ಚಿಕ್ಕಮಗಳೂರು | ಬಾಬಾ ಬುಡನ್ ವಂಶಸ್ಥರಾದ ಸಯ್ಯದ್ ಹಸೈನ್ ಶಾ ಖಾದ್ರಿ (ನಾಸಿರ್ ಪಾಷಾ) ನಿಧನ

Date:

ಹಜ್ರತ್ ಸಯ್ಯದ್ ಬುಡನ್ ಶಾ ಖಾದ್ರಿ ಅಲ್ ಹುಸೈನಿ, ಯಾನೆ ಬಾಬಾ ಬುಡನ್ ಸ್ವಾಮಿ, ಅವರ ವಂಶಸ್ಥರು ಹಾಗೂ ಸೂಫಿ ಆಧ್ಯಾತ್ಮಿಕ ಪರಂಪರೆಯ ಹಿರಿಯರಾದ ಸಯ್ಯದ್ ಹಸೈನ್ ಶಾ ಖಾದ್ರಿ (ನಾಸಿರ್ ಪಾಷಾ) ಅವರು 15 ಸೆಪ್ಟೆಂಬರ್ 2026ರ ಮುಂಜಾನೆ ಸುಮಾರು 6:00ರಿಂದ 6:45ರ ನಡುವೆ ನಿಧನರಾಗಿದ್ದಾರೆ.

- Advertisement -

ಬಾಬಾ ಬುಡನ್ ಅವರ ವಂಶಸ್ಥರಾಗಿ ತಮ್ಮ ಜೀವನದುದ್ದಕ್ಕೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಗೌರವಿಸಿ, ಶಾಂತಿ, ಸೌಹಾರ್ದತೆ, ಮಾನವೀಯತೆ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಅವರ ಅಂತಿಮ ದಫನವನ್ನು ಅವರ ಪೂರ್ವಜರ ಸಮಾಧಿಗಳ ಸಮೀಪ, ಇನಾಂ ದತ್ತಾತ್ರೇಯ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾ ಆವರಣದ ಖಬರಸ್ತಾನದಲ್ಲಿ ನಡೆಸಲು ಕುಟುಂಬದವರು, ಭಕ್ತರು ಹಾಗೂ ವಂಶಸ್ಥರು ಉದ್ದೇಶಿಸಿದ್ದರು. ಈ ಕುರಿತು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯ ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು 15/09/2026ರಂದು, File No. DCCKM-MUZODVS(IDP)/5/2026 ಅಡಿಯಲ್ಲಿ ಹಿಂಬರಹ ನೀಡಿದರು. ಸಂಸ್ಥೆಯ ಆಡಳಿತ ಮತ್ತು ಧಾರ್ಮಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದ ವಿಚಾರಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಆ ಹಂತದಲ್ಲಿ ಸಂಸ್ಥೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಲು ಅವಕಾಶವಿಲ್ಲ ಎಂದು ಹಿಂಬರಹದಲ್ಲಿ ತಿಳಿಸಲಾಗಿತ್ತು.

Advertisements

ಆ ಹಿನ್ನೆಲೆಯಲ್ಲಿ, ಕುಟುಂಬದವರು ಕಂಬಲ್ ಪೌಶ್ ದರ್ಗಾ ಖಬರಸ್ತಾನದಲ್ಲಿ, ಅವರ ತಾಯಿ ದಿವಂಗತ ಸಯ್ಯದ ಮೊಹಮ್ಮದ್ ಉನ್ನಿಸಾ ಅವರ ಸಮಾಧಿಯ ಕಾಲಿನ ಭಾಗದ ಸಮೀಪದಲ್ಲಿ ಅವರನ್ನು ದಫನ ಮಾಡಿದರು. ಅವರ ಜನಾಝಾ ನಮಾಜ್ 16 ಸೆಪ್ಟೆಂಬರ್ 2026ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಕಂಬಲ್ ಪೌಶ್ ಮಸೀದಿಯಲ್ಲಿ, ಅವರ ಪುತ್ರ ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ @ ಅಜ್ಮತ್ ಪಾಷಾ ಅವರ ಇಮಾಮತ್‌ನಲ್ಲಿ ನೆರವೇರಿತು.

ದಫನದ ಸುದ್ದಿ ತಿಳಿದು ತಮಿಳುನಾಡು ಸೇರಿದಂತೆ ವಿವಿಧ ಪ್ರದೇಶಗಳಿಂದ ಅನೇಕ ಮುರೀದರು ಮತ್ತು ಭಕ್ತರು ಆಗಮಿಸಿ, ಜಿಯಾರತ್ ಹಾಗೂ ಫಾತೇಹಾ ಸಲ್ಲಿಸಿ ಸಂತಾಪ ವ್ಯಕ್ತಪಡಿಸಿದರು. ತಮ್ಮ ಆಧ್ಯಾತ್ಮಿಕ ಗುರು ಹಾಗೂ ಬಾಬಾ ಬುಡನ್ ವಂಶಸ್ಥರ ಅಗಲಿಕೆಯಿಂದ ಅವರು ತೀವ್ರ ದುಃಖ ವ್ಯಕ್ತಪಡಿಸಿ, ಅವರ ಸಮಾಧಿಯನ್ನು ಕಂಡು ಭಾವುಕರಾದರು. ಅವರ ನಿಧನವು ಕುಟುಂಬದವರು, ವಂಶಸ್ಥರು, ಮುರೀದರು, ಭಕ್ತರು ಹಾಗೂ ಅವರನ್ನು ಗೌರವಿಸುತ್ತಿದ್ದ ಎಲ್ಲರಿಗೂ ತುಂಬಲಾರದ ನಷ್ಟವಾಗಿದೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿ 173: ಮರಗಳ ತೆರವು ವಿರೋಧ; ನಿಮಯಗಳ ಉಲ್ಲಂಘನೆ; ಕ್ರಮಕ್ಕೆ ವೀರೇಶ್ ಒತ್ತಾಯ

ಅವರ ಆಧ್ಯಾತ್ಮಿಕ ಪರಂಪರೆ, ಧಾರ್ಮಿಕ ಜೀವನ, ಮಾನವೀಯ ಮೌಲ್ಯಗಳು ಮತ್ತು ಬಾಬಾ ಬುಡನ್ ಅವರೊಂದಿಗೆ ಹೊಂದಿರುವ ವಂಶಪಾರಂಪರಿಕ ಸಂಬಂಧವನ್ನು ಮುಂದಿನ ಪೀಳಿಗೆಗಳಿಗೆ ದಾಖಲಿಸಿ ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅಲ್ಲಾಹ್ ತಆಲಾ ಅವರ ಮಗ್ಫಿರತ್ ನೀಡಿ, ಅವರ ದರ್ಜೆಯನ್ನು ಉನ್ನತಗೊಳಿಸಲಿ. ಅವರ ಕುಟುಂಬದವರು, ಮುರೀದರು ಮತ್ತು ಭಕ್ತರಿಗೆ ಸಬ್ರ್ ನೀಡಲಿ. ಆಮೀನ್ ಎಂದು ಬಾಬಾ ಬುಡನ್ ವಂಶಸ್ಥರು ಹಾಗೂ ಪ್ರಧಾನ ಕಾರ್ಯದರ್ಶಿ ಸೈಯದ್ ಬುಡನ್ ಶಾ- ಖಾದ್ರಿ ತಿಳಿಸಿದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಸೆ. 27ರಂದು ಭಗತ್ ಸಿಂಗ್ ಜನ್ಮದಿನ; ‘ನಾನೇಕೆ ನಾಸ್ತಿಕ’ 3ನೇ ರಾಜ್ಯಮಟ್ಟದ ವೈಚಾರಿಕ ಸಂವಾದ ಸಮಾವೇಶ

ಹಾಸನ, ಸೆ. 23: ಸ್ವಾತಂತ್ರ್ಯ ಚಳವಳಿಯ ಧ್ರುವತಾರೆ, ಕ್ರಾಂತಿಕಾರಿ ಶಹೀದ್ ಭಗತ್...

ವಿಜಯಪುರ | ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರ ನಡೆಸಿ: ಗ್ರಾಮ ಸ್ವರಾಜ್ಯ ಕರ್ನಾಟಕ ಆಗ್ರಹ

ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು...

ಹಾಸನ | ಮೂಢನಂಬಿಕೆ, ಜಾತಿ ತಾರತಮ್ಯ ಮತ್ತು ಅಸಮಾನತೆ ವಿರುದ್ಧ ವೈಚಾರಿಕತೆ ಅಗತ್ಯ; ಸಿಪಿಐಎಂ ಧರ್ಮೇಶ್ 

ಇಂದಿನ ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರ, ಜಾತಿ ತಾರತಮ್ಯ, ಅಸ್ಪೃಶ್ಯತೆ, ಕೋಮುವಾದ ಸೇರಿದಂತೆ...

ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು

ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಮಹತ್ವ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ...