ನಗರದ ಕಲ್ಯಾಣ್ ನಗರದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಕೈಚಳಕ ತೋರಿಸುವ ಘಟನೆ ನಡೆದಿದೆ.
ಕಳ್ಳತನ ನಡೆದಿರುವ ಮನೆಯ ನಿವಾಸಿ ಅನಿಲ್ ಕುಮಾರ್ ಎಂಬುವವರು. ಮನೆಗೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಬೆಳ್ಳಿ, ಚಿನ್ನ ಹಾಗೂ ನಗದು ದೋಚಿದ್ದಾರೆ.
ಮನೆಯವರು ಊರಿನಲ್ಲಿ ಇಲ್ಲದ ಸಮಯ ಸಾಧಿಸಿ, ಮುಂಭಾಗದ ಬಾಗಿಲು ಮೀಟಿ ಒಳನುಗ್ಗಿರುವ ದುಷ್ಕರ್ಮಿಗಳು ವಾಲ್ ರೋಬ್‌ನಲ್ಲಿದ್ದ ಸುಮಾರು 4.50 ಲಕ್ಷ ಮೌಲ್ಯದ 2.7 ಕೆಜಿ ಬೆಳ್ಳಿ ವಸ್ತುಗಳು, 80 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ಸೇರಿ ಒಟ್ಟು 5.55 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಚಿವ ಯತೀಂದ್ರ ಸಿದ್ದರಾಮಯ್ಯ ರಾಜಮನೆತನಕ್ಕೆ ಅವಹೇಳನಕಾರಿ ಹೇಳಿಕೆ; ಅರಸು ಸಂಘ ಖಂಡನೆ
ಈ ಘಟನೆ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




