ಜೆನ್ ಝೀಗಳ‌ ಕ್ರಷ್ ಆದ್ರಾ ರಾಹುಲ್ ಗಾಂಧಿ? – ಪುಣೆ ಸಂವಾದದಲ್ಲಿ ಯುವತಿಯರ ಲವ್‌ ಮೆಸೇಜ್!

Date:

ರಾಜಕೀಯ ಸಮಾವೇಶಗಳು, ಗಂಭೀರ ಭಾಷಣಗಳು ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳು ಸಾಮಾನ್ಯವಾಗಿ ಆಡಳಿತ ಮತ್ತು ನೀತಿ-ನಿಯಮಗಳ ಚರ್ಚೆಗೆ ವೇದಿಕೆಯಾಗುತ್ತವೆ. ಆದರೆ ಪುಣೆಯಲ್ಲಿ ಆಯೋಜಿಸಲಾಗಿದ್ದ ‘ಛಾತ್ರೋಂ ಕಿ ಗೂಂಜ್’ (ಛಾತ್ರಾ ಸಂವಾದ) ಯುವಜನ ಸಂಪರ್ಕ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ ಮಾತ್ರ ಸಂಪೂರ್ಣ ಭಿನ್ನವಾಗಿತ್ತು. ಯುವ ಪೀಳಿಗೆಯ, ಅದರಲ್ಲೂ ಮುಖ್ಯವಾಗಿ ಜೆನ್ ಝಿ (Gen Z) ಯುವತಿಯರ ಪಾಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ನಾಯಕನಷ್ಟೇ ಅಲ್ಲ, ಅವರ ನೆಚ್ಚಿನ ‘ಕ್ರಷ್’ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ.

- Advertisement -

ಪುಣೆಯ ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು ಮೂರು ಸಾವಿರ ವಿದ್ಯಾರ್ಥಿನಿಯರು, ಯುವತಿಯರು ರಾಹುಲ್ ಗಾಂಧಿ ಅವರ ಗಮನ ಸೆಳೆಯಲು ವಿಶಿಷ್ಟ ಹಾದಿ ತುಳಿದರು. ಹಲವು ಯುವತಿಯರು ತಮ್ಮ ಮೊಬೈಲ್ ಸ್ಕ್ರೀನ್‌ಗಳಲ್ಲಿ “Rahul Gandhi, I Love You” ಎಂದು ದೊಡ್ಡ ಅಕ್ಷರಗಳಲ್ಲಿ ಬರೆದು ತೋರಿಸಿದರೆ, ಇನ್ನು ಕೆಲವರು ಕೈಯಲ್ಲಿ ಸ್ವಹಸ್ತದಿಂದ ಬರೆದ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಇದನ್ನೂ ಓದಿ: ‘ಮಹಿಳೆಯರು ಭಾರತದ ಅತಿದೊಡ್ಡ ಆಸ್ತಿ, ಪುರುಷರೊಂದಿಗಿನ ಸಂಬಂಧದಿಂದಷ್ಟೇ ಗುರುತಿಸಿಕೊಳ್ಳಬಾರದು’: ರಾಹುಲ್ ಗಾಂಧಿ

ಅವುಗಳಲ್ಲಿ ಅತ್ಯಂತ ಗಮನಸೆಳೆದದ್ದು— “ನಮ್ಮ ಅಮ್ಮ ನನಗೆ ಒಳ್ಳೆ ಹುಡುಗನನ್ನು ಇಷ್ಟಪಡು ಎಂದು ಹೇಳಿದ್ದರು, ಅದಕ್ಕೆ ನಾನು ರಾಹುಲ್ ಗಾಂಧಿಯವರನ್ನು ಇಷ್ಟಪಟ್ಟೆ” ಎಂಬ ಬರಹವಿದ್ದ ಮೊಬೈಲ್ ಪೋಸ್ಟರ್. ಇದು ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದಿದ್ದಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ವೈರಲ್ ಆಗಿದೆ.

