ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಕಡಬ, ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾ ಯುವಜನ ಒಕ್ಕೂಟ, ಸವಣೂರು ಗ್ರಾಮ ಪಂಚಾಯತ್ ಹಾಗೂ ಯವ ಮಂಡಲ ಸವಣೂರು ಇವರ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನವೆಂಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಉನ್ನತೀಕರಿಸಿದ ಸವಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.
ಆಯೋಜಿಸಲಾಗುವ ಸ್ಪರ್ಧೆಗಳ ವಿವರ:
ಜನಪದ ನೃತ್ಯ (ಗುಂಪು ಸ್ಪರ್ಧೆ) ಭಾರತೀಯ ಶೈಲಿಯ ಯಾವುದೇ ಜನಪದ ನೃತ್ಯ) ಗರಿಷ್ಠ 10 ಜನ 5 ರಿಂದ 8 ನಿಮಿಷ, 2)ಜನಪದ ಗೀತೆ (ಗುಂಪು ಸ್ಪರ್ಧೆ) – (ಪ್ರಾದೇಶಿಕ ಭಾಷೆಯಲ್ಲಿರುವ ಜನಪದ ಗೀತೆ) ಗರಿಷ್ಠ 10 ಜನ (7+3) 5 ರಿಂದ 8 ನಿಮಿಷ, 3) ಚಿತ್ರಕಲೆ (ವೈಯಕ್ತಿಕ) 6 ಗಂಟೆಗಳು, 4) ಬೀದಿ ನಾಟಕ (ಕನ್ನಡ,ಹಿಂದಿ,ಆಂಗ್ಲ ನಶ ಮುಕ್ತ ಯುವತ್ವ ಎಂಬ ವಿಷಯದ ಕುರಿತು) ಗರಿಷ್ಠ 10 ಜನ (7 ನಿಮಿಷ), 5)ಕವಿತೆ ಬರೆಯುವುದು(ಕನ್ನಡ/ ಹಿಂದಿ/ ಆಂಗ್ಲ ಭಾಷೆಯಲ್ಲಿ) ವೈಯಕ್ತಿಕ- 90 ನಿಮಿಷ.
ಈ ಯುವಜನೋತ್ಸವ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15 ರಿಂದ 29 ವರ್ಷದೊಳಗಿನ ಯುವಕ, ಯುವತಿಯರು ಮತ್ತು ಶಾಲಾ/ಕಾಲೇಜುಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಬಹುದು. ವಯಸ್ಸಿನ ದೃಢೀಕರಣ ಪತ್ರವಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜನನ ಪ್ರಮಾಣ ಪತ್ರ,ಆಧಾರ್ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಭಾಗವಹಿಸುವ ಸ್ಪರ್ಧಿಗಳು ನವೆಂಬರ್ 20-11-2026 ರೊಳಗಾಗಿ ತಮ್ಮ ತಂಡದ ಹೆಸರನ್ನು ಇ-ಮೇಲ್ ಮೂಲಕ ಕಳುಹಿಸಬಹುದು. ಸ್ಪರ್ಧೆ ನಡೆಯುವ ಸ್ಥಳದಲ್ಲಿ ನವೆಂಬರ್ 22 ರಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ (ದೂರವಾಣಿ ಸಂಖ್ಯೆ :0824-2451264) ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





