ಹಾವೇರಿ | ನೀಟ್ ಮರು ಪರೀಕ್ಷೆಯಲ್ಲಿ ಕೇವಲ 11 ಅಂಕ; ವಿದ್ಯಾರ್ಥಿನಿ ದೂರು

Date:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ವಿದ್ಯಾರ್ಥಿಗಳು ಪ್ರತಿಭಟಿಸಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೆ, ಇದೀಗ ನೀಟ್ ಮರು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕೇವಲ 11 ಅಂಕಗಳು ಬಂದಿದ್ದು, ಅನ್ಯಾಯವಾಗಿದೆ ಎಂದು ವಿದ್ಯಾರ್ಥಿನಿ ದೂರಿದ್ದಾರೆ.

- Advertisement -

ಹಾವೇರಿ ಜಿಲ್ಲೆಯ ಹಾನಗಲ್ಲ ವಿದ್ಯಾರ್ಥಿನಿ ಬಿಂದುಶ್ರೀ ಪವಾರ ಹಾವೇರಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೀಟ್ ಮರು ಪರೀಕ್ಷೆ ಬರೆದಿದ್ದಾರೆ. ಓಎಂಆರ್ ಸೀಟ್‌ನಲ್ಲಿ ಬರೀ -11 ಅಂಕ ಬಂದಿದ್ದು, ಹೆಬ್ಬೆಟ್ಟಿನ ಗುರುತು ಕೂಡಾ ಓವರ್‌ಲ್ಯಾಪ್ ಆಗಿದೆ. ಈ ಕುರಿತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಮೇಲ್‌ನಲ್ಲಿ ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ನೀಟ್ ಪರೀಕ್ಷೆಯಲ್ಲಿ ನಾನು ತುಂಬಿದ ಓಎಂಆರ್ ಸೀಟ್ ಅಂಕ ನನಗೆ ಬಂದಿಲ್ಲ. ನಾನು ವೆಬ್‌ಸೈಟ್‌ನಲ್ಲಿ ತರಿಸಿಕೊಂಡ ಓಎಂಆರ್ ಸೀಟ್ ನನ್ನದಲ್ಲವೇ ಅಲ್ಲ, ನಾನು ಪರೀಕ್ಷೆಗೆ ಹಾಜರಾದ ಸಮಯ, ಹೊರಬಂದ ಸಮಯ, ಓಎಂಆರ್ ಸೀಟ್ ನಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೇ ನನ್ನ ಹೆಬ್ಬೆಟ್ಟಿನ ಗುರುತು ಕೂಡಾ ಓವರ್ ಲ್ಯಾಪ್ ಆಗಿದೆ” ಎಂದು ದೂರಿದ್ದಾರೆ.

“ನನಗೆ 720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು, ಆದರೆ ಬಂದದ್ದು -11 ಅಂಕ ಇದು ನನ್ನ ಫಲಿತಾಂಶದ ಮೇಲೆ ಮಾಡಿದೆ” ಎಂದಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ. 98 ಅಂಕ ಪಡೆದಿದ್ದೇನೆ. ಪಿಯುಸಿ ವಿಜ್ಞಾನದಲ್ಲಿ ಶೇ. 95 ಬಂದಿವೆ. ಇಷ್ಟೆಲ್ಲರದ ನಡುವೆ ನಾನು ಪರಿಶ್ರಮಪಟ್ಟು ಓದಿದ ಫಲಿತಾಂಶ ನನಗೆ ಸಿಗಲಿಲ್ಲ. ಎಲ್ಲೋ ನಡೆದ ಮೋಸ ನನ್ನ ಭವಿಷ್ಯದ ಮೇಲೆ ಆಟವಾಡಿದೆ” ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಈ ಪರೀಕ್ಷೆ ವ್ಯವಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ. ಈ ವಿಷಯವನ್ನು ಸಮಗ್ರ ತನಿಖೆ ಮಾಡಿ, ನನಗೆ ನ್ಯಾಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ಅವರಿಗೆ ಜು. 22ರಂದು ಈ ಓಎಂಆರ್ ಸೀಟ್ ನನ್ನದಲ್ಲ ಹಾಗೂ ಫಲಿತಾಂಶವೂ ನನ್ನದಲ್ಲ ಎಂದು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಪರೀಕ್ಷಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ, ಸತ್ಯವನ್ನು ಪರಿಶೀಲಿಸಿ ನನಗೆ ನ್ಯಾಯಕೊಡಿಸುತ್ತದೆ. ನನ್ನದೇ ಆದ ಓಎಂಆ‌ರ್ ಸೀಟ್ ನನಗೆ ಸಿಕ್ಕು 668 ಅಂಕ ಪಡೆದಿದ್ದು, ನನಗೆ ಬಯಸಿದ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ. ನನ್ನ ನಂಬಿಕೆಗೆ ಮೋಸವಾಗುದಿಲ್ಲ ಎಂಬ ಪೂರ್ಣವಿಶ್ವಾಸವಿದೆ” ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ನಗರದ ಪ್ರಮುಖ ರಸ್ತೆಗಳಲ್ಲಿ ಭೂಗತ ವಿದ್ಯುತ್ ಜಾಲ ನಿರ್ಮಾಣಕ್ಕೆ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ

ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಮೇಲ್ಮಟ್ಟದ ತಂತಿಗಳ ಜಾಲವನ್ನು...

ವಿಜಯಪುರ |ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿ;ಡಿಸಿ ಆನಂದ ಕೆ

ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು....

ಯಾದಗಿರಿ | ಬುದ್ಧನ ಸಮಾನತೆ, ಶಾಂತಿ ಸಂದೇಶದೊಂದಿಗೆ ವರ್ಷವಾಸ ಸಮಾರೋಪ; ಭಿಕ್ಕುಗಳಿಗೆ ಚೀವರದಾನ

ಬುದ್ಧನ ಸಮಾನತೆ, ಶಾಂತಿ, ಮಾನವೀಯತೆ ಹಾಗೂ ಪ್ರಜ್ಞೆಯ ಸಂದೇಶವನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳುವ...

ರಾಯಚೂರು | ದೇವರಗುಡ್ಡ ಸೀಮಾಂತರದಲ್ಲಿ ₹11.94 ಲಕ್ಷ ಮೌಲ್ಯದ 23.89 ಕೆ.ಜಿ. ಗಾಂಜಾ ಜಪ್ತಿ: ಆರೋಪಿ ಬಂಧನ

ದೇವದುರ್ಗ ತಾಲೂಕಿನ ದೇವರಗುಡ್ಡ ಸೀಮಾಂತರದಲ್ಲಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಬೆಳೆದಿದ್ದ...