ದಾವಣೆಗೆರೆ | ಚಿತ್ರದುರ್ಗ ಜಿಲ್ಲೆಗೆ ಜಗಳೂರು?; ಶಾಸಕ ದೇವೇಂದ್ರಪ್ಪ ಹೇಳಿದ್ದೇನು?

Date:

ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸುವ ವಿಚಾರಕ್ಕೆ ನನ್ನ ಗಮನಕ್ಕಿಲ್ಲ. ತಾಲೂಕು ದಾವಣಗೆರೆ ಜಿಲ್ಲೆಯಲ್ಲೇ ಉಳಿಯಬೇಕು ಎಂಬ ಅಭಿಪ್ರಾಯಗಳೂ ಇವೆ. ಸಾರ್ವಜನಿಕರಿಗೆ ಎಲ್ಲಿ ಹಿತವೆನಿಸುತ್ತದೆಯೋ ಅವರ ಪರವಾಗಿ ನಾನು ಇರುತ್ತೇನೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ತಾಲೂಕು ಇರಬೇಕು ಎಂದು ಹೋರಾಟ ಸಮಿತಿಯು ಒತ್ತಾಯಿಸಿದೆ. “ಜಗಳೂರು ಚಿತ್ರದುರ್ಗಕ್ಕೆ ಮರು ಸೇರ್ಪಡೆಯಿಂದ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಬೇಕು. ಇದಕ್ಕೆ ಸಹಕಾರ ನೀಡಬೇಕು” ಎಂದು ಶಾಸಕರಿಗೆ ಮನವಿ ಸಲ್ಲಿಸಿದೆ.

ಹೋರಾಟಗಾರರ ಮನವಿ ಸ್ವೀಕರಿಸಿ ಅವರು ಮಾತನಾಡಿದರು. “ಜಗಳೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಾಗಿದೆ. ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಬರ ನಿರ್ವಹಣೆ ಮಾಡಬೇಕಾಗಿದೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ತೀರ್ಮಾನ ಕೈಗೊಳ್ಳಲಾಗುವುದು. ಕ್ಷೇತ್ರ ಮುಂದಿನ ಐದು ವರ್ಷಗಳಲ್ಲಿ ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರು ಸಂಪೂರ್ಣ ಸಹಕಾರ ನೀಡಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ತಾಲೂಕನ್ನು ಉಳಿಸುವ ಹೋರಾಟದ ಸಮಿತಿಯ ಮುಖಂಡ ಸುಭಾಷ್‌ಚಂದ್ರ ಭೋಸ್, ಹಿರಿಯ ವಕೀಲರಾದ ಬಸವರಾಜಪ್ಪ, ಶಿವನಗೌಡ, ಬಸಾಪುರ ರವಿಚಂದ್ರ, ಹೆಚ್.ಸಿ.ಮಹೇಶ್, ಜಿ.ಹೆಚ್. ಶಂಭುಲಿಂಗಪ್ಪ, ಚಂದ್ರನಾಯ್ಕ, ವೈ.ಎನ್.ಮಂಜುನಾಥ್, ಓಮಣ್ಣ, ದಿದ್ದಿಗೆ ಕರಿಬಸವನಗೌಡ, ನಾಗರಾಜ್‌ನಾಯಕ್, ಶಿವಕುಮಾರ್‌ಸ್ವಾಮಿ, ಗೋಗುದ್ದು ರಾಜು, ಗೋಡೆ ಪ್ರಕಾಶ್, ವೀರೇಂದ್ರ ಪಾಟೀಲ್, ಎಂ.ಎಸ್.ಪಾಟೀಲ್, ಡೆಂಕಪ್ಪ ಬಸವರಾಜ್, ಬೆಲ್ಲದ ಬಸವರಾಜ್, ಗಿರೀಶ್, ಜಗದೀಶ್‌ ಗೌಡ್ರು, ಹರೀಶ್, ದೀಪಕ್‌ ಪಾಟೀಲ್, ಅಸಗೋಡು ಸುರೇಶ್‌ ಗೌಡ್ರು, ಅಥ್‌ರ್, ಗುರುಮೂರ್ತಿ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಇಂಧನ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ವಿಜಯಪುರದಲ್ಲಿ ಎಸ್‌ಯುಸಿಐ ಕಾರ್ಯಕರ್ತರು ಪ್ರತಿಭಟನೆ...

ಹಾವೇರಿ | ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ

ಶ್ರೀಕಂಠಪ್ಪ ಬಡಾವಣೆಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ ಆಗ್ರಹಿಸಿ ಹಾವೇರಿ ನಗರದ ಹೊರವಲಯದ...

ಧಾರವಾಡ | ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಮೊಬೈಲ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ತುಂಬಿದ್ದ ಕಲ್ಲು ಕ್ವಾರಿಗೆ...