rahul 26
“ನಮ್ಮ ಅಮ್ಮ ನನಗೆ ಒಳ್ಳೆ ಹುಡುಗನನ್ನು ಇಷ್ಟಪಡು ಎಂದು ಹೇಳಿದ್ದರು, ಅದಕ್ಕೆ ನಾನು ರಾಹುಲ್ ಗಾಂಧಿಯವರನ್ನು ಇಷ್ಟಪಟ್ಟೆ” ಎಂಬ ಮೊಬೈಲ್‌ನಲ್ಲೇ ತೋರಿಸಿದ ಯುವತಿ

ನಿನ್ನೆಯಿಂದ ಇಂದಿನವರೆಗೆ: ತಲೆಮಾರುಗಳ ಕ್ರಷ್

ರಾಹುಲ್ ಗಾಂಧಿ ಅವರಿಗೆ ಯುವತಿಯರು ಮತ್ತು ಮಹಿಳೆಯರಿಂದ ಈ ರೀತಿಯ ಪ್ರೀತಿ-ಆಕರ್ಷಣೆ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಗಳಿಂದಲೂ (2004ರಿಂದ) ಅವರ ‘ಬ್ಯಾಚುಲರ್’ ಇಮೇಜ್, ಸಿಂಪಲ್ ಲುಕ್ ಹಾಗೂ ಡೈಮಂಡ್ ಸ್ಮೈಲ್ ದೇಶದ ಯುವತಿಯರಲ್ಲಿ ಭಾರೀ ಕ್ರೇಜ್ ಸೃಷ್ಟಿಸಿತ್ತು.

rahul1
ಸಂವಾದದಲ್ಲಿ ಹಲವು ಮಂದಿ ಈ ರೀತಿ “ಐ ಲವ್ ಯೂ ರಾಹುಲ್” ಎಂದು ಮೊಬೈಲ್‌ನಲ್ಲಿ ಪೋಸ್ಟರ್‌ಗಳನ್ನು ತೋರಿಸಿದ್ದಾರೆ.

2000ರ ದಶಕದಲ್ಲಿ ಮಿಲೇನಿಯಲ್ಸ್‌ಗೆ (Millennials) ಮೋಡಿ ಮಾಡಿದ್ದ ರಾಹುಲ್, ಇಂದು ‘ಭಾರತ್ ಜೋಡೋ ಯಾತ್ರೆ’ಯ ನಂತರದ ತಮ್ಮ ಫಿಟ್‌ನೆಸ್, ಸಾಲ್ಟ್-ಅಂಡ್-ಪೆಪ್ಪರ್ ಲುಕ್ ಹಾಗೂ ಕ್ಯಾಶುಯಲ್ ಶೈಲಿಯಿಂದಾಗಿ ಇಂದಿನ ಜೆನ್ ಝಿ (Gen Z) ಪೀಳಿಗೆಯನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಜನರೊಂದಿಗೆ ಗಂಭೀರ ವಿಚಾರಗಳ ಜೊತೆಗೆ ವೈಯಕ್ತಿಕ ಸಿದ್ಧಾಂತ, ಲೈಫ್‌ಸ್ಟೈಲ್ ಹಾಗೂ ಕ್ರೀಡೆಯ ಬಗ್ಗೆ ಮುಕ್ತವಾಗಿ ಮಾತನಾಡುವ ಅವರ ಶೈಲಿ ಯುವತಿಯರಿಗೆ ಹೆಚ್ಚು ಹತ್ತಿರವೆನಿಸುತ್ತಿದೆ.

ಹಿಂದೆ ಕಾಲೇಜು ಯುವತಿಯರ ಜೊತೆಗೆ ಸಂವಾದ ನಡೆಸುವಾಗ “ನನ್ನನ್ನು ಸರ್‌ ಎಂದು ಕರೆಯಬೇಡಿ, ರಾಹುಲ್‌” ಎನ್ನಿ ಎಂದು ಹೇಳಿದ್ದರು. ನೀಟ್‌ ಪರೀಕ್ಷಾ ಅಕ್ರಮದ ನಂತರ ಅವರು ವಿದ್ಯಾರ್ಥಿ/ಯುವಜನರೊಂದಿಗೆ ನೇರವಾಗಿ ಸಂವಾದಿಸುತ್ತಿದ್ದಾರೆ. ಸಿಜೆಪಿ ಪ್ರತಿಭಟನೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿದ್ದರೆ ಅವರ ಧ್ವನಿಯಾಗಿ ಸಂಸತ್ತಿನಲ್ಲಿ ರಾಹುಲ್‌ ಇದ್ದರು. ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ರಾಹುಲ್‌ ಜೊತೆಗೆ ವಿಪಕ್ಷಗಳು ಒಂದಾಗಿ ಪ್ರತಿಭಟಿಸಿದ್ದವು. ಸಂಸತ್ತಿನ ಹೊರಗೆ ಮತ್ತು ಒಳಗೆ ಒತ್ತಡ ಹೆಚ್ಚಾದ ಪರಿಣಾಮವಾಗಿ ಪ್ರಧಾನ್‌ ರಾಜೀನಾಮೆ ನೀಡಲೇ ಬೇಕಾಯ್ತು. ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮವನ್ನು ದೇಶಾದ್ಯಂತ ಮುಂದುವರಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ದೇಶದ ಇನ್ನೂರು ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬಹುಷಃ ಬೆಂಗಳೂರಿನಲ್ಲೂ ನಡೆಯಬಹುದು.

ರಾಜಕೀಯ ವಿಶ್ಲೇಷಕರ ಪ್ರಕಾರ, ಇಂತಹ ಯೂತ್ ಕನೆಕ್ಟ್ ಕಾರ್ಯಕ್ರಮಗಳಲ್ಲಿ ವ್ಯಕ್ತವಾಗುವ ಈ ತರಹದ ಭಾವನೆಗಳು ನಾಯಕರೊಬ್ಬರ ಸಾರ್ವಜನಿಕ ಇಮೇಜ್‌ ಅನ್ನು ಮತ್ತಷ್ಟು ಜನಪ್ರಿಯ ಹಾಗೂ ಆಕರ್ಷಕಗೊಳಿಸಲು ನೆರವಾಗುತ್ತವೆ. ಪುಣೆಯ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮವು ರಾಹುಲ್ ಗಾಂಧಿ ಅವರ ರಾಜಕೀಯ ಪ್ರಭಾವದ ಜೊತೆಗೆ ಅವರ ಗ್ಲಾಮರ್ ಮತ್ತು ಯೂತ್ ಅಪೀಲ್ ಇಂದಿಗೂ ಕಡಿಮೆಯಾಗಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಪ್ರಧಾನಿ ಮೋದಿ ಅವರು ಕಳೆದ ಸಂಸತ್‌ ಅಧಿವೇಶನ ಆರಂಭದ ದಿನ ನೀಡಿದ ಸಂದೇಶದಲ್ಲಿ ರಾಹುಲ್‌ ಅವರನ್ನು “56 ವರ್ಷದ ಯುವಜನರ ನಾಯಕ” ಎಂದು ಗೇಲಿ ಮಾಡಿದ್ದರು. ಆದರೆ, ರಾಹುಲ್‌ ಈ ದೇಶದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಯುವತಿಯರ ಕ್ರಷ್‌ ಆಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೋದಿ ಹೇಳಿದಂತೆ ಯುವಜನರ ನಾಯಕರಾಗಿ ರಾಹುಲ್‌ ಬದಲಾಗಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...

ಬೀದರ್‌ | ಬೈಕ್ ಅಪಘಾತ: ಇಬ್ಬರು ಯುವಕರು ಸಾವು

ನೆರೆಯ ತೆಲಂಗಾಣದ ಸಂಗಾರೆಡ್ಡಿ ಸಮೀಪ ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಆಯಿಷಾ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದಲ್ಲಿ ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ

ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಎನ್ ಎಸ್ ಎಸ್ ದಿನಾಚರಣೆ...