ಬೀದರ್‌ | ಶರಣರ ಕಾಯಕ ಸಿದ್ಧಾಂತ ಬದುಕಿಗೆ ಪ್ರೇರಣೆ: ಮಹೇಶ ಘಾಳೆ

Date:

ಸಮಾಜದಲ್ಲಿ ಪ್ರಾಮಾಣಿಕತೆ, ಕಾಯಕತತ್ವ ಹಾಗೂ ನಿಷ್ಠೆಯಿಂದ ಸೇವೆಗೈಯುವರಿಗೆ ಜನರು ಪ್ರೇರಣೆ ನೀಡುವುದು ಅವಶ್ಯಕತೆಯಿದೆ ಎಂದು ಜೆಸ್ಕಾಂ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ ಘಾಳೆ ನುಡಿದರು.

- Advertisement -

ಬೀದರ್ ನಗರದ ಡಾ.ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ನಡೆದ 157ನೇಯ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬವಸಲಿಂಗಪಟ್ಟದ್ದೇವರು ಈ ಭಾಗದಲ್ಲಿ ಸಂಸ್ಕಾರಯುತ ಶಿಕ್ಷಣ ಕೊಡುವ ಜೊತೆಗೆ ಮಾನವೀಯ ಮೌಲ್ಯದ ಶಾಲಾ ಕಾಲೇಜು ಪ್ರಾರಂಬಿಸಿದ್ದು ಪ್ರಶಂಸನೀಯವಾಗಿದೆ. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಬಸವಾದಿ ಶರಣರ ಮೌಲ್ಯದಾಯಕ ಸಿದ್ಧಾಂತ, ಕಾಯಕ, ದಾಸೋಹ, ಏಕದೇವೋಪಾಸನೆಗಳು ಮಾನವನ ಜೀವನದಲ್ಲಿ ಸುಖ, ಶಾಂತಿ ಸಮೃದ್ಧಿಯನ್ನು ನೀಡುತ್ತದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ ಮಹಾಲಿಂಗ ಸ್ವಾಮಿಜಿಗಳು ಆಶೀರ್ವಚನ ನೀಡಿ, “ಮಾನವನ ಮನಸ್ಸು ಬೆಳಗಬೇಕಾದರೆ ಅವನಲ್ಲಿರುವ ಅಜ್ಞಾನ, ಅಂಧಕಾರ ಅರಿಷಡ್ವರ್ಗಗಳನ್ನು ಸುಟ್ಟು ಹಾಕಬೇಕಾಗುತ್ತದೆ. 12ನೇ ಶತಮಾನದ 770 ಅಮರಗಣಂಗಳು ಮನದ ಮಲೀನತೆಯನ್ನು ಅಳಿಸಿ ಜ್ಞಾನದ ಜ್ಯೋತಿ ಬೆಳಗುವಲ್ಲಿ ಸತ್ಸಂಗ ಅನುಭಾವದ ಚಿಂತನೆಯನ್ನು ನಡೆಸಿ ನಿರಂತರವಾಗಿ ಇಷ್ಟಲಿಂಗ ಶಿವಯೋಗದಲ್ಲಿ ತೊಡಗಿಸಿಕೊಂಡಿದ್ದರು. ಪ್ರಯುಕ್ತ ಕಲ್ಯಾಣ ಭೂಮಿ ಪವಿತ್ರ ಭೂಮಿಯಾಗಿದೆ” ಎಂದರು.

ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಅವರು ಕರ್ನಾಟಕ ರಾಜ್ಯೋತ್ಸವ ಕುರಿತು ಮಾತನಾಡಿ,”ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸಂಸ್ಕೃತಿ ಪರಂಪರೆ, ಸಂಸ್ಕಾರ ಶ್ರೇಷ್ಠವಾದದ್ದು. ಕನ್ನಡ ಭಾಷೆಯು ಶರಣ ಸಂಸ್ಕೃತಿಯಿಂದ ಕೂಡಿದ್ದು, ವಚನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಾಗಿದೆ. ಬಸವಾದಿ ಶರಣರು ನುಡಿದು ನಡೆದು ತೋರಿಸಿದ ತತ್ವವಾಗಿದೆ, ಕನ್ನಡ ಭಾಷೆಯು ಸುಲಿದ ಬಾಳೆಯಂತಿದೆ. ಕನ್ನಡ ಭೂಮಿ ಪವಿತ್ರ ನದಿ ಋಷಿ, ಮುನಿ, ಸಂತ, ಶರಣರ ನಡೆದಾಡಿದ ಪುಣ್ಯ ಭೂಮಿಯಾಗಿದೆ” ಎಂದು ನುಡಿದರು.

ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಸುವರ್ಣಾ ಚಿಮಕೋಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ಮಾಣಿಕೇಶ್ವರಿ ಗುರುವಿನ ಮಹತ್ವದ ಬಗ್ಗೆ ಮತ್ತು ಸ್ನೇಹಾ ದಿಗಂಬರ ಪಂಚಾಚಾರ ಕುರಿತು ಮಾತನಾಡಿದರು.

ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್. ಬಿ. ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನಾಗಶೆಟ್ಟಿ ಜೊತೆಪ್ಪನೋರ, ದಾಸೋಹಿಗಳಾದ ಸನೀತಾ ಗುಂಡಪ್ಪ ಮತ್ತು ಅಂಬಿಕಾ ಸಂಜುಕುಮಾರ ಮಡಿವಾಳರು ಬಸವಗುರುವಿನ ಪೂಜೆ ನೆರವೇರಿಸಿದರು.

ಈ ಸುದ್ದಿ ಓದಿದ್ದೀರಾ? ʼಈ ದಿನʼ ವಿಶೇಷ | ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ…

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಗ್ರಾಮಪ್ಪ ಬಿರಾದಾರ ಗುರುನಾಥ ಬಿರಾದಾರ, ಭೀಮಾಶಂಕರ, ದಶಪ್ಪ, ಶ್ರೀಕಾಂತ ಸ್ವಾಮಿ, ಡಾ. ವೈಜಿನಾಥ ಬಿರಾದಾರ, ಸಂಜೀವಕುಮಾರ ಅತಿವಾಳೆ, ಮಲ್ಲಿಕಾರ್ಜುನ, ಯೋಗೇಂದ್ರ ಯದಲಾಪುರೆ, ಮೀನಾಕ್ಷಿ ಪಾಟೀಲ, ಲಕ್ಷಿö್ಮ ಬಿರಾದಾರ, ಲಕ್ಷಿö್ಮಬಾಯಿ ಮಾಳಗೆ, ಮಾಲಾಶ್ರೀ, ಭಾರತಿ ಪಾಟೀಲ, ಸವಿತಾ ಗಂಧಿಗುಡೆ, ಮಹಾನಂದಾ ಸ್ವಾಮಿ, ಕಸ್ತೂರಿಬಾಯಿ ಬಿರಾದಾರ, ಮಹಾದೇವಿ ಬಿರಾದಾರ, ಮುಂತಾದವರು ಭಾಗವಹಿಸಿದರು. ವಚನಶ್ರೀ ಚನ್ನಬಸಪ್ಪ ನೌಬಾದೆ ಮತ್ತು ಚನ್ನಬಸಪ್ಪ ಬಿಕ್ಲೆ ವಚನ ಸಂಗೀತ ನಡೆಸಿಕೊಟ್ಟರು. ಸಂಗ್ರಾಮ ಎಂಗಳೆ ಸ್ವಾಗತಿಸಿದರು, ಉಮಾಕಾಂತ ಮೀಸೆ ನಿರೂಪಿಸಿದರು, ಪ್ರೇಮಾ ಮುಚಳಂಬೆ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವರದಕ್ಷಿಣೆ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು!

ವರದಕ್ಷಿಣೆ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ...

ಕೊಡಗಿನಲ್ಲಿ ‘SIR’ ಪಬ್ಲಿಕ್ ಹಿಯರಿಂಗ್: ‘ಮತದಾನದ ಹಕ್ಕು ಕಸಿಯುವುದು ಅಷ್ಟು ಸುಲಭವಲ್ಲ’ -ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳು,...

ದಿಂಡವಾರ ಬಳಿ ಭೂಕಂಪ; ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ: KSNDMC ಅಧಿಕಾರಿಗಳು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ...

ಔರಾದ್ : ನಕಲಿ ವೈದ್ಯಕೀಯ ವೃತ್ತಿ: ಕ್ಲಿನಿಕ್ ಸೀಜ್

ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೆ ನಕಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪದ...