ಮಂಗಳೂರು | ದುರಂದರ್‌ ಸಿನಿಮಾಗಳ ನಡುವೆಯೂ ಲಂಕೇಶ್‌ ಚಿತ್ರಗಳು ಇಂದಿಗೂ ಪ್ರಸ್ತುತ : ಡಾ. ಜ್ಯೋತಿ ಚೇಳ್ಯಾರು

Date:

ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ-ದಕ್ಷಿಣ ಕನ್ನಡ, ವಿಜಯಾ ಕಾಲೇಜು, ಮುಲ್ಕಿ ಸಾಹಿತ್ಯ ಸಂಘ ಮತ್ತು ಐಕ್ಯುಎಸಿ ಸಹಯೋಗದಲ್ಲಿ “ಲಂಕೇಶ್ ಬರಹಗಳ ವೈಚಾರಿಕ ವಿನ್ಯಾಸ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಇಂದು ವಿಜಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

- Advertisement -
1010264748 1

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯಡಕ ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಶೆಟ್ಟಿ ಅವರು ಹೆಚ್.ಪಿ. ಲಂಕೇಶ್ ಅವರ ಭಾವಚಿತ್ರಕ್ಕೆ ಹೂವುಗಳನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ನಾವು ಬದುಕುತ್ತಿರುವ ಇಂದಿನ ಜಗತ್ತು ನಮ್ಮ ನಡೆ-ನುಡಿಗಳು ಹಾಗೂ ವಿಚಾರಗಳು ವಿಶಾಲವಾಗಿ ಹರಡದಂತೆ ತಡೆಯುವಂತಹ ವಿಶಿಷ್ಟ ಪ್ರಯತ್ನಗಳು ನಡೆಯುತ್ತಿರುವ ಕಾಲಘಟ್ಟವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಮತ್ತೆ ಹಳೆಯ 16ನೇ ಶತಮಾನದ ಚಿಂತನೆಗಳತ್ತ ಹಿಂತಿರುಗಬೇಕಿದೆ. ಈ ಹಿನ್ನಲೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಪಿ. ಲಂಕೇಶ್ ಅವರ ಬರಹಗಳು ಮತ್ತು ಅವರ ಪತ್ರಿಕೆಯ ಮೂಲಕ ದೊಡ್ಡ ಮಟ್ಟದ ಕ್ರಾಂತಿಯನ್ನುಂಟುಮಾಡಿದವು. ಅವರು ಅಹಿಂಸಾವಾದಿಯಾಗಿ ಸಮಾಜದಲ್ಲಿ ಪ್ರಬುದ್ಧ ಚಿಂತನೆಗಳನ್ನು ಹರಡಿದರು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...
1010264749 1

“ಸರ್ವಜನಾಂಗ ಶಾಂತಿಯ ತೋಟವಾಗಿರುವ ಈ ನಾಡಿನಲ್ಲಿ ನಾವು ಸಂವಿಧಾನದ ಆಶಯಗಳಡಿಯಲ್ಲಿ ಬದುಕಬೇಕು. ಸಂವಿಧಾನವು ಎಲ್ಲರಿಗೂ ಸಮಬಾಳು, ಸಮಪಾಲು ನೀಡುವ ಮಹತ್ವದ ಮೌಲ್ಯಗಳನ್ನು ಪ್ರತಿಪಾದಿಸಿದೆ. ಒಂದು ದೇಶ ಸದೃಢವಾಗಬೇಕಾದರೆ ದ್ವೇಷ, ವಿಭಜನೆ ಹಾಗೂ ಒಡಕುಗಳಿಲ್ಲದ ಸಮಾಜ ನಿರ್ಮಾಣವಾಗಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಚೇಳಾಯ್ತು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲೆಯಾದ ಡಾ. ಜ್ಯೋತಿ ಚೇಳ್ಯಾರು ಅವರು “ಲಂಕೇಶ್ ಬರಹಗಳ ವೈಚಾರಿಕ ವಿನ್ಯಾಸ” ಎಂಬ ವಿಷಯದಲ್ಲಿ ಮಾತನಾಡುತ್ತಾ, ಪಿ. ಲಂಕೇಶ್ ಅವರ ಬರಹಗಳು ಪಟಬದ್ರರು, ರಾಜಕಾರಣಿಗಳು ಮತ್ತು ಆಶಾಡಬೂತಿಗಳ ಮೇಲೆ ಕಟುವಾಗಿ ಬೆಳಕು ಚೆಲ್ಲುತ್ತವೆ ಎಂದು ಹೇಳಿದರು. ಕಂಡದ್ದನ್ನು ಕಂಡ ಹಾಗೆ ನಿಷ್ಠೂರವಾಗಿ ಬರೆಯುವ ಬರಹಗಾರನಾಗಿ ಲಂಕೇಶ್ ಗುರುತಿಸಿಕೊಂಡಿದ್ದರು ಎಂದು ಅವರು ಅಭಿಪ್ರಾಯಪಟ್ಟರು.

1010264751

ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ ಲಂಕೇಶ್ ಅವರು 12 ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇಂಗ್ಲೀಷ್ ಸಾಹಿತ್ಯದ ಮೇರು ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದರೂ, ತಮ್ಮ ಸ್ಥಳೀಯ ಬೇರುಗಳನ್ನು ಮರೆಯದೆ ಕನ್ನಡದ ಜಗತ್ತಿಗಾಗಿ, ವಿಶೇಷವಾಗಿ ಸಾಮಾನ್ಯ ಜನರ ಪರವಾಗಿ ತೀವ್ರ ಸ್ಪಂದನೆಯುಳ್ಳ ಬರಹಗಳನ್ನು ನೀಡಿದ್ದಾರೆ ಎಂದು ಹೇಳಿದರು. ಬರಹಗಾರರಷ್ಟೇ ಅಲ್ಲದೆ, ಅವರು ನಾಟಕಕಾರರೂ ಆಗಿದ್ದು, ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮತ್ತು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇಂದಿನ ದಿನಗಳಲ್ಲಿ ಬರುತ್ತಿರುವ ದುರಂದರ್‌ ಮಾದರಿಯ ಸಿನಿಮಾಗಳ ನಡುವಿನಲ್ಲಿ, ನಾವು ಲಂಕೇಶ್‌ ಅವರ ಸಿನಿಮಾಗಳನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಯೂ ನಮ್ಮ ಮುಂದೆ ಉದ್ಭವಿಸಿದೆ. ಲಂಕೇಶ್‌ ರವರ ಸಿನಿಮಾಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

1010264747 1

ಇಂದಿನ ಸಮಾಜದಲ್ಲಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ನಿಯಂತ್ರಣಗಳ ನಡುವೆ ನಾವು ಬದುಕುತ್ತಿದ್ದೇವೆ. ಆದರೆ ಲಂಕೇಶ್ ಅವರು ನಿರ್ಭಯವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದ ರೀತಿ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದರು. ಬದುಕಿದ್ದಾಗ ಅವರನ್ನು ಗೌರವಿಸದವರು, ಅವರ ನಿಧನದ ನಂತರ ಅವರ ಬಗ್ಗೆ ತೀರಾ ಟೀಕೆಗಳನ್ನು ಮಾಡಿರುವುದೂ ಗಮನಾರ್ಹ ಸಂಗತಿಯಾಗಿದೆ ಎಂದರು.

ಲಂಕೇಶ್ ಅವರ ಚಿಂತನೆಗಳು ಭಾರತದ ಸಂವಿಧಾನದ ಆಶಯಗಳು ಮತ್ತು ಮಹಾತ್ಮ ಗಾಂಧಿಯವರ ತತ್ವಗಳು ಪ್ರಭಾವ ಬೀರಿದ್ದವು. ಗಾಂಧೀಜಿಯವರ ಚಿಂತನೆಗಳನ್ನು ತಮ್ಮದಾಗಿಸಿಕೊಂಡು, ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ಬರಹಗಳನ್ನು ರಚಿಸಿದ್ದರು ಎಂದು ಹೇಳಿದರು.

ಅವರ ಸೃಜನಶೀಲ ಬರಹಗಳು ಸೈದ್ಧಾಂತಿಕತೆ ಮತ್ತು ಚಿಂತನಾ ವಿಶ್ಲೇಷಣೆಯ ಮಿಶ್ರಣವಾಗಿದ್ದು, ಸಮಾಜವನ್ನು ಹತ್ತಿರದಿಂದ ಅವಲೋಕಿಸಿ ಕಟುವಾಗಿ ವಿಮರ್ಶಿಸಿದವು. ತಮ್ಮ ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸಿ ಬರೆದವರು ಪಿ. ಲಂಕೇಶ್ ಎಂದು ಅವರು ಹೇಳಿದರು.

ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಸಂಪಾದಕೀಯಗಳು ಟೀಕೆ-ಟಿಪ್ಪಣಿಗಳ ಮೂಲಕ ಸಮಾಜದ ವಿಚಾರಗಳನ್ನು ವಿಮರ್ಶಾತ್ಮಕವಾಗಿ ಜನರ ಮುಂದಿಟ್ಟವು. ಇಂದಿನ ಪೀಳಿಗೆ ಅವರು ಬರೆದ ಬರಹಗಳು, ನಾಟಕಗಳು ಮತ್ತು ಸಿನಿಮಾಗಳನ್ನು ಅರಿತುಕೊಳ್ಳುವುದು ಕಾಲದ ಅವಶ್ಯಕತೆಯಾಗಿದೆ. ಸಂವಿಧಾನದ ಆಶಯಗಳನ್ನು ಮನನ ಮಾಡಿಕೊಂಡು ಸಮಾಜದಲ್ಲಿ ಬದುಕಬೇಕೆಂಬ ಸಂದೇಶವನ್ನು ಅವರು ನೀಡಿದರು.

1010264750

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೆಂಕಟೇಶ್ ಭಟ್ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶೈಲಜಾ ವೈ.ವಿ. ಮಾತನಾಡಿದರು. ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕರಾದ ಪ್ರೊ. ದೇವದಾಸ್ ಕೆ, ಚಕೋರ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ ಸುಜಿತ್ ಉಪಸ್ಥಿತರಿದ್ದರು.

ವಿಜಯ ಕಾಲೇಜಿನ ವಿದ್ಯಾರ್ಥಿ ಅಮೃತೇಶ್ ಸ್ವಾಗತಿಸಿದರು. ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ದಶಮಿ ಧನ್ಯವಾದ ಸಲ್ಲಿಸಿದರು. ಮೇಘ ಮತ್ತು ತಂಡದವರು ನಾಡಗೀತೆ ಹಾಡಿದರು. ಈ ಸಂದರ್ಭದಲ್ಲಿ ಲಂಕೇಶ್ ಅವರ ಪ್ರಸಿದ್ಧ “ಅವ್ವ” ಕವಿತೆಯನ್ನು ರಾಮಾಂಜಿ ವಾಚಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...