ಬೀದರ್‌ | ರಂಗಭೂಮಿ ತರಬೇತಿಯಿಂದ ವ್ಯಕ್ತಿತ್ವ ವಿಕಾಸ: ಸತೀಶ ಪಾಟೀಲ

Date:

ರಂಗಭೂಮಿ ತರಬೇತಿಯಿಂದ ಯುವಜನರಲ್ಲಿ ವ್ಯಕ್ತಿತ್ವ ವಿಕಾಸದ ಜೊತೆಗೆ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ಸೃಜನಶೀಲತೆ ಬೆಳೆಯಲಿದೆ ಎಂದು ಕರ್ನಾಟಕ ರಾಷ್ಟ್ರಿಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ಹೇಳಿದರು.

- Advertisement -

ನಗರದ ಕರ್ನಾಟಕ ಕಾಲೇಜಿನಲ್ಲಿ ಮಂಗಳವಾರ ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕರ್ನಾಟಕ ಕಾಲೇಜಿನ ಸಾಂಸ್ಕೃತಿಕ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಿರುವ ಒಂದು ತಿಂಗಳ ರಂಗಭೂಮಿ ಕಾರ್ಯಾಗಾರ ಹಾಗೂ ನಾಟಕ ನಿರ್ಮಾಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

“ರಂಗಭೂಮಿ ತರಬೇತಿಯಿಂದ ನಾಚಿಕೆ ಸ್ವಭಾವ ದೂರವಾಗಿ ನಿರ್ಭಯತೆ ಬೆಳೆಯುತ್ತದೆ. ಸಂದರ್ಶನ ಎದುರಿಸುವ ಕೌಶಲ್ಯ, ವಿಚಾರ ಸಂಕಿರಣ ಆಯೋಜಿಸುವ ಸಾಮರ್ಥ್ಯ ಹಾಗೂ ಭಾಷಣ ಕೌಶಲ್ಯ ವೃದ್ಧಿಯಾಗುತ್ತದೆ. ತರಬೇತಿ ಪಡೆದವರು ಪ್ರಬುದ್ಧ ರಂಗಕರ್ಮಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.

“ರಂಗಭೂಮಿ ತರಬೇತಿ ಸಂವಹನ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸುವುದರ ಜೊತೆಗೆ ಮಾತನಾಡುವ ಕಲೆ, ನಡವಳಿಕೆ ಹಾಗೂ ಕಣ್ಣಿನ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ವಿಧಾನವನ್ನು ಕಲಿಸುತ್ತದೆ. ಬರಹಗಾರ, ನಟ, ಸಹಾಯಕ, ಬೆಳಕಿನ ವಿನ್ಯಾಸಕ, ಪಾತ್ರ ನಿರ್ಮಾಪಕ ಹಾಗೂ ನಿರ್ದೇಶಕರ ಜವಾಬ್ದಾರಿಗಳೇನು ಎಂಬುದನ್ನು ತಿಳಿಸಿಕೊಡುತ್ತದೆ. ನಾಟಕ ಎಂದರೆ ಕೇವಲ ವೇದಿಕೆ ಮೇಲೆ ಸಂಭಾಷಣೆ ಹೇಳುವುದಲ್ಲ; ಅದು ಜೀವನವನ್ನು ಅರ್ಥಮಾಡಿಕೊಳ್ಳುವ ಶಾಲೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

ದೆಹಲಿ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಉಮಾಕಾಂತ ಪಾಟೀಲ ಮಾತನಾಡಿ, “ರಂಗಭೂಮಿ ಶಿಬಿರವು ಭಾವನಾತ್ಮಕ ಬೆಳವಣಿಗೆ ಹಾಗೂ ಒತ್ತಡ ನಿವಾರಣೆಗೆ ಪೂರಕವಾಗಿದೆ. ನಾಟಕದಲ್ಲಿ ಬಡವನಾಗಿದ್ದವನು ಶ್ರೀಮಂತನಾಗಬಹುದು, ರಾಜನಾಗಬಹುದು. ಹೀಗೆ ಬೇರೆಯವರ ಪಾತ್ರದಲ್ಲಿ ಬದುಕಿ ನೋಡುವ ಅವಕಾಶ ದೊರೆಯುವುದರಿಂದ ಸಹಾನುಭೂತಿ ಬೆಳೆಸಿಕೊಳ್ಳಬಹುದು. ದುಃಖದ ಪಾತ್ರವನ್ನು ಅಭಿನಯಿಸುವ ಮೂಲಕ ಭಾವನೆಗಳನ್ನು ಹೊರಹಾಕಲು ಅವಕಾಶ ಸಿಗುತ್ತದೆ. ಮೊಬೈಲ್ ಗೇಮ್‌ಗಳಿಂದ ದೂರವಾಗಿ ನೈಜವಾಗಿ ಮನುಷ್ಯರೊಂದಿಗೆ ಬೆರೆಯಲು ಹಾಗೂ ಆಟವಾಡಲು ರಂಗಭೂಮಿ ವೇದಿಕೆ ಕಲ್ಪಿಸುತ್ತದೆ. ಹಾಸ್ಯಪಾತ್ರಗಳ ಅಭಿನಯವೂ ಮಾನಸಿಕ ಉಲ್ಲಾಸಕ್ಕೆ ಸಹಕಾರಿಯಾಗುತ್ತದೆ” ಎಂದರು.

