ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಸೋಮನಹಳ್ಳಿ ತಾಂಡ್ಯದಲ್ಲಿ ಮದ್ಯಪಾನ ಮಾಡಲು ₹2,000 ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ಮುದ್ದೆ ಕೋಲಿನಿಂದ ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಕೂದಲನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಅದೇ ಗ್ರಾಮದ ನಿವಾಸಿ ರಂಜಿತಾ ಎಂಬುವವರು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಪತಿ ಆಕಾಶ್ ನಾಯ್ಕ ಮದ್ಯ ಸೇವನೆಗೆ ₹2,000 ನೀಡುವಂತೆ ಪೀಡಿಸಿದ್ದಾನೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ಆತ, ಮನೆಯಲ್ಲಿದ್ದ ಮುದ್ದೆ ಕೋಲನ್ನು ತೆಗೆದುಕೊಂಡು ಆಕೆಯ ಬೆನ್ನು ಮತ್ತು ಕೈಗೆ ಮನಬಂದಂತೆ ಹೊಡೆದು ನೋವುಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟಕ್ಕೇ ಸಮಾಧಾನಗೊಳ್ಳದೆ, ಕೂದಲು ಹಿಡಿದು ಮನೆಯಿಂದ ಹೊರಗೆ ರಸ್ತೆಯವರೆಗೂ ಎಳೆದಾಡಿ, ‘ಹಣ ಕೊಡದಿದ್ದರೆ ಜೀವಸಹಿತ ಬಿಡುವುದಿಲ್ಲವೆಂದು ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಲಾಟೆ ಗಮನಿಸಿದ ಸ್ಥಳೀಯ ಮಹಿಳೆ ಮತ್ತು ಗಿರಿಜಾಬಾಯಿ ತಕ್ಷಣ ಧಾವಿಸಿ ಸ್ಥಳೀಯ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸ ಪಡೆದುಕೊಂಡಿದ್ದಾರೆ. ಪ್ರತಿದಿನ ಕುಡಿದು ಬಂದು ಮಾನಸಿಕ ಕಿರುಕುಳ ನೀಡಿ, ಅನುಮಾನದಿಂದ ಅವಾಚ್ಯವಾಗಿ ನಿಂದಿಸುತ್ತಿದ್ದ ಪತಿಯ ಕ್ರೌರ್ಯದ ವಿರುದ್ಧ ಸಂತ್ರಸ್ತೆ ಸಿಂಗಟಗೆರೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್
ಈ ಕುರಿತು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶ್ ನಾಯ್ ವಿರುದ್ಧ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.




