ದಾವಣಗೆರೆ | ಪಂಚಮಸಾಲಿ ಪೀಠದ ಮುಂಭಾಗ ನಿಷೇಧಾಜ್ಞೆ ನಡುವೆ ಭಕ್ತರಿಂದ ಲೆಕ್ಕ ಕೊಡಿ ಚಳುವಳಿ

Date:

ಭಕ್ತರ ದೇಣಿಗೆ ಹಣದ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಇತ್ತೀಚಿಗೆ ಸುದ್ದಿಯಲ್ಲಿರುವ ದಾವಣಗೆರೆ ಜಿಲ್ಲೆಯ ಹರಿಹರ ನಗರ ಸಮೀಪದ ಲಿಂಗಾಯತ ಪಂಚಮಸಾಲಿ ಹರಪೀಠದ ಮುಂಭಾಗದಲ್ಲಿ ನಿಷೇಧಾಜ್ಞೆ ನಡುವೆಯೂ ಮಠದ ಭಕ್ತರು “ಲೆಕ್ಕ ಕೊಡಿ ಚಳುವಳಿ” ಪ್ರಾರಂಭಿಸಿ ಮಠದ ಟ್ರಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

- Advertisement -
1004106260

ಹರಿಹರ ಪಂಚಮಸಾಲಿ ಮಠದ ಆಡಳಿತ ಮಂಡಳಿ, ಟ್ರಸ್ಟ್ ಹಾಗೂ ವಚನಾನಂದ ಶ್ರೀಗಳ ನಡುವೆ ಈಚೆಗೆ ಕೆಲವು ದಿನಗಳಿಂದಲೂ ಒಳಗೇ ಗುದ್ದಾಟ ಪ್ರಾರಂಭವಾಗಿದ್ದು, ಪೀಠದ ವಿವಾದಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ನಿಂದ ವಚನಾನಂದ ಶ್ರೀಗಳಿಗೆ ಎಚ್ಚರಿಕೆ ನೀಡಿ ಪೀಠಕ್ಕೆ ಸಂಪೂರ್ಣ ಸಮಯ ಕೊಡುವಂತೆ ಎಚ್ಚರಿಸಿದ್ದರು. ಇಲ್ಲವಾದಲ್ಲಿ ಮಠದಿಂದ ಹೊರ ಹಾಕುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಮಠದ ಆಡಳಿತಾಧಿಕಾರಿ ರಾಜಕುಮಾರ್ ಅವರನ್ನು ಹುದ್ದೆಯಿಂದ ವಜಾ ಮಾಡಿದ್ದರು. ಆಡಳಿತಾಧಿಕಾರಿ ರಾಜಕುಮಾರ್ “ಮಠದ ಭಕ್ತದಿಂದ ಸಂಗ್ರಹಿಸಲಾದ ನಗದು ಮತ್ತು ಆಭರಣಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು ಸರಿಯಾದ ಲೆಕ್ಕ ಪತ್ರಗಳೇ ಇಲ್ಲ.‌ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನಗೆ ಹಾಗೂ ಶ್ರೀಗಳಿಗೆ ಬೆದರಿಕೆ ಹಾಕಿ ನಮ್ಮನ್ನು ಪೀಠದ ಆಡಳಿತಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿದೆ” ಎಂದು ಆರೋಪಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...
IMG 20260413 WA0256

ಇದು ರಾಜ್ಯಾದ್ಯಂತ ಪಂಚಮಸಾಲಿ ಸಮುದಾಯದಲ್ಲಿ ಆಕ್ರೋಶ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಕೆಲವು ಮುಖಂಡರೂ ಕೂಡ ಮಠದಲ್ಲಿ ಟ್ರಸ್ಟಿಗಳಿಂದ ಹಣದ ದುರುಪಯೋಗ ಆಗುತ್ತಿದ್ದು, ಈ ಕೂಡಲೇ ಸಾರ್ವಜನಿಕವಾಗಿ ಲೆಕ್ಕಪತ್ರ ನೀಡಬೇಕು” ಎಂದು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಏಪ್ರಿಲ್ 13ರಂದು ಮಠದ ಮುಂಭಾಗದಲ್ಲಿ ಹಲವು ಮುಖಂಡರು ಸಮಾಜದ ಭಕ್ತರೊಂದಿಗೆ ಲೆಕ್ಕ ಕೊಡಿ ಚಳುವಳಿ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಠದ ಸುತ್ತಮುತ್ತ ಸೆಕ್ಷನ್ 148 ಜಾರಿಗೊಳಿಸಿದ್ದರು. ನಿಷೇಧಾಜ್ಞೆ ಜಾರಿ ಇದ್ದರೂ ಮಠದ ಮುಂಭಾಗ ಭಕ್ತರು ಇಂದು ಬೆಳಗ್ಗೆ 10 ಗಂಟೆಯಿಂದ ಪ್ರತಿಭಟನೆ ಆರಂಭಿಸಿದ್ದರು.

1004106264

ಈ ನಡುವೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದ ಸುಮಾರು 40ಕ್ಕೂ ಹೆಚ್ಚು ಭಕ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಬಂಧಿಸುವ ವೇಳೆ ನೂಕಾಟದಿಂದ ಮುಖಂಡರೊಬ್ಬರು ಅಸ್ವಸ್ಥಗೊಂಡ ಘಟನೆ ನಡೆಯಿತು. ಈ ನಡುವೆ ಮುಖಂಡರು, ಭಕ್ತರಿಂದ “ಧರ್ಮದರ್ಶಿಗಳೇ ಕಳ್ಳ ಲೆಕ್ಕ ಬೇಡ, ಧರ್ಮದ ಲೆಕ್ಕ ಕೊಡಿ” ಹಾಗೂ “ಲೆಕ್ಕ ಕೊಡಿ, ಮಠ ಉಳಿಸಿ” ಸೇರಿದಂತೆ ಇತರ ಘೋಷಣೆಗಳು ಕೇಳಿ ಬಂದವು.‌

1004106261

ಈ ವೇಳೆ ಮಾತನಾಡಿದ ಹರಿಹರ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ “ಮಠದ ಭಕ್ತರಿಂದ ಸಂಗ್ರಹಗೊಂಡ ಸ್ಥಿರಾಸ್ತಿ ಹಾಗೂ ಕೋಟ್ಯಂತರ ಹಣವನ್ನು ಟ್ರಸ್ಟ್ ನಲ್ಲಿರುವ ಕೆಲವು ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡ ಆರೋಪವಿದೆ. ಹೀಗಾಗಿ ಮಠದ ಭಕ್ತರಿಂದ ಸಂಗ್ರಹವಾದ ಹಣದ ಬಗ್ಗೆ ಕೂಡಲೇ ಸಮರ್ಪಕ ಲೆಕ್ಕಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ಅನುಯಾಯಿಗಳು ಆಗಮಿಸಿ ಟ್ರಸ್ಟಿಗಳಿಗೆ ಛೀಮಾರಿ ಹಾಕಲಿದ್ದಾರೆ. ಪೊಲೀಸರು ಮಠದ ಕಳ್ಳರು, ಲೂಟಿಕೋರರಿಗೆ ರಕ್ಷಣೆ ನೀಡುತ್ತಿದ್ದಾರೆ.ಧರ್ಮದ ಲೆಕ್ಕ ನೀಡಬೇಕು”” ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ರಾಣೆಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ “2008 ರಿಂದ ಮಠದಲ್ಲಿ ಅವ್ಯವಹಾರ ನಡೆದಿದೆ. ಸರ್ಕಾರ ನೀಡಿದ 11 ಕೋಟಿಯಲ್ಲಿ 5 ಕೋಟಿ ಅವ್ಯವಹಾರ ನಡೆದಿದೆ. ಹಲವಾರು ಭಕ್ತರು ನೀಡಿರುವ ಹಣದಲ್ಲಿ ದುರುಪಯೋಗ ನಡೆದಿದೆ. ಸ್ಥಳೀಯ ಪಿಡಿಓ ಹಾಗೂ ಟ್ರಸ್ಟ್ ಸದಸ್ಯರ ಸಹಿ ದುರ್ಬಳಕೆ ಮಾಡಿಕೊಂಡು ಚಂದ್ರಶೇಖರ ಪೂಜಾರ್ ಅವ್ಯವಹಾರ ಮಾಡಿದ್ದಾರೆ.‌ ಈ ಬಗ್ಗೆ ಲೆಕ್ಕ ನೀಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಉಪಚುನಾವಣೆ ಅಸಮಾಧಾನ; ಕಾಂಗ್ರೆಸ್ ಮುಸ್ಲಿಂ ಮುಖಂಡರ ರಾಜೀನಾಮೆ ಸೂಚನೆ?

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಬಿಜೆಪಿ ಮುಖಂಡ ಅಜಯ್ ಕುಮಾರ್ ಪರಮೇಶ್ವರ್ ಗೌಡ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಬೀದರ್‌ | ಹಸ್ತಪ್ರತಿ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ: ನಾ.ಗೀತಾಚಾರ್ಯ

ರಾಜ್ಯದ ಅಮೂಲ್ಯ ಜ್ಞಾನಸಂಪತ್ತಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಮಗ್ರ ನೀತಿ...

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...