ಚಾಮರಾಜನಗರ | ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು: ಶಾಸಕ ಎಚ್.ಎಂ ಗಣೇಶ್ ಪ್ರಸಾದ್

Date:

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ‌ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎಂ ಗಣೇಶ್ ಪ್ರಸಾದ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆದರ್ಶ ಶಾಲೆಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮಾತೃಭಾಷೆ ಬಹಳ ಮುಖ್ಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ‌ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಕನ್ನಡದಲ್ಲೆ ‌ವ್ಯವಹಾರ ನಡೆಸುವ ಮೂಲಕ ಕನ್ನಡಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ” ಎಂದು ಹೇಳಿದರು.

“ಇತಿಹಾಸದಲ್ಲಿ ಕನ್ನಡಕ್ಕೆ ಅದರದೆ ಆದ ವಿಶೇಷವಾದ ಸ್ಥಾನ ಹೊಂದಿದ್ದು ಸಂಸ್ಕೃತ ಭಾಷೆಯಲ್ಲಿ ಹೆಚ್ಚು ಕನ್ನಡ ಪದಗಳನ್ನು ಬಳಸಿರುವುದನ್ನು ನೋಡಿದರೆ ಕನ್ನಡ ಭಾಷೆಯ ಮಹತ್ವ ತಿಳಿಯುತ್ತದೆ.ಕರ್ನಾಟಕದಲ್ಲಿ ಇರುವ ಕವಿಗಳು ದೇಶದಲ್ಲಿ ಎಲ್ಲೂ ಇಲ್ಲಾ, ಕುವೆಂಪು. ದ.ರಾ ಬೇಂದ್ರೆ ಸೇರಿದಂತೆ ಅನೇಕ ರಾಷ್ಟ್ರಕವಿಗಳಿಗೆ ಜನ್ಮ ನೀಡಿದೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕನ್ನಡದಲ್ಲಿ ರಚಿಸಿರುವ ಅನೇಕ ಕವನಗಳು ಬಹಳ ಅರ್ಥಪೂರ್ಣವಾಗಿವೆ. ಕುವೆಂಪು ಅವರು ರಚಿಸಿರುವ ಓ ನನ್ನ ಚೇತನ ಆಗು ನೀ ಅನಿಕೇತನ ಎನ್ನುವ ಕವನ ಬಹಳ ಅಚ್ಚುಕಟ್ಟಾಗಿ ರಚನೆಯಾಗಿದೆ ಇದಕ್ಕಾಗಿಯೇ ಕನ್ನಡದ ಕಂಪು ವಿಶ್ವದೆಲ್ಲೆಡೆ ಹರಿಯುತ್ತಿದೆ” ಎಂದರು.

“ಎರಡು ರಾಜ್ಯಗಳ ಗಡಿಯನ್ನು ಹೊಂದಿರುವ ಗುಂಡ್ಲುಪೇಟೆಗೆ ಪ್ರತಿದಿನ ನೂರಾರು ಮಂದಿ ವ್ಯಾಪಾರ ವಹಿವಾಟಿಗೆ ಪಟ್ಟಣಕ್ಕೆ ಬರುತ್ತಾರೆ. ಪಟ್ಟಣದಲ್ಲಿ ಹೊರ ರಾಜ್ಯದವರ ಜೊತೆ ಕನ್ನಡ ಭಾಷೆಯಲ್ಲೆ ವ್ಯವಹಾರ ನಡೆಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ” ಎಂದರು.

“ಕನ್ನಡ ಭಾಷೆ ಕಲಿಯಲು ಬಹಳ ಸರಳವಾಗಿರುವುದರಿಂದ ಹೊರ ರಾಜ್ಯಗಳಿಂದ ಕನ್ನಡೇತರರು ಬಹಳ ಬೇಗ ಕನ್ನಡವನ್ನು ಕಲಿತು ನಮ್ಮಲ್ಲಿ ‌ಒಂದಾಗುತಿದ್ದಾರೆ. ಅಮೇರಿಕ, ಆಸ್ಟ್ರೇಲಿಯಾ, ಮತ್ತು ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಕರ್ನಾಟಕದ ಜನತೆ ವಿದೇಶಗಳಲ್ಲಿ ‌ಕನ್ನಡದ ಸಂಘಟನೆಗಳು ಕನ್ನಡದ ಕಂಪನ್ನು ಹರಿಸಿದ್ದಾರೆ” ಎಂದು ಹೇಳಿದರು.

“ಅನೇಕ ಘಟಾನುಘಟಿ ನಾಯಕರು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಸರಕಾರಿ ಶಾಲೆಗಳಲ್ಲಿ ಉತ್ತಮವಾದ ಸೌಕರ್ಯವನ್ನು ಹೊಂದಿದ್ದು ಅತ್ತ್ಯುತ್ತಮ ಶಿಕ್ಷಕರನ್ನು ಇದ್ದು ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಒಳ್ಳೆಯ ಫಲಿತಾಂಶ ನೀಡಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಪ್ಪ ಮಾತನಾಡಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ರಾಮಲಿಂಗಯ್ಯ, ದೈಹಿಕ ಪರೀವಿಕ್ಷಕ ಮಲ್ಲನಾಯಕ, ಬಿ.ಆರ್.ಸಿ ಸರೋಜ, ಎಸ್ ಡಿ.ಎಂ.ಸಿ.ಅಧ್ಯಕ್ಷ. ಕುಮಾರ್, ಮೈಸೂರು ಭೂಮಾಪಕ‌ ಸಂಘದ ಅಧ್ಯಕ್ಷ ಜಯಪ್ಪ, ಬನ್ನಿತಾಳಪುರ ಗ್ರಾಮ‌ ಪಂಚಾಯತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಲಕ್ಷ್ಮಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ನೀಟ್ ಅವ್ಯವಹಾರ: ನ್ಯಾಯಾಂಗ ತನಿಕೆಗೆ ಡಿವಿಪಿ ಆಗ್ರಹ

ನೀಟ್‌ ಪರೀಕ್ಷೆಯಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು....

ದರ್ಶನ್ ಪ್ರಕರಣ | ವಿಶೇಷ ಪ್ರಾಸಿಕ್ಯೂಟ‌ರ್ ಆಗಿ ಪಿ ಪ್ರಸನ್ನ ಕುಮಾರ್‌ ನೇಮಕ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಆರೋಪಿಗಳು...