ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ 13ನೇ ರಾಜ್ಯಮಟ್ಟದ ಯುವಜನ ಸಮ್ಮೇಳನ ಮತ್ತು ವಿವಿಧ ವಿಚಾರ ಸಂಕಿರ್ಣಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೆಪ್ಟೆಂಬರ್ 26 ರಿಂದ 28, 2026 ರವರೆಗೆ ಯಶಸ್ವಿಯಾಗಿ ನಡೆಯುತ್ತಿವೆ.ಈ ಸಮ್ಮೇಳನದ ಭಾಗವಾಗಿ ಯುವಜನರು ಎದುರಿಸುತ್ತಿರುವ ಪ್ರಚಲಿತ ಸಮಸ್ಯೆಗಳು, ಉದ್ಯೋಗ, ಮತ್ತು ದೇಶದ ಸಾಮಾಜಿಕ ವಿದ್ಯಮಾನಗಳ ಕುರಿತು ಪ್ರಮುಖ ವಿಚಾರ ಸಂಕಿರ್ಣಗಳನ್ನು
ಆಯೋಜಿಸಲಾಗಿತ್ತು
ಈ ಸಮಾವೇಶದಲ್ಲಿ ಪ್ರಮುಖವಾಗಿ ದೇಶದ ಆರ್ಥಿಕತೆ ಮತ್ತು ಯುವಜನತೆ, ಕೋಮುವಾದ ಹಾಗೂ ಹುಸಿ ರಾಷ್ಟ್ರೀಯತೆಯ ಸವಾಲುಗಳು ಸೇರಿದಂತೆ ವಿವಿಧ ಪ್ರಸ್ತುತ ವಿಷಯಗಳ ಕುರಿತು ಗಂಭೀರ ಚರ್ಚೆಗಳು ನಡೆಯಿತು.
ಇದನ್ನು ಓದಿದ್ದೀರಾ..?ಕೋಲಾರ | ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಡಾ. ನಾಗರಾಜ್
ಈ ಸಮ್ಮೇಳನದಲ್ಲಿ ಖ್ಯಾತ ಬಹುಭಾಷಾ ಚಲನಚಿತ್ರ ನಟ ಹಾಗೂ ಚಿಂತಕ ಕಿಶೋರ್ ಕುಮಾರ್, ರಾಜ್ಯಸಭಾ ಸದಸ್ಯ ಹಾಗೂ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರಾದ ಕಾಂ. ಎ.ಎ. ರಹೀಮ್,ಮುನಿ ವೆಂಕಟಪ್ಪ, ರಾಜಶೇರ್,ಹರೀಶ್,ಇಮ್ರಾನ್,ಜಿ.ಕೃಷ್ಣಪ್ಪ,ವಾಲ್ಮೀಕಿ ಅಶ್ವತ್ಥಪ್ಪ,ದೇವಿಕುಂಟೆ ಶ್ರೀನಿವಾಸ್, ಸೇರಿದಂತೆ ಪ್ರಮುಖ ಪ್ರಗತಿಪರ ಚಿಂತಕರು ಮತ್ತು ಒಕ್ಕೂಟದ ಮುಖಂಡರು ಭಾಗವಹಿಸಿದ್ದಾರೆ.




