ನೂತನ ತಾಲ್ಲೂಕಿಗೆ ನ್ಯಾಯಾಲಯ ಅತಿ ಶೀಘ್ರದಲ್ಲೇ ಪ್ರಾರಂಭಿಸಲು 12 ಗ್ರಾ.ಪಂಗಳ ಜನರಿಗೆ ಅನುಕೂಲಕರವಾಗುವ ಸ್ಥಳದಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭ ಮಾಡುವುದಾಗಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲೆಯ ನ್ಯಾಯಾಂಗ ಆಡಳಿತತ್ಮಾಕ ಅಧಿಕಾರಿಗಳಾದ ಹಂಚಾಟೆ ಸಂಜೀವಕುಮಾರ್ ರವರು ಹೇಳಿದರು.
ಅವರು ಚೇಳೂರು ನೂತನ ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಪ್ರಾರಂಭಿಸಲು ವಕೀಲರ ಸಂಘ ಏರ್ಪಾಡಿಸಿದ್ದ ಸಭೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಚೇಳೂರಿನಲ್ಲಿ ಕೋರ್ಟ್ ಪ್ರಾರಂಭ ಮಾಡಲು ರಾಜ್ಯ ಉಚ್ಚನ್ಯಾಯಾಲಯದ ಆದೇಶವಾಗಿದೆ ಚೇಳೂರಿನ ನ್ಯಾಯಾಲಯ ಪ್ರಾರಂಭಿಸಿ ಒಂದು ವಾರದಲ್ಲಿ ಎರಡು ದಿನ ಕೋರ್ಟ್ ಕೇಸುಗಳು ನಡೆಯುತ್ತದೆ ಪುಲಗಲ್ ಕ್ರಾಸ್ ಹತ್ತಿರ ಚೇಳೂರು ತಾಲೂಕು ಕಛೇರಿಯ ಪಕ್ಕದಲ್ಲಿ ಜಮೀನು ನೀಡಿದರೆ ನ್ಯಾಯಾಧೀಶರ ವಸತಿ. ನ್ಯಾಯಾಲಯದ ಕಟ್ಟಡ ಕಟ್ಟಲು ಅನೂಕೂಲಕರ ಚೇಳೂರು ತಾ.ಕೇಂದ್ರ ಬಾಗೇಪಲ್ಲಿ ತಾ.ಗೆ 40 ಕೀಮೀ ದೂರದಲ್ಲಿದೆ ನ್ಯಾಯಾಲಯ ಸ್ಥಾಪಿಸಬೇಕಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ನ್ಯಾಯಾಲಯದ ಟಿ.ಪಿ.ರಾಮಲಿಂಗೇಗೌಡ. ಮಾತನಾಡಿ 40 ಕೀಮೀ ದೂರದಲ್ಲಿರುವ ಬಾಗೇಪಲ್ಲಿಗೆ ಸುಮಾರು ವರ್ಷಗಳಿಂದ ಜನರು ಓಡಾಡಿ ತೊಂದರೆ ಅನುಭವಿಸುತ್ತಿದ್ದಾರೆ ಜಿಲ್ಲೆಯ ಚೇಳೂರು ಬಾಗೇಪಲ್ಲಿ ತಾಲೂಕುಗಳ ಜನತೆ ಹೃದಯವಂತರು ಈ ತಾಲೂಕುಗಳ ಜನತೆ ಎಂದರೆ ನನಗೆ ತುಂಬಾ ಇಷ್ಟ ಎಂದಾಗ ಜನತೆಯಿಂದ ಚಪ್ಪಾಳೆ ಸುರಿಮಳೆ ಆಯಿತು.
ನಂತರ ನ್ಯಾಯಾಲಯಕ್ಕೆ ಬೇಕಾದ ಜಮೀನು ಪುಲಗಲ್ ಕ್ರಾಸ್ ಹತ್ತಿರ ಪರೀಲೀಸಿದರು. ಭಾನುವಾರ ಹಗಲು 11-30 ಗಂಟೆಗೆ ಬರುತ್ತಾರೆಂದು ಕಾದು ಕುಳಿತ ಅಧಿಕಾರಿಗಳು. ಸಾರ್ವಜನಿಕರಿಗೆ ನಿರಾಸೆ ತಂದಿತ್ತು ಸಂಜೆ 4-20 ಗಂಟೆಗೆ ಬಂದು ಸ್ಥಳ ಪರೀಶೀಲನೆ ಮಾಡಿ ಹೋದರು ಇದರಿಂದ ಜನರಿಗೆ ಬೇಸರವಾಯಿತು.
ಇದನ್ನು ಓದಿದ್ದೀರಾ..? ಕೋಲಾರ | ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಜವಾಬ್ದಾರಿ ನಮ್ಮದು: ಶಾಸಕ ಕೊತ್ತೂರು ಜಿ. ಮಂಜುನಾಥ್ ಭರವಸೆ
ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಉಮೇಶ್. ಕಾಂತರಾಜ್ ಸಿದ್ದಪ್ಪ. ಸಿ.ಎಸ್.ಜಿತೇಂದ್ರನಾಥ್. ಬಾಗೇಪಲ್ಲಿ ತಾ.ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ. ಭಾರತಿ. ತಹಸೀಲ್ದಾರ್ ಶ್ವೇತ. ಸರಕಲ್ ಇನ್‌ಸ್ಪೇಕ್ಟರ್ ಎಂ.ಶ್ರೀನಿವಾಸ್ ಬಾಗೇಪಲ್ಲಿ ತಾ. ವಕೀಲರಾದ ಜೆ.ಎನ್.ಮಂಜುನಾಥ್. ಎ.ಜಿ.ಸುಧಾಕರ್ ಚೇಳೂರು ತಾ. ವಕೀಲರಾದ ಜಲಿಪಿಗಾರಪಲ್ಲಿ ಟಿ.ಎನ್.ರವೀಂದ್ರರೆಡ್ಡಿ. ಸಿ.ವಿ.ನರೇಂದ್ರರೆಡ್ಡಿ. ಸಿ.ರಘು. ಜಿ.ವಿ.ಮಧುಕರ್. ಚಲಕಲನೇರ್ಪು ವಕೀಲರಾದ ಸಿ.ಎನ್.ಶ್ರೀನಾಥರೆಡ್ಡಿ. ಎ. ಸಿತೇಶ್‌ರೆಡ್ಡಿ. ಪಾತಪಾಳ್ಯ ರಾಮಾಂಜಿ. ಬಾಗೇಪಲ್ಲಿ. ಚೇಳೂರು. ತಾಲೂಕುಗಳ ವಕೀಲರು. ಚೇಳೂರು ತಾ ಅಭಿವೃದ್ದಿ ಹೋರಾಟ ಸಮಿತಿ. ಸದಸ್ಯರುಗಳು ರೈತ ಸಂಘ ಹಾಗೂ ಹಸಿರು ಸೇನೆ ಪಧಾಧಿಕಾರಿಗಳು. ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಜನತೆ ಹಾಜರಿದ್ದರು.
ಚೇಳೂರಿನಲ್ಲಿ ಶೀಘ್ರದಲ್ಲೇ ನ್ಯಾಯಾಲಯ ಪ್ರಾರಂಭ : ಸಂಜೀವಕುಮಾರ್
<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>
ಪೋಸ್ಟ್ ಹಂಚಿಕೊಳ್ಳಿ:




