ಬೀದರ್‌ | ವಚನ ಸಾಹಿತ್ಯ ಸಮಾನತೆ, ಜನಪರ

Date:

ವಚನ ಸಾಹಿತ್ಯ ಜನಪರ ಸಾಹಿತ್ಯವಾಗಿದೆ ಎಂದು ತೆಲಂಗಾಣದ ವಾರಂಗಲ್‍ನ ಪಾಲ್ಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ಡಾ.ರಾಪುಲು ಸತ್ಯನಾರಾಯಣ ಹೇಳಿದರು.

- Advertisement -

ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಬೀದರ್‌ ಹೊರವಲಯದ ಬಸವಗಿರಿಯಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ 24ನೇ ವಚನ ವಿಜಯೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ʼಪಾಲ್ಕುರಿಕೆ ಸೋಮನಾಥ ಅವರು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಅನುಯಾಯಿ ಆಗಿದ್ದು, ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ʼಪಾಲ್ಕುರಿಕೆ ಸೋಮನಾಥ ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಸವಣ್ಣ ಹಾಗೂ ಶಿವಭಕ್ತರ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಬಸವ ಪುರಾಣ ಕೃತಿ ಶರಣ ಸಾಹಿತ್ಯದ ಮಹತ್ವದ ಕೃತಿ ಎನಿಸಿದೆ. ಪಾಲ್ಕುರಿಕೆ ಅವರ ವಂಶಸ್ಥರು ಮಹಾರಾಷ್ಟ್ರದಲ್ಲಿ ಈಗಲೂ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆʼ ಎಂದು ತಿಳಿಸಿದರು.

ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ʼಶರಣರು ಕೊಟ್ಟು ಹೋದ ವಚನ ಸಾಹಿತ್ಯದ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ವಚನ ವಿಜಯೋತ್ಸವ ಆಚರಣೆಯ ಉದ್ದೇಶವಾಗಿದೆ. ಶರಣರು ತ್ಯಾಗ, ಬಲಿದಾನ ಮಾಡಿ ವಚನ ಸಾಹಿತ್ಯ ರಕ್ಷಿಸಿದ್ದಾರೆ. ವಚನ ಸಾಹಿತ್ಯ ಸದ್ಗುಣ ಹಾಗೂ ಮಾನವೀಯ ಮೌಲ್ಯಗಳ ಕಣಜವಾಗಿದೆ. ಕಾಯಕ, ದಾಸೋಹ, ಸಮಾನತೆಯ ಸಿದ್ಧಾಂತ ವಚನಗಳಲ್ಲಿ ಕಾಣಬಹುದು. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಜನಾಂಗದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತುʼ ಎಂದು ಸ್ಮರಿಸಿದರು.‌

WhatsApp Image 2026 01 30 at 6.58.58 PM

ಸಾಹಿತಿ ಡಾ.ಬಸವರಾಜ ಸಬರದ ಮಾತನಾಡಿ, ʼಸಮಾನತೆ ಲಿಂಗಾಯತ ಧರ್ಮದ ಜೀವಾಳ ಹಾಗೂ ಸೌಹಾರ್ದ ಗುರಿಯಾಗಿದೆ. ಧರ್ಮ ಮತ್ತು ಕ್ರಾಂತಿ ಎರಡೂ ಬೇರೆ ಬೇರೆ. ಎರಡನ್ನೂ ಕೂಡಿಸಿದವರು ಬಸವಣ್ಣ. ಅವರು ಧರ್ಮವೇ ಕ್ರಾಂತಿ, ಕ್ರಾಂತಿಯೇ ಧರ್ಮ ಎಂದಿದ್ದರು. ಫ್ರಾನ್ಸ್ ಹಾಗೂ ಜಾಗತಿಕ ಕ್ರಾಂತಿಗಳಿಗಿಂತ ಬಸವಣ್ಣನವರು ಮಾಡಿದ ಕ್ರಾಂತಿ ವಿಶಿಷ್ಟವಾಗಿದೆ. ಶರಣರು ಮರಣಕ್ಕೆ ಹೆದರುತ್ತಿರಲಿಲ್ಲ. ಅವರಿಗೆ ಮರಣವೇ ಮಹಾನವಮಿಯಾಗಿತ್ತುʼ ಎಂದು ಹೇಳಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼವಚನ ಸಾಹಿತ್ಯ ನಿತ್ಯ ಸತ್ಯವಾಗಿದೆ. ಅದು ಎಂದೆಂದೂ ಶಾಶ್ವತವಾಗಿರುತ್ತದೆ. ಎಲ್ಲರೂ ವಚನದ ದಾರಿಗೆ ಬರುತ್ತಾರೆ. ವಚನ ವಿಜಯೋತ್ಸವ ಎಲ್ಲರದ್ದಾಗಿದೆ. ವಚನ ಸಾಹಿತ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿದರೆ ಕೋಟಿ-ಕೋಟಿ ಜನರನ್ನು ತಲುಪುತ್ತದೆʼ ಎಂದು ಹೇಳಿದರು.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಬಸವಣ್ಣನವರ ತತ್ವಗಳ ಪ್ರಸಾರಕರು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ತಿಳಿಸಿದರು.

ವಚನ ವಿಜಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಚಂದ್ರಕಾಂತ ಮಿರ್ಚೆ ಆಶಯ ನುಡಿ ಆಡಿದರು. ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಆಂಧ್ರಪ್ರದೇಶದ ಬಪತಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುರುಪತಿ ನೀಲಕಂಠೇಶ್ವರ ಪ್ರಸಾದ, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬು ವಾಲಿ, ಜಗನ್ನಾಥ ಹೆಬ್ಬಾಳೆ, ಕುಶಾಲ ಪಾಟೀಲ ಖಾಜಾಪುರ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ ಗಾದಗಿ, ಬಿ.ಜಿ.ಶೆಟಕಾರ್, ಸಿದ್ದಯ್ಯ ಕಾವಡಿಮಠ, ಶ್ರೀಕಾಂತ ಸ್ವಾಮಿ, ಪ್ರಕಾಶ ಟೊಣ್ಣೆ, ರಮೇಶ ಪಾಟೀಲ ಸೋಲಪುರ, ಭಾಲ್ಕಿ ತಹಸೀಲ್ದಾರ್ ಮಹೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜು ಚಿಂತಾಮಣಿ, ಡಾ.ವಿಜಯಶ್ರೀ ಸಬರದ, ಸುಭಾಷ ಹಮೀಲಪುರೆ, ರಾಜಕುಮಾರ ನಾಗೇಶ್ವರ, ಸೋಮನಾಥ ಅಮಲಾಪುರೆ, ಸುಭಾಷ ಮಡಿವಾಳ, ವಿಠ್ಠಲ ಕುಂಬಾರ, ಜಗನ್ನಾಥ ಜಮಾದಾರ್, ರಮೇಶ ಕಟ್ಟಿಮನಿ ಮತ್ತಿತರರು ಇದ್ದರು.

WhatsApp Image 2026 01 30 at 6.59.19 PM

ವನಿತಾ ಗುಂಡಪ್ಪ ಬಳತೆ, ಡಾ. ದೇವಕಿ ಡಾ. ಅಶೋಕ ನಾಗೂರೆ ಗುರುಪೂಜೆ ನೇರವೇರಿಸಿದರು. ನೀಲಮ್ಮನ ಬಳಗದ ಶರಣೆಯರಿಂದ ವಚನ ವಿಜಯೋತ್ಸವದ ಸಮೂಹ ಗಾಯನ ನಡೆಯಿತು. ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಕಲಾವಿದರು ಆಕರ್ಷಕ ವಚನ ನೃತ್ಯ ನಡೆಸಿಕೊಟ್ಟರು. ರಾಜಮತಿ ಗಂಗು ನಿರೂಪಿಸಿದರು. ಕರಣ ಪಾಟೀಲ ವಂದಿಸಿದರು.

ಸಾಮೂಹಿಕ ಇಷ್ಟಲಿಂಗ ಯೋಗ :

ಬಸವಗಿರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಯೋಗದೊಂದಿಗೆ ಮೂರು ದಿನಗಳ ವಚನ ವಿಜಯೋತ್ಸವ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.

ಶರಣ, ಶರಣೆಯರು ಬಿಳಿ ಉಡುಪು, ಭುಜದ ಮೇಲೆ ಕಾವಿ ಬಣ್ಣದ ಸ್ಕಾರ್ಪ್, ಹಣೆ ಮೇಲೆ ವಿಭೂತಿ ಧರಿಸಿ, ಕೈಯಲ್ಲಿ ಇಷ್ಟಲಿಂಗ ಹಿಡಿದು, ಶ್ರದ್ಧೆ, ಭಕ್ತಿಯಿಂದ ಇಷ್ಟಲಿಂಗ ಯೋಗದಲ್ಲಿ ಪಾಲ್ಗೊಂಡರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ಇಷ್ಟಲಿಂಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಬಸವ, ʼಓಂ ನಮಃ ಶಿವಾಯʼ ಮಂತ್ರ ಝೇಂಕರಿಸಿದವು.

WhatsApp Image 2026 01 30 at 6.58.45 PM 1

ಸಿಂಧನೂರಿನ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ ಪಿ.ರುದ್ರಪ್ಪ ಅನುಭಾವ ನೀಡಿದರು. ಬಸವ ಮಹಾಮನೆಯ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ಸಾನಿಧ್ಯ ವಹಿಸಿದರು.

ಪ್ರಮುಖರಾದ ಶಂಕರೆಪ್ಪ ಹೊನ್ನಾ, ಗಣಪತಿ ಕಾಸ್ತೆ, ಸಂಗಪ್ಪ ಉಳ್ಳಾಗಡ್ಡೆ ಅವರಿಗೆ ಶರಣ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದಿತ್ಯ ಪಂಚಾಳ ವಚನ ಸಂಗೀತ ಹಾಗೂ ಲಿಂಗಾಕ್ಷಿ ಖೇಣಿ ವಚನ ನೃತ್ಯ ನಡೆಸಿಕೊಟ್ಟರು. ಮಾತೆ ಸತ್ಯಕ್ಕ, ಮಾತೆ ಲಲಿತಾ, ಮಾತೆ ಚಂದ್ರಕಲಾ ನೇತೃತ್ವ ವಹಿಸಿದ್ದರು. ಸರಸ್ವತಿ ಘೂಳೆ, ಜಗನ್ನಾಥ ರಾಚೋಟಿ, ಕೆ. ನರಹರಿ, ಶಿವಕುಮಾರ ಸಾಲಿ, ಮೀನಾಕ್ಷಿ ಪಾಟೀಲ, ಅನುಪಮಾ ಏರೋಳಕರ್, ಸಂಗೀತಾ ಪಾಟೀಲ, ಅಂಬಾರಾಯ ಬಿರಾದಾರ, ಪ್ರತಿಭಾ ಗಾದಗಿ, ಸಂಗಮೇಶ ತೊಗರಖೇಡೆ, ಇಂದುಮತಿ ಪನ್ನಾಳೆ, ಭಕ್ತರಾಜ ಚಿತ್ತಾಪುರೆ ಮತ್ತಿತರರು ಇದ್ದರು. ಭಾರತಿ ಪಾಟೀಲ ಸ್ವಾಗತಿಸಿದರು. ಆರತಿ ಲಕ್ಕಶೆಟ್ಟಿ ನಿರೂಪಿಸಿದರು.

ಇದನ್ನೂ ಓದಿ : ಬೀದರ್ | 2 ಎಕರೆ ನಿವೇಶನ ಮಂಜೂರು : ಅಲೆಮಾರಿಗಳ ಹೋರಾಟಕ್ಕೆ ಜಯ; ಧರಣಿ ಅಂತ್ಯ

ಇದಕ್ಕೂ ಮುನ್ನ ಪರುಷಕಟ್ಟೆಯ ಮುಂಭಾಗದಲ್ಲಿ ಡಾ.ವಿಜಯಶ್ರೀ ಬಶೆಟ್ಟಿ ಹಾಗೂ ಡಾ.ಸುಭಾಷ್ ಬಶೆಟ್ಟಿ ದಂಪತಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿದರು. ಧ್ವಜ ಗೀತೆಯ ನಂತರ ವಚನ ಪ್ರಾರ್ಥನೆ ನಡೆಯಿತು. ʼವಚನ ವಿಜಯೋತ್ಸವಕ್ಕೆ ಜಯವಾಗಲಿ, ಕಲ್ಯಾಣ ಕ್ರಾಂತಿಗೆ ಜಯವಾಗಲಿ, ಶರಣರ ಸಂಕಲ್ಪಕ್ಕೆ ಜಯವಾಗಲಿʼ ಎಂಬ ಘೋಷಣೆಗಳು ಮೊಳಗಿದವು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಶಿಕ್ಷಕರ ಮಾತು ಆಜ್ಞೆಯಂತೆ ಪಾಲಿಸುವ ಮಕ್ಕಳು ಸೋಲುವುದಿಲ್ಲ : ಶಾಸಕ ಪ್ರಭು ಚವ್ಹಾಣ

ಶಿಕ್ಷಕರು ನೀಡುವ ಮೌಲ್ಯಯುತ ಮಾತುಗಳನ್ನು ಆಜ್ಞೆಯಂತೆ ಪಾಲಿಸುವ ಮಕ್ಕಳು ಜೀವನದಲ್ಲಿ ಸೋಲದೆ,...

ಬೀದರ್‌ | ʼಆಪ್‌ʼ ರಾಜ್ಯ ಅಲ್ಪಸಂಖ್ಯಾತರ ಘಟಕಕ್ಕೆ ಸೈಯದ್‌ ಜಮೀಲ್‌ ನೇಮಕ : ಸನ್ಮಾನ

ಆಮ್ ಆದ್ಮಿ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಬೀದರ್‌ನ ಸೈಯದ್‌...

ಬೀದರ್‌ | ಅಂತರಂಗ ಶುದ್ಧಿಯಿಂದ ಬದುಕಿಗೆ ನೆಮ್ಮದಿ

ಚಟ್ನಾಳ ಗ್ರಾಮದಲ್ಲಿ ವಿಶೇಷ ಶಕ್ತಿಯಿದ್ದು, ಅಂತರಂಗ ಶುದ್ಧಿಯಿಂದ ಸೇವೆಗೈಯುವ ಪರಂಪರೆ ಇಲ್ಲಿದೆ....

ಬೀದರ್‌ | ಶಿಷ್ಟಾಚಾರ ಉಲ್ಲಂಘನೆ : ಡಿಎಚ್‌ಒ ಸೇರಿ ಇಬ್ಬರು ಅಧಿಕಾರಿಗಳು ಅಮಾನತು

ಬಸವಕಲ್ಯಾಣ ತಾಲೂಕಿನ ಉಪವಿಭಾಗ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ...