ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173 ಮೂಡಿಗೆರೆಯಿಂದ ಮೂಗುತಿಹಳ್ಳಿವರೆಗೂ 26.326 ಕಿಮೀ ರಸ್ತೆ ಕಾಮಗಾರಿಗೆ ಅಗಲೀಕರಣಕ್ಕೆ 2500 ಹೆಚ್ಚು ಮರಗಳು ಮತ್ತು ಎರಡು ಎಕರೆ ಅರಣ್ಯ ಪ್ರದೇಶ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿದ್ದಾರೆ,ಈಗಾಗಲೇ 50 ಹೆಚ್ಚು ವಿವಿಧ ಜಾತಿಯ ನೂರು ವರ್ಷಕ್ಕೂ ಹಳೆಯದಾದ ಬೃಹತ್ ಪಾರಂಪರಿಕ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. ಶಿರಗುಂದ, ಮತ್ತವರ ಸಮೀಪ ಮರಗಳ ಮಾರಹೋಮ ನಡೆದಿದೆ.

ಮರಗಳನ್ನು ತೆರವುಗೊಳಿಸಲು ವೃಕ್ಷ ಸಂರಕ್ಷಣೆ ಕಾಯಿದೆ ಅನ್ವಯ ಸಾರ್ವಜನಿಕ ಅಹವಾಲು ಸಭೆಯನ್ನು ಅರಣ್ಯ ಅಧಿಕಾರಿಗಳು ಕರೆಯಬೇಕಿತ್ತು ,ಎಲ್ಲೂ ಕೂಡ ಸಾರ್ವಜನಿಕರಿಗೆ ಈ ಮಾಹಿತಿ ನೀಡಿಲ್ಲ , ಸಭೆ ನಡೆಸಿರುವುದು ಕಂಡುಬಂದಿಲ್ಲ ಮತ್ತು ಮರಗಳ ಕಡತಲೆಗೆ ಅನುಮತಿ ಕೊಟ್ಟಿದ್ದರ ಎನ್ನುವುದು ಕೂಡ ಖಚಿತವಾಗಿಲ್ಲ, ಈಗಿದ್ದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮರಗಳ ತೆರವಿಗೆ ಮುಂದಾಗಿರುವುದು ಪರಿಸರ ಆಸಕ್ತರಲ್ಲಿ ತೀವ್ರ ಆತಂಕ ಮೂಡಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಸಿರು ಹೆದ್ದಾರಿ ನಿಯಮಗಳ(Green High way policy) ರಸ್ತೆ ಬದಿಯ ಹೆದ್ದಾರಿಯ ಮರಗಳನ್ನು ಸ್ಥಳಾಂತರ ಮಾಡಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ಆದೇಶ ಇದೆ ಮತ್ತು ರಾಜ್ಯ ಅರಣ್ಯ ಇಲಾಖೆಯ ಮಾರ್ಗಸೂಚಿ ಆದೇಶ ಇದ್ದರು ಕೂಡ ಯಾವುದೇ ಕ್ರಮ ಕೈಗೊಳ್ಳದೇ ಏಕ ಏಕಿಯಾಗಿ ಮರಗಳನ್ನು ತೆರವು ಗೊಳಿಸುತ್ತಿರುವುದು ಸರಿ ಇಲ್ಲ ಎನ್ನುತ್ತಾರೆ. ವನ್ಯಜೀವಿ ಪರಿಸರ ಸಂರಕ್ಷಣ ಕಾರ್ಯಕರ್ತ ಜಿ ವೀರೇಶ್.ಇನ್ನೂ ಅರಣ್ಯ ಪ್ರದೇಶದಲ್ಲಿ ಮರಗಳ ತೆರವಿಗೆ ಕೇಂದ್ರದ ಅರಣ್ಯ ಸಚಿವಾಲಯದ ಸಂಪೂರ್ಣ ಅನುಮತಿ ಇನ್ನೂ ಸಿಕ್ಕಿಲ್ಲ.

ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಾವುದನ್ನು ಪರಿಶೀಲಿಸದೆ ಹೇಗೆ ಮರಗಳ ತೆರವಿಗೆ ಮುಂದಾಗಿದ್ದಾರೆ ಎನ್ನುವುದು ಕುತೂಹಲ ಮೂಡಿಸುತ್ತದೆ, ಮರಗಳ ತೆರುವ ಸಂಬಂಧ ಒಂದಷ್ಟು ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳದೆ ಯಾವ ಆಧಾರದಲ್ಲಿ ಮರಗಳನ್ನು ಕಡಿತುತ್ತಿದ್ದಾರೆ? ಇದರಲ್ಲಿ ರಾಜಕೀಯ ಒತ್ತಡ ಇದೆಯೇ ಎಂದು ಹೇಳಬೇಕು.
This video cannot be played in your browser. Open the video directly
ಇದನ್ನೂ ಓದಿದ್ದೀರಾ?ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್
ಕೂಡಲೇ ಈ ಮರಗಳ ತೆರವು ಪ್ರಕ್ರಿಯೆ ನಿಲ್ಲಿಸಿ ಸೂಕ್ತ ಕಾನೂನು ಕ್ರಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸಿ ಮರಗಳ ಸಂರಕ್ಷಣೆ ಮತ್ತು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಈಗಾಗಲೇ ಅಕ್ರಮವಾಗಿ ಮರಗಳು ತೆರವು ಮತ್ತು ಕಾನೂನು ಉಲ್ಲಂಘನೆ ಸಂಬಂಧ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿರೇಶ್ ಒತ್ತಾಯಿಸಿದ್ದಾರೆ.





