ರಷ್ಯಾ ಪರ ಮಧ್ಯಸ್ಥರಾಗಿ ಮಾಜಿ ಸಿಜೆಐ ಡಿ ವೈ ಚಂದ್ರಚೂಡ್ ನೇಮಕ

Date:

ಮಾಜಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರನ್ನು ರಷ್ಯಾ, ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಷ್ಚಾಡ್‌ಬ್ಯಾಂಕ್‌ (Oschadbank) ದಾಖಲಿಸಿರುವ ಹೂಡಿಕೆ ಒಪ್ಪಂದದ ವಿವಾದದಲ್ಲಿ ತನ್ನ ಪರ ಮಧ್ಯಸ್ಥರಾಗಿ ನೇಮಕ ಮಾಡಿದೆ.

- Advertisement -

ಗ್ಲೋಬಲ್ ಆರ್ಬಿಟ್ರೇಷನ್ ರಿವ್ಯೂ ವರದಿ ಪ್ರಕಾರ, ಈ ಪ್ರಕರಣದ ಮೂರು ಸದಸ್ಯರ ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಕೋಸ್ಟರಿಕಾದ ಮಧ್ಯಸ್ಥಕಿ ಹಾಗೂ ಮಾಜಿ ವ್ಯಾಪಾರ ಸಚಿವೆ ಡಯಾಲಾ ಜಿಮೆನೆಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಮೆನೆಜ್ ಅವರನ್ನು ಎರಡೂ ಕಡೆಯವರು ಒಮ್ಮತದಿಂದ ನ್ಯಾಯಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಒಷ್ಚಾಡ್‌ಬ್ಯಾಂಕ್ ಪರವಾಗಿ ಗ್ರೀಸ್‌ನ ಮಧ್ಯಸ್ಥಕ ಹಾಗೂ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಪ್ರಾಧ್ಯಾಪಕ ಸ್ಟಾವ್ರೋಸ್ ಬ್ರೆಕೌಲಾಕಿಸ್ ಅವರನ್ನು ನೇಮಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಈ ಮಧ್ಯಸ್ಥಿಕೆ ಪ್ರಕ್ರಿಯೆ 1998ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಜಾರಿಯಾಗಿದ್ದ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಅಡಿಯಲ್ಲಿ ಆರಂಭವಾಗಿದೆ. ರಷ್ಯಾದ ಸೇನಾ ಕಾರ್ಯಾಚರಣೆಗಳಿಂದ, ವಿಶೇಷವಾಗಿ 2022ರ ಪೂರ್ಣ ಪ್ರಮಾಣದ ಆಕ್ರಮಣದ ಬಳಿಕ, ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಝಪೋರಿಝಿಯಾ ಪ್ರದೇಶಗಳಲ್ಲಿನ ತನ್ನ ಆಸ್ತಿಗಳು ಹಾಗೂ ಕಾರ್ಯಾಚರಣೆಗಳನ್ನು ಕಳೆದುಕೊಂಡಿರುವುದಾಗಿ ಒಷ್ಚಾಡ್‌ಬ್ಯಾಂಕ್ ಆರೋಪಿಸಿದೆ.

ಬ್ಯಾಂಕ್ ಮಾಡಿರುವ ಪರಿಹಾರ ಮೊತ್ತದ ಬೇಡಿಕೆ ನೂರಾರು ಮಿಲಿಯನ್ ಡಾಲರ್‌ಗಳಷ್ಟಿದೆ ಎಂದು ವರದಿಯಾಗಿದೆ. 2025ರ ಜುಲೈನಲ್ಲಿ ರಷ್ಯಾಗೆ ವಿವಾದದ ಕುರಿತು ನೋಟಿಸ್ ನೀಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದ್ದು, ಬಳಿಕ ಒಷ್ಚಾಡ್‌ಬ್ಯಾಂಕ್ ಮಧ್ಯಸ್ಥಿಕೆ ಪ್ರಕ್ರಿಯೆ ಆರಂಭಿಸಿದೆ.

ಇದಕ್ಕೂ ಮುನ್ನ ವಿಂಟರ್‌ಶಾಲ್ ಡೀ ಮತ್ತು ಉಕ್ರೆನರ್ಗೊ ಸಂಸ್ಥೆಗಳು ದಾಖಲಿಸಿದ್ದ ಒಪ್ಪಂದ ಸಂಬಂಧಿತ ಪ್ರಕರಣಗಳಲ್ಲಿ ರಷ್ಯಾ ಪರ ಮಧ್ಯಸ್ಥರಾಗಿ ಕಾರ್ಯನಿರ್ವಹಿಸುವಂತೆ ಡಿ.ವೈ. ಚಂದ್ರಚೂಡ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಆ ಪ್ರಸ್ತಾವನೆಗಳನ್ನು ಅವರು ತಿರಸ್ಕರಿಸಿದ್ದರು.

ಇದನ್ನೂ ಓದಿ: ಮೃತಪಟ್ಟ 42 ದಿನಗಳ ಬಳಿಕ ಬಂತು ‘ಗುಣಮುಖರಾಗಿದ್ದಕ್ಕೆ ಸಂತಸ’ ಎಂಬ ಆಯುಷ್ಮಾನ್ ಸಂದೇಶ

ವಿಂಟರ್‌ಶಾಲ್ ಪ್ರಕರಣದಲ್ಲಿ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ಚಂದ್ರಚೂಡ್ ಅವರನ್ನು ನೇಮಕಾತಿ ಪ್ರಾಧಿಕಾರವಾಗಿ ಆಯ್ಕೆ ಮಾಡಿದ್ದ ಅದೇ ದಿನ ರಷ್ಯಾ ಅವರನ್ನು ಮಧ್ಯಸ್ಥರಾಗಿ ಸಂಪರ್ಕಿಸಿತ್ತು ಎನ್ನಲಾಗಿದೆ. ಈ ಸಂವಹನವನ್ನು ಬಹಿರಂಗಪಡಿಸಿದ ಬಳಿಕ ಚಂದ್ರಚೂಡ್ ಅವರು ಆ ನೇಮಕಾತಿ ಪಾತ್ರದಿಂದ ಹಿಂದೆ ಸರಿದಿದ್ದರು.

ಒಷ್ಚಾಡ್‌ಬ್ಯಾಂಕ್ ಪರವಾಗಿ ಕ್ವಿನ್ ಇಮ್ಯಾನುಯೆಲ್ ಉರ್ಕ್‌ಹಾರ್ಟ್ ಆ್ಯಂಡ್ ಸುಲ್ಲಿವನ್ ಸಂಸ್ಥೆಯ ಪಾಲುದಾರರಾದ ಎಪಮಿನಾಂಟಾಸ್ ಟ್ರಿಯಾಂಟಾಫಿಲೊ ಮತ್ತು ಅಲೆಕ್ಸ್ ಗೆರ್ಬಿ, ಜೊತೆಗೆ ಆಸ್ಟರ್ಸ್ ಸಂಸ್ಥೆಯ ಪಾಲುದಾರರಾದ ಒಲೆಕ್ಸಿ ಡಿಡ್ಕೊವ್‌ಸ್ಕಿ, ಆಂಡ್ರಿ ಪೊಝಿದಾಯೆವ್ ಮತ್ತು ಒಕ್ಸಾನಾ ಲೆಗ್ಕಾ ವಾದಿಸಲಿದ್ದಾರೆ. ರಷ್ಯಾ ಪರವಾಗಿ ಪಿನ್ನಾ ಗೋಲ್ಡ್‌ಬರ್ಗ್ ಸಂಸ್ಥೆಯ ಪಾಲುದಾರ ಆಂಡ್ರಿಯಾ ಪಿನ್ನಾ, ಕೌನ್ಸೆಲ್ ಪ್ರತ್ಯುಷ್ ಪಂಜ್ವಾನಿ ಮತ್ತು ಹಿರಿಯ ಸಹಾಯಕ ಡಿಮಿಟ್ರಿಯೊಸ್ ಪಾಪಗೆರ್ಗಿಯುಸ್ ಪ್ರತಿನಿಧಿಸಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...