಹಾರ್ದ ನೆಲೆಗಳ ಕುರಿತು ಕಸಾಪ ತಾಲೂಕು ಆದ್ಯಕ್ಷ ಬಿ.ಎಂ.ಅಮರವಾಡಿ ಉಪನ್ಯಾಸ ಮಂಡಿಸಿದರು.

ಕಸಾಪ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ಮಾತನಾಡಿದರು. ಡಾ.ಶಿವಲಿಂಗ ಹೇಡೆ ಪ್ರಾಸ್ತಾವಿಕ ಮಾತನಾಡಿದರು.

ಇದನ್ನೂ ಓದಿ : ಬಸವಕಲ್ಯಾಣ | ಪ್ರಕೃತಿ ಸೊಬಗಿನಿಂದಲೇ ಕಾವ್ಯ ಸೃಷ್ಟಿಸಿದ ಕುವೆಂಪು : ಭೀಮಾಶಂಕರ ಬಿರಾದರ್

ಚಿಂತಕ ಜಗನ್ನಾಥ ಮೂಲಗೆ, ಕಲ್ಯಾಣರಾವ ಶೆಂಬೆಳ್ಳೆ, ರಹೀಂ ಸಾಬ್, ಅಮರೇಶ್ವರ ಪದವಿ ಕಾಲೇಜು ಪ್ರಾಚಾರ್ಯೆ ಡಾ.ಪ್ರೇಮಾ ಹೂಗಾರ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ರೇವಣಯ್ಯ ಮಠ, ಶಿವಶಂಕರ ಟೋಕರೆ, ಮಹಾನಂದಾ ಎಂಡೆ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನೆಳಗೆ, ಮಹಾದೇವ ಶಿಂಧೆ, ಪ್ರಶಾಂತ, ಮಲ್ಲಿಕಾರ್ಜುನ ಟೇಕರಾಜ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಗಾಂಧೀಜಿ ಅಹಿಂಸಾ ತತ್ವ ಬದುಕಿನಲ್ಲಿ ಅನುಸರಿಸಿ : ಮಲ್ಲಿಕಾರ್ಜುನ ಹಲ್ಮಂಡಗೆ

ಭಾಲ್ಕಿಯ ನಿರ್ಮಲಾ ಹಲ್ಮಂಡಗೆ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ 157ನೇ...

ಬೀದರ್‌ | ಎಚ್‌ಐವಿ ಬಾಧಿತರು ಆತಂಕಕ್ಕೊಳಗಾಗದೆ ನಿಯಮಿತ ಔಷಧಿ ಸೇವಿಸಿ

ಎಚ್‌ಐವಿ ಬಾಧಿತರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೆ ವೈದ್ಯರ ಸಲಹೆಯಂತೆ...

ಬೀದರ್‌ | ಗಾಂಧೀ ಜಯಂತಿ : ಪೌರಕಾರ್ಮಿಕರಿಗೆ ಉಪಹಾರ ವಿತರಣೆ

ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಆಮ್ ಆದ್ಮಿ ಪಕ್ಷದ ಇಂಜಿನಿಯರಿಂಗ್ ವಿಂಗ್...

ಬೀದರ್‌ ಜಿಲ್ಲೆ ಯಾವತ್ತಿಗೂ ಕಾಂಗ್ರೆಸ್‌ ಭದ್ರಕೋಟೆ : ಈಶ್ವರ ಖಂಡ್ರೆ

ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್...