ಚಾಮರಾಜನಗರ | 15 ವರ್ಷಗಳಲ್ಲಿ 3,289 ಅರಣ್ಯ ಅಪರಾಧ; ಎಂಎಂ ಹಿಲ್ಸ್‌ನಲ್ಲೇ ಗರಿಷ್ಠ!

Date:

ಚಾಮರಾಜನಗರ ಅರಣ್ಯ ಪ್ರದೇಶದಲ್ಲಿ 2010-11ರಿಂದ ಆಗಸ್ಟ್ 19, 2026ರವರೆಗೆ ಒಟ್ಟು 3,289 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ. ಇದರಲ್ಲಿ 777 ವನ್ಯಜೀವಿ ಅಪರಾಧ ವರದಿ (WLOR) ಪ್ರಕರಣಗಳು, 370 ಬೇಟೆ ಪ್ರಕರಣಗಳು ಮತ್ತು 66 ಬಂದೂಕು ಸಂಬಂಧಿತ ಪ್ರಕರಣಗಳು ಸೇರಿವೆ.

- Advertisement -

ವಿಭಾಗವಾರು ವಿವರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...
  • ಎಂಎಂ ಹಿಲ್ಸ್ ವನ್ಯಜೀವಿ ವಿಭಾಗದಲ್ಲಿ ಅತಿ ಹೆಚ್ಚು 2,256 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 296 WLOR, 166 ಬೇಟೆ ಮತ್ತು 32 ಬಂದೂಕು ಪ್ರಕರಣಗಳು ಇವೆ.
  • ಬಿಆರ್‌ಟಿ ಹುಲಿ ಮೀಸಲು ಪ್ರದೇಶದಲ್ಲಿ 793 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 280 WLOR, 107 ಬೇಟೆ ಮತ್ತು 17 ಬಂದೂಕು ಪ್ರಕರಣಗಳು ಸೇರಿವೆ.
  • ಕಾವೇರಿ ವನ್ಯಜೀವಿ ವಿಭಾಗದಲ್ಲಿ 240 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 201 WLOR, 97 ಬೇಟೆ ಮತ್ತು 17 ಬಂದೂಕು ಪ್ರಕರಣಗಳು ಇವೆ.

ಕೊಳ್ಳೇಗಾಲ ಬಫರ್ ವಲಯದಲ್ಲಿ ಅತಿ ಹೆಚ್ಚು 979 ಪ್ರಕರಣಗಳು ದಾಖಲಾಗಿವೆ. ನಂತರ ಹನೂರು ಬಫರ್ ವಲಯದಲ್ಲಿ 657 ಮತ್ತು ಚಾಮರಾಜನಗರ ವ್ಯಾಪ್ತಿಯಲ್ಲಿ 352 ಪ್ರಕರಣಗಳು ದಾಖಲಾಗಿವೆ.

ಬೇಟೆ ಪ್ರಕರಣಗಳು
ಕೌಡಹಳ್ಳಿ ವನ್ಯಜೀವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 47 ಬೇಟೆ ಪ್ರಕರಣಗಳು ದಾಖಲಾಗಿವೆ. ನಂತರ ಹನೂರು ಬಫರ್ ವ್ಯಾಪ್ತಿಯಲ್ಲಿ 45 ಮತ್ತು ಚಾಮರಾಜ ಪ್ರಾದೇಶಿಕ ವ್ಯಾಪ್ತಿಯಲ್ಲಿ 39 ಪ್ರಕರಣಗಳು ದಾಖಲಾಗಿವೆ.

ಇತ್ತೀಚಿನ ಶೂಟೌಟ್ ಆಗಸ್ಟ್ 15ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವ್ಯಾಪ್ತಿಯಲ್ಲಿ ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರು ಆಂಟನಿ ಸ್ವಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಸವರಿಯಪ್ಪನ್. ನಾಲ್ಕನೇ ವ್ಯಕ್ತಿ ಮಹಿಮದಾಸ್ ಪಲಾಯನಗೊಂಡಿದ್ದಾರೆ.

ಅರಣ್ಯ ಇಲಾಖೆ ಕಳ್ಳಬೇಟೆಗಾರರು ಬಂದೂಕು ಹಿಡಿದು ದಾಳಿ ಮಾಡಲು ಯತ್ನಿಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಹೇಳಿದೆ. ಸ್ಥಳದಿಂದ ಬಂದೂಕುಗಳು ಮತ್ತು ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ. ಮೃತರ ಕುಟುಂಬಸ್ಥರು ಘಟನೆಯನ್ನು ಪ್ರಶ್ನಿಸಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ.

ಈ ವೃತ್ತದ ಅರಣ್ಯ ಪ್ರದೇಶಗಳು ವನ್ಯಜೀವಿಗಳಲ್ಲಿ ಕುರುಚಲು ಕಾಡುಗಳು ಹೆಚ್ಚು. ಬಿಆರ್‌ಟಿ ಮತ್ತು ಎಂಎಂ ಹಿಲ್ಸ್‌ನ ಎತ್ತರದ ಪ್ರದೇಶಗಳಲ್ಲಿ ತೇವಾಂಶವುಳ್ಳ ಮತ್ತು ನಿತ್ಯಹರಿದ್ವರ್ಣ ಕಾಡುಗಳು ಕಂಡುಬರುತ್ತವೆ. ಈ ವಲಯವೂ ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು ಸದ್ಯ ಅರಣ್ಯ ಇಲಾಖೆ ಒದಗಿಸಿರುವ ಅಂಕಿ ಅಂಶಗಳು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಕೂಲಂಕುಷ ಪರಿಶೀಲನೆಯ ಅಗತ್ಯತೆ ಸೃಷ್ಟಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಭಾರತಕ್ಕಾಗಿ ಯುವಶಕ್ತಿ ಧ್ಯೇಯದಡಿ ಎನ್ಎಸ್ಎಸ್ ಶಿಬಿರ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಕೆರೆ ತುಂಬಿಸಲು ಅಜಿತ್ ಪವಾರ್ ಅವರನ್ನು ಕರೆತರಬೇಕೇ? – ವಿವಾದಕ್ಕೀಡಾದ ಆನಂದರಾಜ್ ಅಂಬೇಡ್ಕರ್ ಹೇಳಿಕೆ

ಮಹಾರಾಷ್ಟ್ರದ ಬರಗಾಲ ಮತ್ತು ಜಲ ಸಂರಕ್ಷಣಾ ನೀತಿಗಳ ಕುರಿತು ಟೀಕಿಸುವ ಭರದಲ್ಲಿ,...

ಬೀದರ್‌ | ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆಗೆ ನಿವೇಶನ, ಮನೆ, ಜಮೀನು ಮಂಜೂರಾತಿಗೆ ಒತ್ತಾಯ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ...

ಮುಂಡಗೋಡ | ನೀರು ಕೇಳುವ ನೆಪದಲ್ಲಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ

ಅಂಗಡಿಗೆ ಬಂದು ವಿಮಲ್ ಹಾಗೂ ಕುಡಿಯುವ ನೀರು ಕೇಳುವ ನೆಪದಲ್ಲಿ ಮಹಿಳೆಯ...