ದಕ್ಷಿಣ ಕನ್ನಡ | 47,000 ಮಂದಿ ಹಿರಿಯ ಮತದಾರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ

Date:

  • ಹಿರಿಯ ಮತದಾರರು ಮತದಾನ ಕೇಂದ್ರಗಳಿಗೆ ಹೋಗಬೇಕಾಗಿಲ್ಲ: ಜಿಲ್ಲಾಧಿಕಾರಿ
  • ಹಿರಿಯ ಮತದಾರರು ಮನೆಯಿಂದಲೇ ಮತ ಚಲಾಯಿಸಲು ನಮೂನೆ 12ಡಿ ಅವಕಾಶ

ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ಮತದಾರರು, ವಿಕಲಚೇತನರು ಸೇರಿದಂತೆ 60,934 ಮಂದಿ ಮತದಾರರಿಗೆ ಮನೆಯಲ್ಲೇ ಕುಳಿತು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರಿಗೆ ಮೇ 1ರಿಂದ 5ರವರೆಗೆ ಅವರ ಮನೆ ಬಾಗಿಲಿಗೆ ಫಾರ್ಮ್ 12ಡಿ ನೀಡಲಾಗುವುದು, ಇದರಿಂದ ಅವರು ಮೇ 10ರೊಳಗೆ ಮತ ಚಲಾಯಿಸಲು ಸಾಧ್ಯವಾಗುತ್ತದೆ.

ಅರ್ಹ ಮತದಾರರು ನಮೂನೆ ’12ಡಿ’ಗೆ ಸಹಿ ಹಾಕಬೇಕು. ಅವರ ಮನೆಗಳಿಗೆ ಚುನಾವಣಾಧಿಕಾರಿ ಭೇಟಿ ನೀಡಿ ಮೇ 10ರೊಳಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಒದಗಿಸುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.

“ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 46,927 ಮಂದಿ ಮತದಾರರು, 14,007 ಮಂದಿ ಪಿಡಬ್ಲ್ಯೂಡಿ ಮತದಾರರಿದ್ದಾರೆ. ಆ ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗವು ವಿನೂತನ ಯೋಜನೆಯನ್ನು ಪರಿಚಯಿಸಿದೆ. ಚುನಾವಣೆಗೆ ಕನಿಷ್ಠ ಐದು ದಿನಗಳ ಮೊದಲು ನಮೂನೆ 12ಡಿ ಅರ್ಜಿಯನ್ನು ಅವರಿಗೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಾನಗರ ಪಾಲಿಕೆ ಬಜೆಟ್ ಮಂಡನೆ ಮುಂದೂಡಿಕೆ

“ಅರ್ಹ ಮತದಾರರು ತಮ್ಮ ಮನೆಗಳಿಂದಲೇ ಮತದಾನದ ಹಕ್ಕನ್ನು ಚಲಾಯಿಸಲು ನಮೂನೆ 12ಡಿ ಅರ್ಜಿ ಅವಕಾಶ ನೀಡುತ್ತದೆ. ಇದರಿಂದ ಅವರು ಮತದಾನ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ಅವರು ನಮೂನೆ 12ಡಿಗೆ ಸಹಿ ಹಾಕಿದ ನಂತರ, ವೀಡಿಯೊಗ್ರಾಫರ್ ಮತ್ತು ಪೊಲೀಸ್ ಸೇರಿದಂತೆ ಅಧಿಕಾರಿಗಳ ತಂಡವು ಅವರ ಮನೆಗಳಿಗೆ ಭೇಟಿ ನೀಡಲಿದೆ” ಎಂದು ತಿಳಿಸಿದರು.

“ಹಿರಿಯ ಮತದಾರರು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ್ ಸಮ್ಮುಖದಲ್ಲಿ ಮತ ಚಲಾಯಿಸಬಹುದು. ಇಡೀ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡುವಾಗ, ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

“ಒಟ್ಟು 46,927 ಮತದಾರರಲ್ಲಿ 38,294 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರು, 8,102 ಮಂದಿ 90 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 531 ಮಂದಿ 100 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ  ಮತದಾರರಿದ್ದಾರೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕರ್ನಾಟಕ’ ನಾಮಕರಣಕ್ಕೆ 50ರ ಸಂಭ್ರಮ | ವರ್ಷವಿಡಿ ವಿಶೇಷ ಕಾರ್ಯಕ್ರಮ: ಸಚಿವ ಶಿವರಾಜ್ ತಂಗಡಗಿ

'ರಾಜ್ಯ 'ಕರ್ನಾಟಕ' ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿದೆ' ವರ್ಷವಿಡಿ ಕಾರ್ಯಕ್ರಮ ಆಯೋಜಿಸಲು...

ಚಿತ್ರದುರ್ಗ | ಮನೆ ಬಾಗಿಲಿಗೆ ಇ-ಸ್ವತ್ತು ‘ಜನಸ್ನೇಹಿ ಕಾರ್ಯಕ್ರಮ’ಕ್ಕೆ ಮತ್ತೆ ಚಾಲನೆ ನೀಡಿದ ಸಿಇಒ ದಿವಾಕರ್

ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಖಲೆಗಳನ್ನು ಸರ್ಕಾರವು ಡಿಜಿಟಲೀಕರಣಗೊಳಿಸಿದ್ದು, ಮನೆಯ ಖಾಯಂ ಹಕ್ಕು...

ಶಾಸಕ ಪ್ರದೀಪ್ ಈಶ್ವರ್ ಸಹಾಯ ಅರಸಿ ಬಂದ ವೃದ್ಧೆ; ಬರಿಗೈನಲ್ಲೇ ವಾಪಸ್

ಸದ್ಯ ರಾಜ್ಯ ರಾಜಕಾರಣದಲ್ಲಿ ತೆಲುಗು-ಕನ್ನಡ ಮಿಶ್ರಿತ ಡೈಲಾಗ್‌ಗಳಿಂದ ಅಬ್ಬರಿಸಿ ಬೊಬ್ಬಿರಿಯುತ್ತಿರುವವರು ಶಾಸಕ...

ಭ್ರಷ್ಟ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲಿನ ತನಿಖೆಯನ್ನು ಚುರುಕುಗೊಳಿಸಿ ಅಂತಹವರ ವಿರುದ್ಧ...