ಚಿಕ್ಕಮಗಳೂರು l ರೈತ ಸಂಘದ ಹೆಸರೇಳಿಕೊಂಡು ಉಚ್ಚಾಟನೆ ಮಾಡುವುದು ಸರಿಯಲ್ಲ; ರಾಜ್ಯ ರೈತ ಸಂಘ ಎಚ್ಚರಿಕೆ

Date:

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷರನ್ನು ಜಿಲ್ಲಾಸಮಿತಿ ಉಚ್ಚಾಟನೆ ಮಾಡಿರುವುದರ ವ್ಯಕ್ತಿಗಳ ವಿರುದ್ಧ ಚಿಕ್ಕಮಗಳೂರು ತಾಲೂಕಿನ ರೈತ ಸಂಘಟನೆಯಿಂದ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.

- Advertisement -

ತುಳಸೇಗೌಡ ಮತ್ತು ದಯಾಕರ್ ಎಂಬುವವರು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಲ್ಲ.ದಯಾಕರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತನಾಗಿದ್ದುಕೊಂಡು ಈಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರೀನ್ ಬ್ರಿಗೇಡ್ ಅಧ್ಯಕ್ಷ ಎಂದು ಹೇಳುತ್ತಾ ಹಲವಾರು ಬಾರಿ ಪತ್ರಿಕಾ ಹೇಳಿಕೆ ನೀಡಿರುವ ವ್ಯಕ್ತಿ. ತುಳಸೇಗೌಡ ಒಬ್ಬ ಯಾವ ಸಂಘಟನೆಯಲ್ಲೂ ನೆಲೆ ಇಲ್ಲದ ವ್ಯಕ್ತಿ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಮೂಲ ರೈತ ಸಂಘ ಎಂದು ಹೇಳಿಕೊಂಡು ಓಡಾಡುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಹಸಿರು ಶಾಲು ಹಾಕಿಕೊಂಡು ಸ್ವಹಿತಸಕ್ತಿಗೋಸ್ಕರ ರೈತ ಸಂಘದ ಹೆಸರೇಳಿಕೊಂಡು ಓಡಾಡುವ ವ್ಯಕ್ತಿಗಳು. 45 ವರ್ಷಗಳಿಂದ ಸಂಘಟನೆಯಲ್ಲೇ ಇದ್ದುಕೊಂಡು ಸೈದ್ಧಾಂತಿಕ ಹಾಗೂ ಜ್ಯಾತ್ಯಾತೀತ ವಿಚಾರಗಳಿಗೆ ಬದ್ದರಾಗಿ ರೈತಪರ ಚಳುವಳಿ ಹೋರಾಟಗಳಲ್ಲಿ ತೊಡಗಿಸಿಕೊಂಡು ಲಾಟಿ ಏಟು, ಜೈಲು ಶಿಕ್ಷೆಯೆಂದು ಎದೆಗುಂದದೆ ಗಟ್ಟಿಯಾಗಿ ಸಂಘಟನೆಯ ಜೊತೆ ಗುರುತಿಸಿಕೊಂಡು ಬರುತ್ತಿರುವ ಕಾರ್ಯಕರ್ತರ ಶ್ರಮ. ಯಾವುದೇ ಹೋರಾಟ, ಚಳುವಳಿ ಸಂಘಟನೆಯ ಹಿನ್ನೆಲೆಯಿಲ್ಲದ ಇಂತಹ ವ್ಯಕ್ತಿಗಳಿಗೆ ಏನು ಗೊತ್ತು ಎಂದು ರೈತ ಸಂಘಟನೆ ಮುಖಂಡ ಗುರುಶಾಂತಪ್ಪ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ರಾಜ್ಯ ರೈತ ಸಂಘದ ಆಂತರಿಕ ವಿಚಾರಗಳಿಗೆ ಮೂಗು ತೂರಿಸಲು ಇವರಾರು? ಸಂಬಂಧವಿಲ್ಲದ ಇವರಿಂದ ರೈತ ಸಂಘಟನೆ ಹೇಳಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ. ಸುನಿಲ್‌ ಕುಮಾರ್ ತಾಲ್ಲೂಕು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಲು ಇವರಿಗೇನು ನೈತಿಕತೆ ಇದೆ?. ಸುನಿಲ್‌ ಕುಮಾರ್ ಪರ ಹೇಳಿಕೆಯು ಇವರದಲ್ಲ. ಈ ಹೇಳಿಕೆ ಹಿಂದೆ ಇರುವ ಕಾಣದ ಕೈಯನ್ನು ಗುರುತಿಸಲಾರದಷ್ಟು ಅಸಮರ್ಥತೆ ರೈತ ಸಂಘಟನೆಗೆ ಬಂದಿಲ್ಲ. ಸಂಜೆ ಪತ್ರಿಕಾ ಗೋಷ್ಠಿ ಕರೆದು ಬೆಳಗ್ಗೆ ಗೊಂದಲದಲ್ಲಿ ಪತ್ರಿಕಾ ಗೋಷ್ಠಿ ರದ್ದು ಮಾಡಲು ಹೋಗಿ ಉಗಿಸಿಕೊಂಡಿರುವುದು ಗೊತ್ತಿದೆ. ಪತ್ರಕಾ ಗೋಷ್ಠಿಗೆ ಹಣ ಒದಗಿಸಿದವರ ಮಾಹಿತಿಯೂ ರೈತ ಸಂಘಟನೆಗೆ ತಿಳಿದಿದೆ. ಈಗಾಗಲೇ ತುಳಸೇಗೌಡ ರೈತ ಸಂಘಕ್ಕೆ ಸದಸ್ಯತ್ವ ಮಾಡುತ್ತಿದ್ದೇನೆ. 500 ರೂ ಕೊಡಿ ಎಂದು ಅನೇಕ ರೈತರೊಂದಿಗೆ ಬೇಡಿಕೆ ಇಟ್ಟಿರುವುದಾಗಿ ರೈತರು ದೂರುತ್ತಿದ್ದಾರೆ. ಈತ ಯಾವ ರೈತ ಸಂಘಕ್ಕೆ ಸದಸ್ಯತ್ವ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈತನಿಗೆ ರೈತ ಸಂಘಟನೆಯಲ್ಲಿ ನೆಲೆ ಕಂಡುಕೊಳ್ಳಲಾಗಿಲ್ಲ ಎಂದು ರೈತ ಸಂಘಟನೆ ಮುಖಂಡ ಗುರುಶಾಂತಪ್ಪ ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ. 7ರಂದು 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ

ರೈತ ಸಂಘದ ತಾಲ್ಲೂಕು ಸಮಿತಿಗೆ ಸ್ವಾಮೀಜಿಯೊಬ್ಬರನ್ನು ಸದಸ್ಯರನ್ನಾಗಿ ಮಾಡಿ ಅವರನ್ನು ತಾಲ್ಲೂಕು ಸಲಹ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದಾಗಿ ವ್ಯಾಟ್ಸಪ್, ಫೇಸ್‌ಬುಕ್‌ ನಂತಹ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ರೈತ ಸಂಘ ಗಂಭೀರವಾಗಿ ಪರಿಗಣಿಸಿದೆ, ಸೈದ್ಧಾಂತಿಕ ಹಾಗೂ ಜಾತ್ಯಾತೀತ ತತ್ವದ ತಳಹದಿಯಲ್ಲಿ ಕಟ್ಟಿರುವ ಸಂಘಟನೆಗೆ ಇಂತಹ ಸ್ವಾಮಿಯಿಂದ ಸಲಹೆ ಪಡೆಯುವಷ್ಟು ದುರ್ಬಲವಾಗಿಲ್ಲ ಹಾಗೂ ಬೌದ್ಧಿಕವಾಗಿ ದಿವಾಳಿಯಾಗಿಲ್ಲ. ರೈತ ಸಂಘಟನೆಯ ಆಂತರಿಕ ವಿಚಾರಗಳಿಗೆ ಬಾಹ್ಯ ವ್ಯಕ್ತಿಗಳ ಮೂಗು ತೂರಿಸುವಿಕೆಯನ್ನು ಸಂಘಟನೆ ಸಹಿಸುವುದಿಲ್ಲವೆಂದು ರೈತ ಸಂಘದ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ರೈತ ಸಂಘದ ಗುರುಶಾಂತಪ್ಪ, ಕುಮಾರಸ್ವಾಮಿ, ಎಂ ಸಿ ಬಸವರಾಜು, ದೇವರಾಜು, ಉಮೇಶ್, ರಾಜು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...

ಹಾವೇರಿ | ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್‌ಐ-ಅಂಚೆ ಜೀವವಿಮೆ) ಮತ್ತು...

ಬಸವನ ಬಾಗೇವಾಡಿ | ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ: ಡಿಎಚ್‌ಒ ಸ್ಪಷ್ಟನೆಗೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ...