ಆನೆ ‘ಸುವರ್ಣ’ಗೆ ಸಿಸೇರಿಯನ್‌ ಹೆರಿಗೆ; ಗರ್ಭದಲ್ಲೇ ಮೃತಪಟ್ಟಿದ್ದ ಮರಿ

Date:

ಬನ್ನೇರುಘಟ್ಟ ಜೈವಿಕ ಉದ್ಯಾನದ ಸುವರ್ಣ ಎಂಬ ಹೆಸರಿನ ಹೆಣ್ಣಾನೆಗೆ ಗುರುವಾರ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ, ಗರ್ಭದಲ್ಲೇ ಮರಿ ಮೃತಪಟ್ಟಿದೆ.

ಆನೆ ಸುವರ್ಣಗೆ ಇದು ಹತ್ತನೇ ಮರಿಯಾಗಿತ್ತು. ಆದರೆ, ಮರಿಯು ತಾಯಿಯ ಗರ್ಭದಲ್ಲೇ ಮೃತಪಟ್ಟಿತ್ತು. ಇದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮರಿಯನ್ನು ಹೊರತೆಗೆದಿದ್ದಾರೆ.

“49 ವರ್ಷದ ಆನೆ ಸುವರ್ಣ, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಒಂಬತ್ತು ಮರಿಗಳಿಗೆ ಜನ್ಮ ನೀಡಿದ್ದು, ಅವು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿಯೇ ಬೆಳೆದಿವೆ. ಸಾಮಾನ್ಯವಾಗಿ 23-24 ತಿಂಗಳಿಗೆ ಆನೆ ಮರಿ ಹಾಕುತ್ತದೆ. ಪ್ರಸ್ತುತ ಸುವರ್ಣ ಗರ್ಭ ಧರಿಸಿ ಅಂದಾಜು 23 ತಿಂಗಳಿಗೂ ಹೆಚ್ಚು ಅವಧಿಯಾಗಿತ್ತು. ಕಳೆದ ಎರಡು ದಿನಗಳಿಂದ ಆನೆ ಪ್ರಸವ ವೇದನೆ ಅನುಭವಿಸುತ್ತಿತ್ತು. ಮರಿಯ ಕಾಲುಗಳು ಹಿಮ್ಮುಖವಾಗಿದ್ದರಿಂದ ಹೆರಿಗೆಗೆ ತೊಂದರೆಯಾಗಿತ್ತು” ಎಂದು ವೈದ್ಯರು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಡಾ.ಕೃಷ್ಣಮೂರ್ತಿ, ಡಾ.ಹೊನ್ನಪ್ಪ, ಡಾ.ವಸಂತ್‌ಶೆಟ್ಟಿ, ಡಾ.ಉಮಾಶಂಕರ್‌, ಡಾ.ವಿಜಯಕುಮಾರ್‌, ಡಾ.ಮಂಜುನಾಥ್‌ ಅವರ ವೈದ್ಯರ ತಂಡವು ಚರ್ಚೆ ನಡೆಸಿ, ಪ್ರಸವ ವೇದನೆ ಅನುಭವಿಸುತ್ತಿದ್ದ ಆನೆಯನ್ನು ಅರವಳಿಕೆಗೆ ಒಳಪಡಿಸಿ ಶಸ್ತ್ರಚಿಕಿತ್ಸೆ ಮೂಲಕ ಮರಿಯನ್ನು ಹೊರ ತೆಗೆದಿದ್ದಾರೆ. ತಾಯಿ ಆನೆಯನ್ನು ವೈದ್ಯರು ಆರೈಕೆ ಮಾಡುತ್ತಿದ್ದಾರೆ” ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್‌ ಪನ್ವಾರ್‌ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೇಲೂರಿನ ಚನ್ನಕೇಶವ ದೇಗುಲದ ಗೋಪುರಕ್ಕೆ ಬಡಿದ ಸಿಡಿಲು; ಪುರಾತತ್ವ ಇಲಾಖೆಗೆ ಮಾಹಿತಿ

“ಸುವರ್ಣ ಆನೆ ಅಪರೂಪದ ಆನೆಯಾಗಿದೆ. ಸಾಮಾನ್ಯವಾಗಿ ಆನೆಗಳು 3-4 ಮರಿಗಳನ್ನು ಹಾಕುತ್ತವೆ. ಆದರೆ ಸುವರ್ಣ 10 ಮರಿಗಳಿಗೆ ಜನ್ಮ ನೀಡಿರುವುದು ದಾಖಲೆಯಾಗಿದೆ” ಎಂದು ಉದ್ಯಾನದ ವೈದ್ಯ ಡಾ.ಉಮಾಶಂಕರ್‌ ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುವರ್ಣ, ವನಿತಾ, ಶಿವ, ಗೋಕುಲ, ವನಶ್ರೀ, ಗಜೇಂದ್ರ, ಶ್ರೀರಾಮ, ಭವಾನಿ, ಸುರೇಶ, ಸುಧಾ ಎಂಬ ಆನೆಗಳಿಗೆ ಜನ್ಮ ನೀಡಿದೆ. ಒಂದು ಆನೆ ಮೈಸೂರು ಮೃಗಾಲಯದಲ್ಲಿದೆ. ವನಿತಾ ಮತ್ತು ಗೋಕುಲ ಮೃತಪಟ್ಟಿವೆ. ಉಳಿದ ಆರು ಮರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿವೆ ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಹುಬ್ಬಳ್ಳಿ | ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ

ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನೊಳಗೆ ನುಗ್ಗಿ ವಿದ್ಯಾರ್ಥಿನಿಯೋರ್ವಳಿಗೆ ಯುವಕನೋರ್ವ ಮನಬಂದಂತೆ ಚಾಕುವಿನಿಂದ...

ದಾವಣಗೆರೆ | ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್‌; ಜಿಲ್ಲಾಧಿಕಾರಿಯಿಂದ ಸನ್ಮಾನ

ದ್ವಿತೀಯ ಪಿಯುಸಿ ವರೆಗೆ ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಕೃಷಿಯೊಂದಿಗೆ ಯುಪಿಎಸ್‌ಸಿ...