ಬೀದರ್‌ | ಯುವ ಬರಹಗಾರರಿಂದ ಗಟ್ಟಿ ಸಾಹಿತ್ಯ ಹೊರಬರಲಿ : ಸುರೇಶ ಚನ್ನಶೆಟ್ಟಿ

Date:

ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೊಸ ತಲೆಮಾರಿನ ಯುವ ಬರಹಗಾರರು ಗಟ್ಟಿ ಸಾಹಿತ್ಯ ರಚಿಸಲು ಮುಂದಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಹೇಳಿದರು.

- Advertisement -

ನಗರದ ಹೋಟೆಲ್ ಕೃಷ್ಣ ರೆಜೆನ್ಸಿ ಸಭಾಂಗಣದಲ್ಲಿ ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಉದಯೋನ್ಮುಖ ಕವಿ ಅಶ್ವಜೀತ ದಂಡಿನ ಅವರ ‘ಚಿಮ್ಮಿದ ಬುಗ್ಗೆ’ ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

“ಕುವೆಂಪು, ಬೇಂದ್ರೆ ಸೇರಿದಂತೆ ನಾಡಿನ ಅನೇಕ ಮಹನೀಯರ ಸಾಹಿತ್ಯ ಕೃಷಿ ನಮಗೆ ಆದರ್ಶವಾಗಬೇಕು. ಇಂದಿನ ಯುವ ಜನಾಂಗ ಸಾಹಿತ್ಯ ಕ್ಷೇತ್ರದಿಂದ ವಿಮುಖರಾಗದೆ ನಾಡು, ನುಡಿ, ಭಾಷೆಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ಲೇಖಕರಿಂದ ಸಮಾಜಕ್ಕೆ ಹೊಸ ಬೆಳಕು ಚೆಲ್ಲುವ ಸಾಹಿತ್ಯ ಹೊರಬರಬೇಕಿದ್ದು, ಈ ನಿಟ್ಟಿನಲ್ಲಿ ಅಶ್ವಜೀತ್‌ ದಂಡಿನ ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆವಹಿಸಿ ಮಾತನಾಡಿ, ಅಶ್ವಜೀತ್‌ ಅವರ ‘ಚಿಮ್ಮಿದ ಬುಗ್ಗೆ’ ಕೃತಿ ನೋವು, ಜಾತಿ ತಾರತಮ್ಯ ಹಾಗೂ ಸಮಾಜದ ವಾಸ್ತವ ಚಿತ್ರಣ ಕವಿತೆಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಂದಿನ ಪ್ರತಿಭಾವಂತ ಕವಿ, ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ಕರೆತರುವುದು ಅಗತ್ಯವಿದೆ” ಎಂದರು.

ಹಿರಿಯ ಸಾಹಿತಿ ಬಿ.ಜೆ.ಪಾರ್ವತಿ ಸೋನಾರೆ ಅವರು ಕೃತಿ ಕುರಿತು ಮಾತನಾಡಿ, “ಸಾಹಿತ್ಯ ಶ್ರೀಮಂತರ ಸ್ವತ್ತಲ್ಲ. ನಿರಂತರ ಅಧ್ಯಯನ, ಆಸಕ್ತಿ, ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡರೆ ಭಾವನೆಗಳು ಹೃದಯದಿಂದ ಹೊರಬರುತ್ತವೆ. ‘ಚಿಮ್ಮಿದ ಬುಗ್ಗೆ’ ಕವನ ಸಂಕಲನದಲ್ಲಿ ಸಮಾಜದ ಸುತ್ತಮುತ್ತಲಿನ ಶೋಷಿತ, ದಮನಿತರ ಬದುಕಿನ ಸಂಕಟ ಅನಾವರಣಗೊಂಡಿದೆ. ಓದುಗರು ಹೊಸ ಪುಸ್ತಕಗಳನ್ನು ಕೊಂಡು ಓದಿ ಪ್ರೋತ್ಸಾಹಿಸುವ ಮನೋಭಾವ ರೂಢಿಯಾದರೆ ಹೊಸ ಬರಹಗಾರರಿಂದ ಹೆಚ್ಚಿನ ಕೃತಿಗಳು ಪ್ರಕಟವಾಗಲು ಸಾಧ್ಯ” ಎಂದರು.

ಉಪನ್ಯಾಸಕ ಮಯೂರ ಬಸವರಾಜ ಅವರು ‘ಚಿಮ್ಮಿದ ಬುಗ್ಗೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ಸೃಜನಶೀಲ ಬರಹಗಾರ ಸಾಮಾಜಿಕ ಕಳಕಳಿ, ಪ್ರಭುತ್ವ ಪ್ರಶ್ನಿಸುವ ಬಂಡಾಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಇಂದಿಗೂ ಬೇರೂರಿರುವ ಅಸಮಾನತೆ, ಜಾತಿಯತೆ, ಶೋಷಣೆ, ಕೌರ್ಯ ಸೇರಿದಂತೆ ಮೌಢ್ಯ ವಿರುದ್ಧದ ಕವಿತೆಗಳು ಸಕಾಲಿಕ ಎನಿಸುತ್ತವೆ. ಇಂದಿನ ಸಮಾಜಕ್ಕೆ ಇಂತಹ ವೈಚಾರಿಕ ಲೇಖಕರ ಅಗತ್ಯವಿದೆ” ಎಂದರು.

WhatsApp Image 2026 07 26 at 7.34.37 PM

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಹಿರಿಯ ಸಾಹಿತಿ ಕಾಶಿನಾಥ ಚೆಲ್ವಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಂ.ಎಸ್.ಮನೋಹರ ಹಾಗೂ ಕೃತಿ ಲೇಖಕ ಅಶ್ವಜೀತ ದಂಡಿನ್‌ ಅವರು ಮಾತನಾಡಿದರು.

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ತಮ್ಮ ಸ್ವರಚಿತ ಕವಿತೆ ವಾಚಿಸಿದರು. ಸಮಾಜ, ಸಾಹಿತ್ಯ, ಶಿಕ್ಷಣ, ಜಾನಪದ ಕಲೆ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಪ್ರಶ್ನೆಗಳ ಮುಖಕ್ಕೆ ಕೋಮು ಹಣೆಪಟ್ಟಿ ತರವಲ್ಲ!

ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ದೇವಪ್ಪ ಚಾಂಬಳೆ ಮಾಳೆಗಾಂವ, ಕೆ.ಎಸ್. ಬಂಧು, ಮಾಣಿಕರಾವ್, ಜಯದೇವ ಗುರೂಜಿ ಆಳವಾಯಿ, ಶಂಭುಲಿಂಗ ವಾಲ್ದೊಡ್ಡಿ, ವಿಜಯಕುಮಾರ ಸೋನಾರೆ, ರಮೇಶ ಬಿರಾದರ್‌, ಸುನೀಲ ಕಡ್ಡೆ, ಭಾರತಿ ವಸ್ತ್ರದ್ ಸೇರಿದಂತೆ‌ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಅಜೀತ್ ಎನ್.ನೇಳಗಿ ಸ್ವಾಗತಿಸಿದರು. ದಿಲೀಪಕುಮಾರ ಮೋಘ ನಿರೂಪಿಸಿದರು. ಅವಿನಾಶ್ ಸೋನೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

30 ದಿನ ಕಳೆದರೂ ʼRTIʼಗೆ ಉತ್ತರವಿಲ್ಲ; ECI ಮೇಲೊಂದು ಪ್ರಶ್ನಾರ್ಥಕ ಚಿಹ್ನೆ! 

'ಚುನಾವಣಾ ಆಯೋಗ ಏನು ಮುಚ್ಚಿಡಲು ಪ್ರಯತ್ನಿಸುತ್ತಿದೆ?' ಎಂಬ ಗಂಭೀರ ಅನುಮಾನ ಈಗ...

ನ.1ರಂದು ʼದಿಲ್ಲಿ ಚಲೋʼ | ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಜೊತೆಗೂಡುವಂತೆ ರಾಹುಲ್ ಗಾಂಧಿ ಕರೆ

ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನವನ್ನು ತಡೆಯಲು ಹಾಗೂ ಸಂವಿಧಾನವನ್ನು ರಕ್ಷಿಸಲು ನವೆಂಬರ್...

SIR ಸಂಚು: 10 ಕೋಟಿ ಜನರಲ್ಲಿ ಸಿಕ್ಕಿದ್ದು ಬರಿ 1,600 ವಿದೇಶಿಯರು!

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ನಡೆಸುತ್ತಿರುವುದು ದೇಶದ...

ಅಪ್ರಾಪ್ತ ಪುತ್ರನಿಂದ ಕಾರು ಅಪಘಾತ: ಕೇರಳದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಕೊಚ್ಚಿಯಲ್ಲಿ 17 ವರ್ಷದ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್-ಬೆಂಜ್ ಕಾರು ಡಿಕ್ಕಿ...