ಚಾಮರಾಜನಗರ | ನಿಫಾ ವೈರಸ್ ಭೀತಿ; ಕೇರಳದಿಂದ ಬರುವವರ ತಪಾಸಣೆಗೆ ಆಗ್ರಹ

Date:

ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಕೇರಳದಿಂದ ಬರುವ ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಿ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಆಗ್ರಹಿಸಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಆರೋಗ್ಯಾಧಿಕಾರಿ ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಗುಂಡ್ಲುಪೇಟೆ ತಾಲೂಕು ರಾಜ್ಯದ ಗಡಿ ಭಾಗವಾಗಿದ್ದು, ಕೇರಳದಲ್ಲಿ ನಿಫಾ ವೈರಸ್‌ ಹೆಚ್ಚಳದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹಾಗಾಗಿ ಇದರ ಬಗ್ಗೆ ಕ್ರಮ ವಹಿಸಬೇಕು. ಗಡಿಭಾಗದ ಮೂಲೆಹೊಳೆ ಚೆಕ್ ಪೋಸ್ಟ್ ಹಾಗೂ ಕೆಕ್ಕನಹಳ್ಳ ಚೆಕ್ ಪೋಸ್ಟ್‌ನಲ್ಲಿ ನೆರೆ ರಾಜ್ಯದವರು ತಮ್ಮ ರಾಜ್ಯಕ್ಕೆ ಪ್ರವೇಶಿಸುವ ವೇಳೆ ತಪಾಸಣೆ ಮಾಡಿ ಬಳಿಕ ಪ್ರವೇಶಕ್ಕೆ ಅನುಮತಿಸಬೇಕು” ಎಂದು ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಾಲೂಕು ಅಧ್ಯಕ್ಷ ಎ ಅಬ್ದುಲ್ ಮಾಲಿಕ್ ಮಾತನಾಡಿ, “ಗಡಿಭಾಗದಲ್ಲಿ ಬರುವ ಎಲ್ಲ ವಾಹನ ಸವಾರರ ಬಗ್ಗೆ ಕಟ್ಟೆಚ್ಚರ ವಹಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಕೆ: ಕೇಂದ್ರ ಸಚಿವ ಖೂಬಾ

ಈ ವೇಳೆ ತಾಲೂಕು ಗೌರವಾಧ್ಯಕ್ಷ ವೆಂಕಟೇಶ್ ಗೌಡ, ತಾ. ಕಾರ್ಯಾಧ್ಯಕ್ಷ ಈಗಲ್ ಸ್ವಾಮಿ, ಟೌನ್ ಉಪಾಧ್ಯಕ್ಷ ಸಾದಿಕ್ ಪಾಷ, ಟೌನ್ ಗೌರವಾಧ್ಯಕ್ಷ ಶಕೀಲ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಎಚ್ ರಾಜು, ಟೌನ್ ಸಂಚಾಲಕ ಮಿಮಿಕ್ರಿ ರಾಜು, ಸುರೇಶ್, ಡ್ಯಾನ್ಸರ್ ಪವನ್, ಗಣೇಶ್ ಕೂತನೂರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ತಾಯಿ ರಕ್ಷಿಸಲು ಹೋದ ಮಕ್ಕಳು ಸೇರಿ ಮೂವರು ನೀರುಪಾಲು

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿಯನ್ನು ರಕ್ಷಿಸಲು ಹೋದ ಮಕ್ಕಳು ಸೇರಿದಂತೆ ಒಂದೇ...

ಚಾಮರಾಜನಗರ | ಕಾಲೇಜಿಗೆ ತೆರಳಿ ಮತ ಕೇಳಿದ ಬಿಜೆಪಿ ಅಭ್ಯರ್ಥಿ : ಕ್ರಮಕ್ಕೆ ಆಗ್ರಹ

ಬಿರು ಬಿಸಿಲಿನ ನಡುವೆ ಸದ್ಯ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿದೆ. ರಾಜಕೀಯ...

ಚಾಮರಾಜನಗರ | ಕಾರಿನ ಮೇಲೆ ಕಬ್ಬಿನ ಲಾರಿ ಪಲ್ಟಿ; ಮೂವರ ದುರ್ಮರಣ

ಕಾರಿನ ಮೇಲೆ ಕಬ್ಬಿನ ಲಾರಿ ಉರುಳಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ...

ಚಾಮರಾಜನಗರ | ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು; ಅಂದಾಜು 50 ಎಕರೆ ಪ್ರದೇಶಕ್ಕೆ ಬೆಂಕಿ

ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೋಮವಾರ ಕಾಡ್ಗಿಚ್ಚು ಉಂಟಾಗಿದ್ದು,...