ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಮೂಲಕ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಸಾಧನೆಗೈದಿದೆ.
ಕಾಲೇಜಿನ 1,117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 439 ಅಗ್ರಶ್ರೇಣಿ, 632 ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜು ಒಟ್ಟಾರೆ ಫಲಿತಾಂಶ ಶೇ 96.41 ಆಗಿದೆ ಎಂದು ಶಾಹೀನ್ಶಿ ಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಸಾನಿಯಾ ಅಲಿಸಾಬ್ ಶೇ 98ರಷ್ಟು ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಯಾಸೀರ್ ಮುಲ್ಲಾ ಶೇ 97.33, ಉಮ್ಮೆಐಮನ್ ಮುಂದಾಸ್ ಶೇ 97, ಮೈನಾಕ್ ಕುಂದು ಶೇ 96.67, ನಂದಿನಿ ಶೇ 96.50, ಝೋಯಾ ಫಾತಿಮಾ ಶೇ 96.50, ಜ್ಯೋತ್ಸ್ನಾ ಜೆ.ಸಿ., ಭಿಮಾಶಂಕರ 96.33, ಝೀಶಾನ್ ಶೇ 96.17, ಅಬುಬಕರ್ ಅಬ್ದುಲ್ಲಾ ಶೇ 96.17
ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಿಯುಸಿ ಫಲಿತಾಂಶ | 20ನೇ ಸ್ಥಾನಕ್ಕೆ ಜಿಗಿದ ಬೀದರ್; ಸೋನಾ ಚಂದ್ರಕಾಂತ ರಾಜ್ಯಕ್ಕೆ ಟಾಪರ್
ಉತ್ತಮ ಶೈಕ್ಷಣಿಕ ವಾತಾವರಣ, ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ, ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




