- ಸರ್ಕಾರಿ ಬಸ್ ನಿರ್ವಾಹಕನಿಂದ ಲೈಂಗಿಕ ಕಿರುಕುಳ
- ಬಂಟ್ವಾಳ ಪೊಲೀಸರಿಂದ ಆರೋಪಿಯ ಬಂಧನ
ಶಾಲೆ ಮುಗಿಸಿಕೊಂಡು ಸರ್ಕಾರಿ ಬಸ್‌ನಲ್ಲಿ ಹಿಂತಿರುಗುತ್ತಿದ್ದ ಅಪ್ರಾಪ್ತ ಶಾಲಾ ಬಾಲಕಿ ಮೇಲೆ ಬಸ್‌ನ ನಿರ್ವಾಹಕ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ದಕ್ಷಿಣ ಕರ್ನಾಟಕ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಶನಿವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗಲು ಕಲ್ಲಡ್ಕದಿಂದ ಹೊರಟ್ಟಿದ್ದ ಬಾಲಕಿ ಮೇಲೆ ಬಸ್‌ನಲ್ಲಿ ಪ್ರಯಾಣಿಕರು ಯಾರೂ ಇಲ್ಲದಿರುವುದನ್ನು ಗಮನಿಸಿದ ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ್ದಾನೆ” ಎಂದು ಬಾಲಕಿ ಪೋಷಕರು ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಮಂಡ್ಯ | ಆಯ ತಪ್ಪಿ ನಾಲೆಗೆ ಉರುಳಿದ ಬೈಕ್; ವಿದ್ಯಾರ್ಥಿಗಳು ಸಾವು
ಬಾಲಕಿ ಪೋಷಕರು ದೂರು ದಾಖಲಿಸುತ್ತಿದ್ದಂತೆ ಬಂಟ್ವಾಳ ಪೊಲೀಸರು ಆರೋಪಿಯನ್ನು ಪೋಕ್ಸೋ ಪ್ರಕರಣದಡಿಯಲ್ಲಿ ಬಂಧಿಸಿದ್ದು, ಆರೋಪಿಯು ಸರ್ಕಾರಿ ಬಸ್‌ನ ನಿರ್ವಾಹಕನಾಗಿದ್ದು, ಬಾಗಲಕೋಟೆ ನಿವಾಸಿ ದವಾಳ್ ಸಾಬ್ ಎಂದು ತಿಳಿದು ಬಂದಿದೆ.