ರಾಷ್ಟ್ರೀಯ ಜಾನಪದ, ಬುಡಕಟ್ಟು ಹಾಗೂ ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, “ರಾಷ್ಟ್ರೀಯ ನಾಟಕ ಶಾಲೆಯು ತನ್ನ 60 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬೀದರ್‌ನಲ್ಲಿ ರಂಗಭೂಮಿ ಶಿಬಿರ ಆಯೋಜಿಸುತ್ತಿರುವುದು ಜಿಲ್ಲೆಯ ಜನತೆಗೆ ಸಂತಸದ ಸಂಗತಿ. ಈ ಶಿಬಿರವು ಸ್ಥಳೀಯ ಜನಪದ ಕಲೆಗಳಿಗೆ ಹೊಸ ಚೈತನ್ಯ ನೀಡಲಿದ್ದು, ಶಿಬಿರಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ” ಎಂದರು.

ಶಿಬಿರದ ನಿರ್ದೇಶಕ ಮಹೇಶ ಪಾಟೀಲ ಮಾತನಾಡಿ, “ಪುಸ್ತಕದಿಂದ ಜ್ಞಾನ ಪಡೆಯಬಹುದು; ಆದರೆ ರಂಗಭೂಮಿ ಶಿಬಿರದಿಂದ ಅನುಭವ ದೊರೆಯುತ್ತದೆ. ಅದು ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುತ್ತದೆ. ವೇದಿಕೆಯ ಮೇಲೆ ಶಿಬಿರಾರ್ಥಿಗಳು ಕಾಲಿಟ್ಟಾಗ ಅವರ ಮಾತನಾಡುವ ಶೈಲಿ ಹಾಗೂ ಯೋಚಿಸುವ ವಿಧಾನದಲ್ಲಿ ಸಹಜವಾಗಿ ಬದಲಾವಣೆ ಉಂಟಾಗುತ್ತದೆ. ರಂಗಭೂಮಿ ಪದವಿ ನೀಡುವುದಿಲ್ಲ; ಬದಲಾಗಿ ಜೀವನದ ನೈಜ ಪದವಿಯನ್ನು ನೀಡುತ್ತದೆ. ಕಲಾವಿದರಲ್ಲಿ ನೈಪುಣ್ಯ ವೃದ್ಧಿಸಲು ಈ ಶಿಬಿರ ಅತ್ಯಂತ ಪೂರಕವಾಗಿದೆ” ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಿನಿಮಾದ ಕಾಲದಲ್ಲಿ ಬದುಕುತ್ತಿರುವ ನಾವು ರೀಲ್ ಜೀವನಕ್ಕೆ ಮಾರುಹೋಗಿ ರಿಯಲ್ ಲೈಫ್‌ಗೆ ದೂರವಾಗುತ್ತಿದ್ದೇವೆ. ಇದರಿಂದ ಅಹಂಕಾರಕ್ಕೂ ಇಂಬು ಸಿಗುತ್ತಿದೆ. ಇಂತಹ ಪರಿಸ್ಥಿತಿಯನ್ನು ಸರಿದೂಗಿಸಲು ರಂಗಭೂಮಿ ದಿವ್ಯ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಶಿಬಿರಾರ್ಥಿಗಳು ಪ್ರೇಕ್ಷಕರ ಮುಂದೆ ಪಾತ್ರಧಾರಿಗಳಾಗಿ ಜೀವಂತವಾಗಿ ಕಾಣಿಸಿಕೊಂಡಾಗ ಅವರ ಭಾವನಾಶೈಲಿ ವಿಶಾಲಗೊಳ್ಳುವುದರ ಜೊತೆಗೆ ಸಮಾಜದಲ್ಲಿ ಗೌರವವೂ ದೊರೆಯಲಿದೆ” ಎಂದರು.

ಇದನ್ನೂ ಓದಿ : ಭೀಕರ ಅಪಘಾತ | ತೆಲಂಗಾಣಕ್ಕೆ ಕೂಲಿ ಕೆಲಸಕ್ಕೆ ತೆರಳಿದ ಆರು ಜನ ಕಾರ್ಮಿಕರ ಸಾವು

ಕೆ.ಆರ್.ಇ. ಸಂಸ್ಥೆಯ ಆಡಳಿತಾಧಿಕಾರಿ ಅನಿಲಕುಮಾರ ಅಣದುರೆ ಹಾಗೂ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಸೋಮನಾಥ ಬಿರಾದಾರ ಸೇರಿದಂತೆ ಕರ್ನಾಟಕ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ರಜನಿ ಸತಾನೆ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...