ಚಿಕ್ಕಬಳ್ಳಾಪುರ | ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣ ಅತ್ಯಗತ್ಯವಾಗಿದೆ : ಗೋಪಾಲ್ ಗೌಡ

Date:

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 60 ಕ್ಕೂ ಹೆಚ್ಚು ಅಂಕ ಗಳಿಸಿದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಸ್‌ಸಿ–ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡುವ ‘ಸ್ಪಂದನ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ನಡೆಯಿತು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲ್ ಗೌಡ ಮಾತನಾಡಿ,ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣ ಅತ್ಯಗತ್ಯವಾಗಿದೆ ಸಮಪಾಲು–ಸಮಬಾಳು ತತ್ವದಡಿ ನಡೆಯುತ್ತಿರುವ ಈ ಕಾರ್ಯಕ್ರಮ ಮಾದರಿಯಾಗಿದೆ. ಶಿಕ್ಷಣ ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ ಎಲ್ಲರಿಗೂ ಸಮಾನವಾಗಿ ದೊರೆಯಬೇಕು.ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂದೀಪ್ ರೆಡ್ಡಿ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದರು.ವಿದ್ಯೆಯೇ ಮನುಷ್ಯನ ಬದುಕಿಗೆ ಬೆಳಕು.ಸಾಧಿಸುವ ಮನಸ್ಸಿದ್ದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧ್ಯ. ಶಿಕ್ಷಣವು ಭವಿಷ್ಯ ರೂಪಿಸುತ್ತದೆ.ಕೇವಲ ಪುಸ್ತಕ ಜ್ಞಾನವಲ್ಲ,ಸಮಾಜದ ಅರಿವು,ಪರಿಸರದ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ ರೆಡ್ಡಿ ಮಾತನಾಡಿ ಸಮಾಜ ಸೇವೆಯನ್ನು ಯಾವುದೇ ಪ್ರಚಾರ ಅಥವಾ ಲಾಭಕ್ಕಾಗಿ ಮಾಡುವುದಿಲ್ಲ, ಆತ್ಮತೃಪ್ತಿಗಾಗಿ ಮಾಡುತ್ತೇನೆ. ಕೆಲವರು ಯಾಕೆ ಎಸ್‌ಸಿ–ಎಸ್‌ಟಿ ಮಕ್ಕಳಿಗೇ ನೆರವು ನೀಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ನಾನು ಯಾವುದೇ ಜಾತಿ ಅಥವಾ ಧರ್ಮದ ಚೌಕಟ್ಟಿನಲ್ಲಿ ಕೆಲಸ ಮಾಡುವುದಿಲ್ಲ. ಇಂದು ಈ ಸಮುದಾಯದ ಮಕ್ಕಳಿಗೆ ನೆರವು ನೀಡಿದ್ದೇನೆ, ಇದೇ ರೀತಿ ಇತರ ಸಮುದಾಯಗಳಿಗೂ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದೇನೆ. ಎಲ್ಲ ಧರ್ಮಗಳ ಹಬ್ಬಗಳಲ್ಲಿ ಅವರೊಂದಿಗೆ ನಿಂತು ಆಚರಣೆ ನಡೆಸಿದ್ದೇನೆ ಹಾಗೂ ಕೈಲಾದ ಮಟ್ಟಿಗೆ ನೆರವು ನೀಡಿದ್ದೇನೆ ಎಂದು ಹೇಳಿದರು.ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿದಿನ ಅನ್ನದಾಸೋಹ ನಡೆಸಿರುವುದಾಗಿ ತಿಳಿಸಿದ ಅವರು,ನಮ್ಮ ಕುಟುಂಬ ಸಂಕಷ್ಟದಲ್ಲಿದ್ದ ಸಮಯದಲ್ಲಿ ಇದೇ ಸಮುದಾಯದವರು ಬೆಂಬಲವಾಗಿ ನಿಂತಿದ್ದರು. ಆ ಕೃತಜ್ಞತೆಯ ಭಾವದಿಂದ ಈ ಕುಟುಂಬದೊಂದಿಗೆ ಜೀವನಪರ್ಯಂತ ಇರುತ್ತೇನೆ ಎಂಬ ಸಂಕಲ್ಪ ಮಾಡಿಕೊಂಡಿದ್ದೇನೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮ ಇದೀಗ ಮೂರನೇ ವರ್ಷದ ಸಂಭ್ರಮದಲ್ಲಿದೆ ಎಂದರು.

ಇದನ್ನು ಓದಿದ್ದೀರಾ..? ಚಿಂತಾಮಣಿ |ಬೈಕ್ ಗೆ ಟ್ರಕ್ ಲಾರಿ ಡಿಕ್ಕಿ ಸ್ಥಳದಲ್ಲೇ ಬಟ್ಟೆ ವ್ಯಾಪಾರಿ ಮಹಿಳೆ ಸಾವು

ಜಾತಿ,ಧರ್ಮ ಬೇಧವಿಲ್ಲದೆ ಮಾನವೀಯತೆ ಮುಖ್ಯ ಎಂಬ ಸಂದೇಶ ನೀಡಿದ ಅವರು,ಯಾವುದೇ ಸಮುದಾಯದವರೇ ಆಗಿರಲಿ ಬಡವರಿಗೆ ನೆರವಾಗಬೇಕು.ಮತಕ್ಕಾಗಿ ಸೇವೆ ಮಾಡುವುದು ತಪ್ಪು, ಸೇವೆ ನಿಸ್ವಾರ್ಥವಾಗಿರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಸುಶ್ಮಾ ಶ್ರೀನಿವಾಸ್,ಅಣಕನೂರು ವೆಂಕಟೇಶಪ್ಪ,ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರೋಣಪ್ಪ, ಕಣಜೇನಹಳ್ಳಿ ಸುಹಾಸ್, ಗಂಗರೆಕಳುವೆ ಮೂರ್ತಿ, ಶ್ರೀರಾಮಪುರ ಶಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯಾ ಪ್ರಕರಣ: ಮಂಗಳೂರಿಗೆ ನೂತನ SIT ತಂಡ; ತನಿಖೆಗೆ ಸಿದ್ಧತೆ

ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್...

ಭಾರತ–ಜಪಾನ್ ತಂತ್ರಜ್ಞಾನ ಸಹಕಾರದಿಂದ ಹೊಸ ಉದ್ಯಮ ಅವಕಾಶ: ನವತಾ ಹಿರೋಷಿ

ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್...

ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ

ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಪಾಷಾ ಅವರ...