ಬೀದರ್‌ | ನಾಳೆ ಕರ್ನಾಟಕ ಸ್ವಾಭಿಮಾನ ನಡಿಗೆ

Date:

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಸ್ವ-ಗುರುತಿನ ಗೌರವ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಪರವಾಗಿ ನಾಳೆ (ಮೇ 13) ಬೀದರ್‌ನಲ್ಲಿ ಕರ್ನಾಟಕ ಸ್ವಾಭಿಮಾನ ನಡಿಗೆ-2026 ನಡೆಯಲಿದೆ ಎಂದು ಸಂಗಮ ಸಂಸ್ಥೆಯ ವಲಯ ಸಂಯೋಜಕಿ ವೀಣಾ.ಎಸ್ ತಿಳಿಸಿದರು.

- Advertisement -

ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼನಾಳೆ ಬೆಳಗ್ಗೆ 11ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಸ್ವಾಭಿಮಾನ ನಡಿಗೆ ಆರಂಭವಾಗಲಿದ್ದು, ಬಳಿಕ ಮಧ್ಯಾಹ್ನ 12:30ಕ್ಕೆ ಮೈಲೂರು ಕ್ರಾಸ್‌ನಲ್ಲಿರುವ ಹೋಟೆಲ್ ಕೃಷ್ಣ ರೆಸಿಡೆನ್ಸಿಯಲ್ಲಿ ಅವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಮುದಾಯದ ಸದಸ್ಯರು, ಬೆಂಬಲಿಗರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ʼಜೂನ್ 29, 1969ರಂದು ಅಮೆರಿಕದ ನ್ಯೂಯಾರ್ಕ್ ನಗರದ ಗ್ರೀನ್ವಿಚ್ ಪ್ರದೇಶದ ಸ್ಟೋನ್ವಾಲ್ ಇನ್ ಮೇಲೆ ನಡೆದ ಪೊಲೀಸ್ ದಾಳಿ ಮತ್ತು ಅದರ ವಿರುದ್ಧ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಪ್ರತಿರೋಧವು ಜಾಗತಿಕ ಪ್ರೈಡ್ ಚಳುವಳಿಗೆ ನಾಂದಿ ಹಾಡಿತ್ತು. ಅದರ ಸ್ಮರಣಾರ್ಥ ಪ್ರತಿ ವರ್ಷ ಪ್ರೈಡ್ ಅಥವಾ ಸ್ವಾಭಿಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಬೀದರ್‌ನಲ್ಲಿ ಇದು 2ನೇ ಬಾರಿ ನಡಿಗೆ ಆಯೋಜಿಸಲಾಗಿದೆʼ ಎಂದರು.

‘ಕಳೆದ ದಶಕದಲ್ಲಿ ಒಂದೇ ಲಿಂಗದ ವ್ಯಕ್ತಿಗಳ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧಗಳ ನಿರಪರಾಧೀಕರಣ, ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಮಾನ್ಯತೆ ಹಾಗೂ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಶೇ1ರಷ್ಟು ಮೀಸಲಾತಿ ಸೇರಿದಂತೆ ಹಲವು ಮಹತ್ವದ ಸಾಧನೆಗಳು ಸಾಧ್ಯವಾಗಿವೆ. ಆದರೆ, ಕೇಂದ್ರ ಸರ್ಕಾರ ಪರಿಚಯಿಸಿ ಅಂಗೀಕರಿಸಿರುವ ಟ್ರಾನ್ಸ್ಜೆಂಡರ್ ವ್ಯಕ್ತಿಗಳು (ಹಕ್ಕುಗಳ ರಕ್ಷಣೆಯ) ತಿದ್ದುಪಡಿ ಕಾಯ್ದೆ-2026 ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ತಿದ್ದುಪಡಿ ಸ್ವ-ಗುರುತಿನ ಹಕ್ಕನ್ನು ಹತ್ತಿಕ್ಕಿ, ವ್ಯಕ್ತಿಯ ಲಿಂಗತ್ವವನ್ನು ನಿರ್ಧರಿಸುವ ಅಧಿಕಾರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ವೈದ್ಯಕೀಯ ಮಂಡಳಿಗಳಿಗೆ ಒಪ್ಪಿಸುತ್ತಿದೆ’ ಎಂದು ಆರೋಪಿಸಿದರು.

‘ಈ ಕಾಯ್ದೆಯು ಟ್ರಾನ್ಸ್ ಪುರುಷರು, ಟ್ರಾನ್ಸ್ ಮಹಿಳೆಯರು, ಜೆಂಡರ್‌ಕ್ವಿಯರ್ ಮತ್ತು ನಾನ್-ಬೈನರಿ ವ್ಯಕ್ತಿಗಳಂತಹ ಅನೇಕ ಗುರುತುಗಳನ್ನು ಹೊರತುಪಡಿಸುವ ಮೂಲಕ ಸಮುದಾಯದ ಹಕ್ಕುಗಳನ್ನು ಕುಗ್ಗಿಸುತ್ತಿದೆ. ‘ಆಕರ್ಷಣೆ’ ಎಂಬ ಅಸ್ಪಷ್ಟ ವಿಧಿಗಳನ್ನು ಸೇರಿಸುವ ಮೂಲಕ ಹೋರಾಟಗಾರರು ಮತ್ತು ಸಮುದಾಯ ಬೆಂಬಲ ಸಂಘಟನೆಗಳ ಮೇಲೆ ದಮನಕ್ಕೆ ಅವಕಾಶ ಕಲ್ಪಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ʼಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆ ಕಾನೂನನ್ನು ಈಗಾಗಲೇ ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳು ವಿರೋಧಿಸಿವೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರು ವಿರೋಧಿಸಿ ಅದನ್ನು ಜಾರಿಗೊಳಿಸಬಾರದು. ಇದರಿಂದ ಲಿಂಗತ್ವ ಅಲ್ಪಸಂಖ್ಯಾತರು ತಮಗೆ ಆಶಿರ್ವದಿಸಲಿದ್ದಾರೆ. ಕೇಂದ್ರವು ನಮ್ಮ ಮೇಲೆ ಹಿಂದುತ್ವ ಹೇರಿಸುವ ಕೆಲಸ ಮಾಡಿರುವುದು ಖಂಡನೀಯʼ ಎಂದರು.

ʼಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕಾನೂನು ತಿದ್ದುಪಡಿ ಮಾಡಿ, ಸಂವಿಧಾನದ ವಿಧಿ 14, 15, 19 ಮತ್ತು 21ರ ಪಾಲನೆ ಖಚಿತಪಡಿಸಿಕೊಂಡು ಹಾನಿಕಾರಕ ಅನುಷ್ಠಾನಕ್ಕೆ ತಡೆಯಬೇಕು. ಸ್ವ-ಗುರುತು, ಗೌರವ ಮತ್ತು ಗೌಪ್ಯತೆಯನ್ನು ಹಾಳುಮಾಡುವ ನಿಯಮಗಳನ್ನು ಜಾರಿಗೊಳಿಸಬಾರದು. ರಾಜ್ಯದ ಸಂಸದರು, ಶಾಸಕರು ತಮ್ಮ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು, ಸಾಂವಿಧಾನಿಕ ಸವಾಲುಗಳಿಗೆ ಕಾನೂನು ಮತ್ತು ಸಾಂಸ್ಥಿಕ ಸಹಾಯ ಒದಗಿಸಬೇಕು, ಆರೋಗ್ಯ, ಶಿಕ್ಷಣ, ವಾಸಸ್ಥಳ ಮತ್ತು ಜೀವನೋಪಾಯ ಕ್ಷೇತ್ರಗಳಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಅವಕಾಶ ಮತ್ತು ಬಜೆಟ್ ಮೀಸಲಾತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

“ನಾವು ಬದುಕಿದ್ದೇವೆ, ಅನ್ಯಾಯದ ವಿರುದ್ಧ ಪ್ರತಿರೋಧಿಸುತ್ತೇವೆ, ಅದಕ್ಕೆ ಹೆಮ್ಮೆಯಿಂದ ನಡೆಯುತ್ತಿದ್ದೇವೆ” ಎಂಬ ಘೋಷವಾಕ್ಯದೊಂದಿಗೆ ಈ ಸ್ವಾಭಿಮಾನ ನಡಿಗೆ ನಡೆಯಲಿದ್ದು, ಸಮಾಜದಲ್ಲಿ ಸಮಾನತೆ ಮತ್ತು ಗೌರವದ ಸಂದೇಶ ಸಾರಲಿದೆʼ ಎಂದು ವೀಣಾ ಹೇಳಿದರು.

ಇದನ್ನೂ ಓದಿ : ಬೀದರ್‌ | ಎಸ್‌ಐಆರ್, ಇವಿಎಂಗೆ ವಿರೋಧ : 9ನೇ ದಿನ ಪೂರೈಸಿದ ಏಕಾಂಗಿ ಉಪವಾಸ ಸತ್ಯಾಗ್ರಹ

ಪತ್ರಿಕಾಗೋಷ್ಟಿಯಲ್ಲಿ ಎಮ್.ಜಿ.ಎಸ್.ಪಿ ಸದಸ್ಯ ಭೀಮಾ, ಸಂಗಮಿತ್ರಾ ಸೇವಾ ಸಂಸ್ಥೆಯ ಅಧ್ಯಕ್ಷೆ ಸಪ್ನಾ ಹಾಗೂ ಸಾಮಾಜಿಕ ಹೋರಾಟಗಾರರಾದ ಮಹೇಶ ಗೋರನಾಳಕರ್, ವಿನಯಕುಮಾರ ಮಾಳಗೆ, ಜಗದೀಶ್ವರ ಬಿರಾದಾರ, ಬಸವರಾಜ.ಸಿ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...